ಚಿಕ್ಕಮಗಳೂರು –
ತಿಳಿದೋ ತಿಳಿಯದೆಯೋ ಮಗ ಮಾಡಿದ ಆ ಸಣ್ಣ ಒಂದೇ ಒಂದು ಕೆಲಸ ಅಮ್ಮನೂ ಜೀವ ಕಳೆದುಕೊ ಳ್ಳುವಂತಾಗಿದೆ.ಹೀಗೆ ಮಾಡಿತಾ ಎಂಬ ಅನುಮಾನ ಕಾಡತಾ ಇದೆ.ಹೌದು ಇಂಥದೊಂದು ಅನಿಸಬಹು ದಾದ ಕರುಣಾಜನಕ ಪ್ರಸಂಗವೊಂದು ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದು ಹೋಗಿದೆ.ಪತಿ ಕೊನೆ ಯುಸಿರೆಳೆದ ಕೆಲವೇ ಕ್ಷಣಗಳಲ್ಲಿ ಪತ್ನಿಯೂ ಕೂಡಾ ಮೃತಪಟ್ಟಿದ್ದು ಇದರೊಂದಿಗೆ ದಂಪತಿ ಸಾವಲ್ಲೂ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ.

ಚಿಕ್ಕಮಗಳೂರಿನ ಕೋಟೆ ಬಡಾವಣೆಯ ಹರೀಶ್ -ಸೌಮ್ಯ ದಂಪತಿ ಮೃತಪಟ್ಟವರಾಗಿದ್ದಾರೆ. ನ್ಯುಮೋ ನಿಯಾ ದಿಂದ ಬಳಲುತ್ತಿದ್ದ ಹರೀಶ್ ನಗರದ ಆಸ್ಪತ್ರೆ ಯೊಂದಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆ ಯಲ್ಲಿ ಕೊನೆಯುಸಿರೆಳೆದರು.ಅಪ್ಪ ನಿಧನರಾದ ವಿಷಯವನ್ನು ಮಗ ಅಮ್ಮನಿಗೆ ಕರೆ ಮಾಡಿ ತಿಳಿಸಿದ ಪತಿ ಅಗಲಿದ ಸಂಗತಿಯನ್ನು ಏಕಾಏಕಿ ಕೇಳಿ ಆಘಾ ತಕ್ಕೆ ಒಳಗಾದ ಪತ್ನಿಯೂ ಹೃದಯಾಘಾತಕ್ಕೆ ಒಳಗಾ ಗಿ ಮೃತಪಟ್ಟಿದ್ದಾರೆ.ಒಟ್ಟಾರೆ ಮಗ ಮಾಡಿದ ಒಂದು ಚಿಕ್ಕದಾದ ಸಣ್ಣ ಆ ಒಂದು ತಪ್ಪಿನಿಂದಾಗಿ ಅತ್ತ ತಂದೆ ಆಸ್ಪತ್ರೆಯಲ್ಲಿ ಸಾವಿಗೀಡಾದರೆ ಇತ್ತ ಮನೆಯಲ್ಲಿ ತಾಯಿ ನಿಧನರಾದರು. ಅಪ್ಪ ಅಮ್ಮ ನನ್ನು ಕಳೆದು ಕೊಂಡ ಮಗ ಅನಾಥವಾಗಿದ್ದಾನೆ