ಬೆಂಗಳೂರು –
ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿತು ದೊಡ್ಡ ದುರಂತ – ಬಸ್ ಚಾಲಕನ ಪ್ರಾಣ ಉಳಿಸಿ ಬಸ್ ನಲ್ಲಿದ್ದ ಪ್ರಯಾಣಿಕರ ಪ್ರಾಣ ಉಳಿಸಿ ಸಾಮಾಜಿಕ ಜವಾಬ್ದಾರಿ ತೋರಿಸಿಕೊಟ್ಟ ಸಂಚಾರಿ ಪೊಲೀಸರು ಹೌದು
ಸಾಮಾನ್ಯವಾಗಿ ಪೊಲೀಸರು ಎಂದರೆ ಹಾಗೇ ಹೀಗೆ ಎನ್ನುವವರೇ ಹೆಚ್ಚು ಇದರ ನಡವೆ ಪೊಲೀಸರಲ್ಲೂ ಕೂಡಾ ಸಾಮಾಜಿಕ ಜವಾಬ್ದಾರಿ ಗಳು ಇರುತ್ತವೆ ಪೊಲೀಸರು ಮನಸ್ಸು ಮಾಡಿದರೆ ಏನೇಲ್ಲಾ ಮಾಡಬಹುದು ಎಂಬೊದಕ್ಕೆ ಬೆಂಗಳೂರಿನಲ್ಲಿ ನಡೆದ ಘಟನೆ ಸಾಕ್ಷಿ.
ಹೌದು ಬಸ್ ವೊಂದು ಚಲಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಆದರೆ ಪೊಲೀಸರ ಸಮಯಪ್ರಜ್ಞೆ.ಯಿಂದ ಬಸ್ ಚಾಲಕನ ಜೀವ ದೊಂದಿಗೆ ಬಸ್ ನಲಿಲ್ದ 45 ಕ್ಕೂ ಹೆಚ್ಚು ಜನರ ಜೀವವೂ ಕೂಡಾ ಉಳಿಸಿದ್ದಾರೆ. ಬಸ್ ಚಲಿಸುತ್ತಿ ರುವಾಗಲೇ ಸರ್ಕಾರಿ ಬಸ್ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡ ಘಟನೆ ನಡೆದಿದ್ದು
ಪೊಲೀಸರ ಸಮಯ ಪ್ರಜ್ಞೆ ಬಸ್‌ನಲ್ಲಿದ್ದ ಅಷ್ಟೊಂದು ಪ್ರಯಾಣಿಕರ ಜೀವ ಉಳಿಸಿದೆ. BMTC ಬಸ್ ಡ್ರೈವರ್ ವಿರೇಶ್ ಎಂದಿನಂತೆ KA51AJ6905 ನಂಬರಿನ ಬಸ್ ಚಲಾಯಿ ಸಿಕೊಂಡು ಹೊರಟಿದ್ದಾನೆ.ಬಸ್‌ನಲ್ಲಿ ಸುಮಾರು 45 ಜನ ಪ್ರಯಾಣಿಕರಿದ್ದರು. ಶಾಂತಿನಗರದ ಡಬಲ್ ರೋಡ್ ಬಳಿ ಬಸ್ ರನ್ನಿಂಗ್‌ನಲ್ಲಿದ್ದ ವೇಳೆ ಏಕಾಏಕಿ ಚಾಲಕ ವಿರೇಶ್‌ಗೆ ಎದೆನೋವು ಕಾಣಿಸಿಕೊಂಡಿದೆ.
ಇದರಿಂದ ವೇಗವಾಗಿ ಓಡುತ್ತಿದ್ದ ಬಸ್ ನಿಧಾನ ವಾಗ ತೊಡಗಿದೆ. ಅನುಮಾನಗೊಂಡು ದೂರ ದಿಂದಲೇ ಗಮನಿಸಿದ್ದ ಹಲಸೂರು ಟ್ರಾಫಿಕ್ ಎಎಸ್‌ಐ ಆರ್ ರಘುಕುಮಾರ್ ಬಸ್ ಬಳಿ ಓಡಿ ಬಂದಿದ್ದಾರೆ.ಬಂದು ನೋಡಿದಾಗ ಎದೆಗೆ ಕೈ ಹಿಡಿದು ಬಸ್ ಚಾಲಕ ಒಂದು ಕಡೆಗೆ ವಾಲಿದ್ದಾನೆ.
ಹಾರ್ಟ್ ಅಟ್ಯಾಕ್ ಆಗಿರುವುದನ್ನು ನೋಡಿ ಕೂಡಲೇ ಟ್ರಾಫಿಕ್ ಎಎಸ್‌ಐ ತಕ್ಷಣ ಹ್ಯಾಂಡ್ ಬ್ರೇಕ್ ಹಾಕಿ ಚಾಲಕನನ್ನು ಕೆಳಗೆ ಇಳಿಸಿ ಆಂಬುಲೆನ್ಸ್ ಗೂ ಕಾಯದೆ ಅಶೋಕ ನಗರ ಟ್ರಾಫಿಕ್ ಸಿಬ್ಬಂದಿ ಪ್ರಸನ್ನಕುಮಾರ್ ಸಹಾಯ ದಿಂದ ಬಸ್ ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ.
ಅದೃಷ್ಟವಶಾತ್ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಚಾಲಕ ವೀರೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೊತೆಗೆ ಪೊಲೀಸರ ಸಮಯಪ್ರಜ್ಞೆ 45 ಜನರ ಪ್ರಾಣ ವನ್ನೂ ಉಳಿಸಿದೆ.ಸಂಚಾರಿ ಪೊಲೀಸರ ಈ ಒಂದು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……