ಬೆಂಗಳೂರು –
7ನೇ ವೇತನ ಆಯೋಗದ ಬಗ್ಗೆ ಕಾದು ನೋಡದೆ ಮುಂದಿನ ನಿರ್ಧಾರವನ್ನು ಕೈಗೊಳ್ಳಿ ಷಡಾಕ್ಷರಿ ಯವರಿಗೆ ಕರೆ – ಕರ್ನಾಟಕ ರಾಜ್ಯ ಷಡಾಕ್ಷರಿ ಅಭಿಮಾನಿಗಳ ಬಳಗದ ಸರ್ವ ಸದಸ್ಯರ ಪರವಾಗಿ ರಾಜ್ಯ ಸಂಚಾಲಕ ಬೂದನೂರು ಮಹೇಶ ಮಂಡ್ಯ ಮನವಿ ಹೌದು
ರಾಜ್ಯದ ಸರ್ಕಾರಿ ನೌಕರರ ವೇತನ ಪರಿಷ್ಕ್ರ ರಣೆಗಾಗಿ ರಚನೆಗೊಂಡಿರುವ 7ನೇ ವೇತನ ಆಯೋಗವನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ.ಮಾರ್ಚ್ 15 ಕ್ಕೆ ಈ ಒಂದು ಆಯೋಗದ ಅವಧಿ ಮುಕ್ತಾಯವಾಗ ಲಿದ್ದು ಹೀಗಾಗಿ ಇದನ್ನು ಕಾಯದೇ ಮುಂದಿನ ಸೂಕ್ತವಾದ ನಿರ್ಧಾರವನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಿ ನೌಕರರ ಸಂಘಟನೆಯ ರಾಜ್ಯಾಧ್ಯಕ್ಷ ಷಡಾಕ್ಷರಿಯವರಿಗೆ ಕರೆನೀಡಲಾಗಿದೆ
ಹೌದು ಕರ್ನಾಟಕ ರಾಜ್ಯ ಷಡಾಕ್ಷರಿ ಅಭಿಮಾ ನಿಗಳ ಬಳಗದ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಸರ್ವ ಸದಸ್ಯರ ಪರವಾಗಿ ರಾಜ್ಯ ಸಂಚಾಲಕ ಬೂದನೂರು ಮಹೇಶ್ ಮಂಡ್ಯ ಅವರು ಮನವಿ ಮಾಡಿಕೊಂಡಿದ್ದಾರೆ.ಈ ಒಂದು ವಿಚಾರ ಕುರಿತಂತೆ ಸುಮ್ಮನೆ ಕಾದು ಕುಳಿತುಕೊಳ್ಳದೇ ಈ ಕೂಡಲೇ ಮುಂದಿನ ನಿರ್ಧಾರವನ್ನು ಕೈಗೊಳ್ಳುವಂತೆ ಕರೆ ನೀಡಿ ದ್ದಾರೆ
ವೇತನ ಆಯೋಗದ ವರದಿ ಪಡೆದು ಜಾರಿ ಗೊಳಿಸಲು ಮತ್ತೊಮ್ಮೆ ಮುಖ್ಯ ಮಂತ್ರಿಗಳನ್ನು ಹಾಗೂ ಉಪಮುಖ್ಯಮಂತ್ರಿ ಗಳನ್ನ ಒತ್ತಾಯಿ ಸಿರಿ.ಸ್ಪಂದಿಸದಿದ್ದರೆ ತಮ್ಮ ಧೃಡ ನಿರ್ಧಾರ ಪ್ರಕಟಿಸುವಂತೆ ಒತ್ತಾಯವನ್ನು ಮಾಡಿದ್ದಾರೆ.
ದಿನಾಂಕ-15-3-2024 ವೇತನ ಆಯೋಗ ವರದಿ ನೀಡಲು ಕಡೆಯ ದಿನವಾಗಿದೆ. ನೀವುಗಳು ಈಗಾಗಲೇ ಮುಖ್ಯಮಂತ್ರಿಗಳನ್ನು ಹಾಗೂ ಉಪ ಮುಖ್ಯಮಂತ್ರಿಗಳನ್ನು ಬೇಟಿಯಾಗಿ ಎಲ್ಲಾ ವಿಚಾರಗಳನ್ನು ಚರ್ಚೆ ಮಾಡಿದ್ದೀರಿ. ಬೆಂಗಳೂ ರಿನಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಮಾನ್ಯ ಮುಖ್ಯಮಂತ್ರಿ ಗಳು ಸರ್ಕಾರಿ ನೌಕರರ ಪರ ಇದ್ದೇವೆ ಎಂದು ಹೇಳಿದ್ದು
ತಾವು ಸಹ ಸಕ್ರಿಯವಾಗಿ ತುರ್ತಾಗಿ ಸರ್ಕಾರಿ ನೌಕರರ ಪರವಾಗಿ ಒಂದು ಧೃಡ ನಿರ್ಧಾರವನ್ನು ಪ್ರಕಟಿಸಬೇಕಾಗಿದೆ.ಹಾಗೂ ಮುಖ್ಯಮಂತ್ರಿಗ ಳನ್ನು ಹಾಗೂ ಉಪಮುಖ್ಯಮಂತ್ರಿಗಳನ್ನು ಬೇಟಿಯಾಗಿ ಮತ್ತು ಸರ್ಕಾರಿ ನೌಕರರ ಪರವಾಗಿ ವೇತನ ಆಯೋಗ ಜಾರಿಗೊಳಿಸಲು ಒತ್ತಾಯಿಸ ಲಾಗಿದೆ.
ಒಂದು ವೇಳೆ ಇನ್ನೂ ನಿಧಾನ ಆಗುತ್ತದೆ ಎಂದರೆ ತಮ್ಮ ಧೃಡ ನಿರ್ಧಾರ ತಿಳಿಸಿ ಕರ್ನಾಟಕ ರಾಜ್ಯದ ಸರ್ಕಾರಿ ನೌಕರರ ಎಲ್ಲಾ ಯೋಜನೆ ಶಾಖೆ, ತಾಲ್ಲೂಕು ಶಾಖೆ , ಜಿಲ್ಲಾ ಶಾಖೆಗಳಿಗೆ ಎಲ್ಲಾ ಅಂತಿಮ ನಿರ್ಧಾರಗಳಿಗೆ ಸಿದ್ದರಾಗಲು ಕರೆ ಕೊಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇವೆ ಹಾಗೂ ತಾವು ಕೈಗೊಳ್ಳುವ ನಿರ್ಧಾರಗಳಿಗೆ ಅಭಿಮಾನಿ ಗಳ ಬಳಗದ ಸಂಪೂರ್ಣ ಒಪ್ಪಿಗೆಯನ್ನು ಸೂಚಿಸಿ ದ್ದೇವೆ ಎಂದು
ಕರ್ನಾಟಕ ರಾಜ್ಯ ಷಡಾಕ್ಷರಿ ಅಭಿಮಾನಿಗಳ ಬಳಗದ ಸರ್ವ ಸದಸ್ಯರ ರಾಜ್ಯದ ಎಲ್ಲಾ ಘಟಕಗಳ ಪರವಾಗಿ ರಾಜ್ಯ ಸಂಚಾಲಕ ಬೂದನೂರು ಮಹೇಶ ಮಂಡ್ಯ ಕರೆ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..