ವಿಜಯಪುರ –
ಮತ ಎಣಿಕೆ ಸಂದರ್ಭದಲ್ಲಿ ನೋಡು ನೋಡುತ್ತಲೆ ಹೃದಯಾಘಾತಕ್ಕೊಳಗಾದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.ಅಭ್ಯರ್ಥಿ ಮೃತಪಟ್ಟ ಮೇಲೆ ಫಲಿತಾಂಶ ಹೊರ ಬಂದಿದೆ.ವಿಜಯಪುರ ಜಿಲ್ಲೆಯಲ್ಲೊಂದು ಇಂಥಹ ಹೃದಯ ವಿದ್ರಾವಕ ಘಟನೆ ನಡೆದಿದೆ.ಚುನಾವಣೆ ಮತ ಎಣಿಕೆ ಸಂದರ್ಭದಲ್ಲಿ ಫಲಿತಾಂಶದ ಟೆನ್ಶನ್ ಮಾಡಿಕೊಂಡು ಹಫೀಜ್ ಅಹ್ಮದ್ ಕುರೇಶಿ ಸಾವಿಗೀಡಾದ ಅಭ್ಯರ್ಥಿಯಾಗಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತೆನಹಳ್ಳಿ ಗ್ರಾ. ಪಂಚಾಯತಿಯ ವಾ. ನಂ. 1ರ ಅಭ್ಯರ್ಥಿಯಾಗಿ ಹಫೀಜ್ ಅಹ್ಮದ್ ಕುರೇಶಿ ಸ್ಪರ್ಧೆ ಮಾಡಿದ್ದರು.ಮತ ಕೇಂದ್ರದ ಎಣಿಕೆಯಲ್ಲಿ ಮತಗಳ ಏರುಪೇರು ಕಂಡು ಎದೆ ಬಡಿತ ಹೆಚ್ಚಾಗಿದೆ ಅಭ್ಯರ್ಥಿಗೆ ಎದೆನೋವು ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಯಿತು.

ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಮಯದಲ್ಲಿ ಮಾರ್ಗಮದ್ಯದಲ್ಲಿಯೇ ಹಫೀಜ್ ಅಹ್ಮದ ಕುರೇಶಿ ನಿಧನರಾದರು. ಬಳಿಕ ಫಲಿತಾಂಶ ಪ್ರಕಟ ಮಾಡಲಾಯಿತು. ಈಗ 3ನೇ ಬಾರಿ ಸ್ಪರ್ಧಿಸಿದ್ದರು ಹಫೀಜ್ ಅಹ್ಮದ ಕುರೇಶಿಗೆ 533 ಮತಗಳನ್ನು ಪಡೆದಿದ್ದಾರೆ.ಪ್ರತಿಸ್ಪರ್ಧಿಗೆ 457 ಮತಗಳನ್ನು ಪಡೆದಿದ್ದು ಈಗಾಗಲೇ ಒಂದು ಬಾರಿ ಗ್ರಾ. ಪಂ. ಅಧ್ಯಕ್ಷರಾಗಿದ್ದರು ಮತ್ತೋಂದು ಬಾರಿ ಸದಸ್ಯರಾಗಿದ್ದರು ಮತ ಎಣಿಕೆ ಫಲಿತಾಂಶದಿಂದ ಅಘಾತಕ್ಕೊಳಗಾದ ಅಭ್ಯರ್ಥಿ ಗೆಲುವಿನ ಫಲಿತಾಂಶ ನೋಡಲು ಇಲ್ಲದಂತಾಗಿದ್ದು ಆಯೋಗ ಮುಂದೆ ಏನು ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು