ಧಾರವಾಡ –
ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವಿಗೀಡಾದ ಘಟನೆ ಧಾರವಾಡ ಹೊರ ವಲಯದಲ್ಲಿ ನಡೆದಿದೆ.ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಮತ್ತಿಬ್ಬರು ಸಾವನ್ನಪ್ಪಿದ್ದಾರೆ
ಧಾರವಾಡ ತಾಲೂಕಿನ ತೇಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಒಂದು ಅಪಘಾತ ಸಂಭವಿಸಿದೆ.ಧಾರವಾಡದಿಂದ ದಾಬಾಕ್ಕೆ ಊಟಕ್ಕೆಂದು ಹೋಗಿದ್ದ ವಿನಯ್ ಹಿರೇಮಠ (24) ಹಾಗೂ ಸಂದೀಪ್ (29) ಮೃತರಾದ ವರಾಗಿದ್ದಾರೆ.
ಊಟ ಮಾಡಿಕೊಂಡು ಮರಳಿ ಬರುತ್ತಿದ್ದ ಸಂದರ್ಭದಲ್ಲಿ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಇದರಿಂದ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದರೆ ಮತ್ತೋರ್ವ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಘಟನಾ ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂ ಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..