ಚಿತ್ರದುರ್ಗ –
ರಸ್ತೆ ದಾಟುತ್ತಿದ್ದ ಪಾದಚಾರಿಗೆ ಇನೋವಾ ಕಾರೊಂದು ಡಿಕ್ಕಿಯಾದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.ಕಾರು ಡಿಕ್ಕಿಯಿಂದ ಇಪ್ಪತ್ತು ಅಡಿ ದೂರ ಪಾದಚಾರಿಯ ದೇಹ ಹಾರಿಬಿದ್ದಿದ್ದು ಕಂಡು ಬಂದಿತು.

ಪಾದಚಾರಿಗೆ ಗಂಭೀರವಾದ ಗಾಯಗಳಾಗಿದ್ದು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಟಿ. ನುಲೇನೂರು ಗೇಟ್ ನಲ್ಲಿ ಈ ಒಂದು ಘಟನೆ ನಡೆದಿದೆ.

ಆಕ್ಸಿಡೆಂಟ್ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರು ಡಿಕ್ಕಿಯಿಂದ ಹಾರಿಬಿದ್ದು ಪ್ರಜ್ಞೆ ಕಳೆದುಕೊಂಡ ವ್ಯಕ್ತಿ ನೋಡಿ ರಸ್ತೆ ಅಕ್ಕಪಕ್ಕದಲ್ಲಿದ್ದ ಜನರು ಆತಂಕಗೊಂಡಿದ್ದು ಕೂಡಾ ಕಂಡು ಬಂದಿತು.
ಬೋರನಹಳ್ಳಿ ರಾಮಣ್ಣ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯಾಗಿದ್ದು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಯಿಂದ ಪ್ರಾಣಾಪಾಯದಿಂದ ಪಾರಾಗಿದ್ದ ರಾಮಣ್ಣ ಕೊನೆಗೂ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವಿಗೀಡಾದರು.

ಬಿಜಿಹಳ್ಳಿ ಕಡೆಯಿಂದ ಟಿನಲೇನೂರು ಕಡೆಗೆ ರಸ್ತೆ ದಾಟುವಾಗ ಈ ಒಂದು ಘಟನೆ ನಡೆದಿದೆ.ಚಿತ್ರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.