ಬೆಂಗಳೂರು –
ದಿನೇಶ್ ಕಲ್ಲಳ್ಳಿ ಹೆಣ್ಣಿನ ಅಶ್ಲೀಲ ವೀಡಿಯೋ ಬಿಡುಗಡೆ ಮಾಡಿದ್ದಾರೆ. ಮುಲಾನಿಯವರು ಇನ್ನೂ ಕೆಲ ಸಿಡಿಗಳಿವೆ ಎಂದಿದ್ದಾರೆ. ಈ ಮೂಲಕ ಯುವತಿ ಕುಟುಂಬದ ಮರ್ಯಾದೆಯನ್ನು ತೆಗೆದಿದ್ದಾರೆ. ಹೀಗಾಗಿ ದಿನೇಶ್ ಕಲ್ಲಳ್ಳಿ ಹಾಗೂ ಮುಲಾನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಇದರಿಂದಾಗಿ ದಿನೇಶ್ ಕಲ್ಲಳ್ಳಿ, ಮುಲಾನಿಗೆ ಈಗ ಮತ್ತೊಂದು ಸಂಕಷ್ಟ ಎದುರಾದಂತೆ ಆಗಿದೆ.

ಇಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿದ ಕೆ.ಹೆಚ್.ಇಂದಿರಾ ಎಂಬುವರು ಅವರಿಬ್ಬರ ವಿರುದ್ಧ ದೂರು ನೀಡಿದ್ದಾರೆ. ಹೆಣ್ಣಿನ ಅಶ್ಲೀಲ ವೀಡಿಯೋ ಬಿಡುಗಡೆ ಮಾಡಿ, ಯುವತಿ ಕುಟುಂಬದ ಮರ್ಯಾದೆ ತೆಗೆದಿದ್ದಾರೆ.ಯುವತಿ ದೂರು ದಾಖಲಿಸೋ ಬದಲು, ದಿನೇಶ್ ಕಲ್ಲಳ್ಳಿ ದೂರು ದಾಖಲಿಸಿದ್ದಾರೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.


ಇನ್ನೂ ಮುಲಾನಿಯವರು ತಮ್ಮ ಬಳಿ ಮತ್ತಷ್ಟು ಸಿಡಿಗಳಿವೆ ಎಂಬುದಾಗಿ ಹೇಳುವ ಮೂಲಕ, ರಾಜ್ಯದಲ್ಲಿ ಮಹಿಳೆಯರ ಮಾನ ಹರಾಜು ಹಾಕುವಂತ ಕೆಲಸಕ್ಕೆ ಇಳಿದಿದ್ದಾರೆ. ಇದರಿಂದಾಗಿ ಮಹಿಳೆಯರು ಮರ್ಯಾದೆಯಿಂದ ಬದುಕೋದು ಕಷ್ಟವಾಗಿದೆ. ಹೀಗಾಗಿ ದಿನೇಶ್ ಕಲ್ಲಳ್ಳಿ ಹಾಗೂ ಮುಲಾನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.