ಕುಷ್ಟಗಿ –
ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಸಂಘದಲ್ಲಿ ಹಣವನ್ನು ದುರುಪಯೋಗ ಮಾಡಿಕೊಂಡು ಗೋಲ್ ಮಾಲ್ ಮಾಡಿದ ಆರೋಪದ ಮೇಲೆ ಸಂಘದ ಪ್ರಧಾನ ಕಾರ್ಯ ದರ್ಶಿ ಹಾಗೂ ಲೆಕ್ಕಿಗ ರ ಮೇಲೆ ದೂರು ದಾಖಲಾದ ಘಟನೆ ಕೊಪ್ಪಳ ದಲ್ಲಿ ನಡೆದಿದೆ.ಹೌದು ಇಲ್ಲಿನ ಗುರು ಭವನದಲ್ಲಿರುವ ಕುಷ್ಟಗಿ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಗೋಲಮಾಲ್ ನಲ್ಲಿ 89,79,721 ರೂ.ದುರಪಯೋಗದ ಹಿನ್ನೆಲೆಯಲ್ಲಿ ಸಂಘದ ಕಾರ್ಯದರ್ಶಿ ಹಾಗೂ ಲೆಕ್ಕಿಗನ ವಿರುದ್ದ ದೂರು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಬಸವ ರಾಜ್ ಹೊರಪೇಟಿ,ಲೆಕ್ಕಿಗ ಸುಧೀಕುಮಾರಗೋನಾಳಮಠ ಕಳೆದ 2004 ರಿಂದ ಕಾರ್ಯನಿರ್ವಹಿಸುತ್ತಿದ್ದರು.ಕಳೆದ 31-12-2019 ರಂದು, 2018-19ನೇ ಸಾಲಿನಲ್ಲಿ 89,79,721 ರೂ. ವ್ಯತ್ಯಾಸವಾಗಿದೆ ಎಂದು ಲೆಕ್ಕಪರಿಶೋ ಧನಾ ವರದಿ ನೀಡಿದೆ.ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಕಲಂ 64, ಕ.ಸ.ಸಂ. ಕಾಯ್ದೆ 1959 ರ ವಿಚಾರಣ ವರದಿ ಯ ಮೇಲೆ ಕಲಂ 68 ಕ.ಸ.ಸಂ 1959 ತನಿಖಾ ಆದೇಶದ ಮೇರೆಗೆ ಹಣ ದುರಪಯೋಗವಾಗಿರುವ ಬಗ್ಗೆ ಕೊಪ್ಪಳದ ಸಹಕಾರ ಇಲಾಖೆಯ ಉಪ ನಿಭಂಧಕರು ಸದರಿಯವರ ಮೇಲೆ ಕಾನೂನು ಕ್ರಮದ ಆದೇಶ ನೀಡಿದ್ದರು.

ಸದರಿ ಆದೇಶದ ಹಿನ್ನೆಲೆಯಲ್ಲಿ 13-2-2022ರಂದು ವಿಶೇಷ ಸಭೆಯಲ್ಲಿ ಆಡಳಿತ ಮಂಡಳಿಯಲ್ಲಿ ನಿರ್ಣಯಿ ಸಿದಂತೆ ಮೂರು ಬಾರಿ ನೋಟೀಸ್ ನೀಡಿದ್ದರೂ ದುರಪ ಯೋಗ ಮಾಡಿದ ಮೊತ್ತ ಮರು ಪಾವತಿಸಿಲ್ಲ.ಪ್ರಾಥಮಿಕ ಪತ್ತಿನ ಶಿಕ್ಷಕರ ಸಂಘಕ್ಕೆ ಹಾಗೂ ಶೇರುದಾರರಿಗೆ ಮೋಸ, ನಕಲಿ ಖಾತೆ ಸೃಷ್ಟಿಸಿ ಸಂಘಕ್ಕೆ ಮೋಸ ಮಾಡಿದ ಆರೋಪಿ ಗಳಾದ ಕಾರ್ಯದರ್ಶಿ ಬಸವರಾಜ ಹೊರಪೇಟಿ,ಲೆಕ್ಕಿಗ ಸುಧೀರಕುಮಾರ ಗೋನಾಳಮಠ ವಿರುದ್ದ ದೂರು ದಾಖಲಿಸಲಾಗಿದೆ.