ಹಾವೇರಿ –
ಕಂಟೇನರ್ ಲಾರಿಗೆ ವ್ಯಾಗನಾರ್ ಕಾರ್ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವಿಗೀಡಾದ ಘಟನೆ ಹಾವೇರಿಯಲ್ಲಿ ನಡೆದಿದೆ.ಹಾವೇರಿ ರಾಣೆಬೆನ್ನೂರು ಹೊರವಲಯದಲ್ಲಿರೋ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಈ ಒಂದು ಘಟನೆ ನಡೆದಿದೆ.

ರಸ್ತೆ ಪಕ್ಕದಲ್ಲಿ ನಿಂತುಕೊಂಡಿದ್ದ ಕಂಟೇನರ್ ಲಾರಿಗೆ ವ್ಯಾಗನಾರ್ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ಹೊರವಲಯದಲ್ಲಿರೋ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಈ ಘಟನೆ ನಡೆದಿದೆ.ಕಾರಿನಲ್ಲಿದ್ದ ಮತ್ತೋರ್ವ ಮಹಿಳೆಗೆ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಕೆ.ಎನ್.ಹನುಮಂತಪ್ಪ 60 ವರ್ಷ, ಗೀತಮ್ಮ 50 ವರ್ಷ ಮತ್ತು ಶಿವಾನಿ 11 ವರ್ಷ ಮೃತರಾಗಿದ್ದಾರೆ.
ಮೃತರೆಲ್ಲರೂ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕುಂಬಳೂರು ಗ್ರಾಮದವರಾಗಿದ್ದಾರೆ.

ಹುಬ್ಬಳ್ಳಿಯಲ್ಲಿ ಮದುವೆ ಮುಗಿಸಿಕೊಂಡು ಊರಿಗೆ ವಾಪಸ್ ಹೋಗುತ್ತಿದ್ದ ವೇಳೆ ಈ ಒಂದು ದುರ್ಘಟನೆ ನಡೆದಿದೆ.ವಿಷಯ ತಿಳಿದ ಹಲಗೇರಿ ಪಿಎಸ್ಐ ಮಂಜುನಾಥ ಮತ್ತು ಸಿಪಿಐ ಭಾಗ್ಯವಂತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.