ಬಾಗಲಕೋಟೆ –
ಮಹಾಮಾರಿ ಕೋವಿಡ್ ಗೆ ದಂಪತಿಗಳಿ ಬ್ಬರು ಮೃತರಾಗಿರುವ ಘಟನೆ ಬಾಗಲಕೋಟೆ ಯಲ್ಲಿ ನಡೆದಿದೆ.ರಾಮಪ್ಪ ಹೂಗಾರ, ದುಂಡವ್ವ ಹೂಗಾರ ಮೃತರಾದ ದಂಪತಿಗಳಾಗಿದ್ದಾರೆ.ಹಿಂದಿನ ಶನಿವಾರ ರಂದು ಪತಿ ದುಂಡಪ್ಪ ಸಾವಿಗೀಡಾಗಿದರೆ ಇಂದು ಅವರ ಪತ್ನಿ ದುಂಡವ್ವ ಮೃತರಾದರು ಎಂಟು ಜನ ಮಕ್ಕಳನ್ನು ಅಗಲಿದ್ದಾರೆ ಈ ದಂಪತಿಗಳು.

ಏಳು ಜನ ಹೆಣ್ಣು ಮಕ್ಕಳು ಓರ್ವ ಗಂಡು ಮಗ ಈ ದಂಪತಿಗಳಿಗೆ ಇದ್ದಾರೆ.ಈಗಾಗಲೇ ಆರು ಜನ ಹೆಣ್ಣು ಮಕ್ಕಳ ಮದುವೆಯಾಗಿದೆ.ಇನ್ನೊರ್ವ 16 ವರ್ಷದ ಪುತ್ರಿ ಹೆಣ್ಣು ಮಗಳು,17 ವರ್ಷದ ಮಗ ಇದ್ದಾರೆ.

ತಂದೆ ತಾಯಿ ಕಳೆದುಕೊಂಡು ಅನಾಥರಾಗಿದ್ದಾರೆ ಮಕ್ಕಳು.ಜಿಲ್ಲೆಯ ಸಾವಳಗಿ ಗ್ರಾಮದಲ್ಲಿ ಈ ಒಂದು ಘಟನೆ ಮೊದಲು ರಾಮಪ್ಪ ಹೂಗಾರ ಗೆ ಸೊಂಕು ಕಾಣಿಸಿಕೊಂಡು ಚಿಕಿತ್ಸೆ ಫಲಿಸದೆ ಸಾವಿಗೀಡಾದರೆ ನಂತರ ಪತಿಯ ಆರೈಕೆ ಮಾಡುತಿದ್ದ ಪತ್ನಿಗೂ ಸೊಂಕು ತಗುಲಿ ವಾರದ ಬಳಿಕ ಸಾವಿಗೀಡಾಗಿದ್ದಾರೆ
ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿ ದ್ದಾರೆ.ತಂದೆ ತಾಯಿ ಗಾಗಿ ಎಂಟು ಲಕ್ಷ ಹಣ ಖರ್ಚು ಮಾಡಿದರೂ ಬದುಕಲಿಲ್ಲ ಇಬ್ಬರು.