ನರಗುಂದ –
ದಂಪತಿಗಳಿಬ್ಬರು ಶಿಕ್ಷಕ ವೃತ್ತಿಯಿಂದ ಒಂದೇ ದಿನ ನಿವೃತ್ತರಾದ ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ.ಹೌದು ಎಲ್ಲರಿಗೂ ಜನಮೆಚ್ಚಿ ದ ಶಿಕ್ಷಕರಾಗಿ ಹೆಸರು ಪಡೆದಿದ್ದ ಎಚ್.ಎಸ್. ಬೆಳ ಕೊಪ್ಪದ ಮತ್ತು ಪಿ.ಎಂ.ಹುಬ್ಬಳ್ಳಿ ಶಿಕ್ಷಕ ದಂಪತಿ ವೃತ್ತಿಯಿಂದ ಒಂದೇ ದಿನ ನಿವೃತ್ತರಾಗಿದ್ದಾರೆ. ಇವರಿ ಬ್ಬರೂ ಕೂಡ ನರಗುಂದ ತಾಲ್ಲೂಕಿನಲ್ಲಿ ಬರೋಬ್ಬರಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ವಿಶೇಷ ವಾಗಿದೆ.

ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರಥಮ ಬಾರಿಗೆ ಕನ್ನಡ ಭಾಷಾ ಕಲಿಕೆ ಶಿಕ್ಷಕಿಯಾಗಿ ನೇಮಕಗೊಂಡ ಹುಬ್ಬಳ್ಳಿಯವರು 18 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದು, ಸಾವಿ ರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ಮುಖ್ಯೋಪಾಧ್ಯಾಯರಾಗಿ ಬಡ್ತಿ ಹೊಂದಿ ಕುರ್ಲ ಗೇರಿ ಸರ್ಕಾರಿ ಪ್ರೌಢಶಾಲೆ ಹಾಗೂ ಪಟ್ಟಣದ ಉರ್ದು ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋ ಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ನೇಮಕಗೊಂಡ ಎಚ್.ಎಸ್. ಬೆಳಕೊಪ್ಪದ ಅವರು ಕಲಘಟಗಿ ತಾಲ್ಲೂಕಿನ ದೇವಿಕೊಪ್ಪದಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದರು. ನಂತರದ 25 ವರ್ಷಗಳ ಕಾಲ ನರಗುಂದ ತಾಲ್ಲೂ ಕಿನ ಹಿರೇಕೊಪ್ಪ ಹಾಗೂ ಕಣಕಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.ಕೊಕ್ಕೊ ತರಬೇತಿಯಲ್ಲಿ ಪರಿಣತರಾದ ಇವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಪಟು ಗಳನ್ನು ರೂಪಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿ ದ್ದಾರೆ. ಅಲ್ಲದೆ, ಇವರಿಂದ ಮಾರ್ಗದರ್ಶನ ಪಡೆದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತೀಯ ಸೇನೆ ಸೇರಿದ್ದಾರೆ.