ನೆಲಮಂಗಲ –
ನೆಲಮಂಗಲ ತಾಲ್ಲೂಕು ಗೋವಿನಹಳ್ಳಿ ಸರಕಾರಿ ಶಾಲೆ ಯಲ್ಲಿ ಮುಖ್ಯಶಿಕ್ಷಕ ವೀರಮಲ್ಲಯ್ಯ(59) ಅವರ ಮೇಲೆ ಕೊನೆಗೂ ದೂರು ದಾಖಲಾಗಿದೆ.ಹೌದು ಮೂಲತಃ ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿ ವ್ಯಾಪ್ತಿಯ ರಂಗಾಪುರ ಗ್ರಾಮದ ನಿವಾಸಿಯಾಗಿರುವ ಇವರು ಮೂಲತಃ ಪ್ರವರ್ಗ-2(A) ರಲ್ಲಿ ಬರುವ ಕುರುಬ ಸಮು ದಾಯಕ್ಕೆ ಸೇರಿದ್ದು ಎಂದು ಕೊರಟಗೆರೆ ತಹಶಿಲ್ದಾರ್ ರಿಂದ 1985 ಸೆಪ್ಟೆಂಬರ್ 20 ರಂದು ಐಸಿಸಿ ಆರ್/37/1985- 86 ರ ಪರಿಶಿಷ್ಟ ಪಂಗಡದ ಕಾಡ ಕುರುಬ ಎಂಬ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಕೊಂಡು ಸರಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಿ ಪರಿಶಿಷ್ಟ ಪಂಗಡದ ಮೀಸಲಾತಿ ಕೋಟಾದ ಲ್ಲಿಯೇ ಶಾಲಾ ಶಿಕ್ಷಕನಾಗಿ ನೇಮಕವಾಗಿದ್ದರು.
ಈ ಕುರಿತಂತೆ ದೂರು ಬಂದ ಹಿನ್ನಲೆಯಲ್ಲಿ ತನಿಖೆ ಮಾಡಿದ ಇಲಾಖೆಯ ಅಧಿಕಾರಿಗಳ ದೂರಿನ ಹಿನ್ನಲೆಯಲ್ಲಿ ಸಧ್ಯ ಇವರ ಮೇಲೆ ದೂರನ್ನು ದಾಖಲಿಸಲಾಗಿದೆ.ತುಮಕೂರು ಡಿಸಿಆರ್ ಇ ಘಟಕದ ಪೋಲಿಸ್ ಇನ್ಸ್ಪೆಕ್ಟರ್ ಮಹಮ್ಮದ್ ಸಲೀಂ ನೀಡಿದ ದೂರಿನ ಅನ್ವಯ ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೊರಟಗೆರೆ ಪಿಎಸ್‌ಐ ನಾಗರಾಜು ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತುಮಕೂರು ನಾಗರೀಕ ಹಕ್ಕು ಜಾರಿ ನಿರ್ದೇಶನಾ ಲಯಕ್ಕೆ ವರ್ಗಾಯಿಸಲಾಗಿದೆ.
ದೂರು ದಾಖಲಿಸಿ ಮುಂದಿನ ತನಿಖೆಯ ಬಗ್ಗೆ ತುಮಕೂರು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಘಟಕಕ್ಕೆ ವರ್ಗಾವಣೆ ಆಗಿದೆ