ಶಿರಾ –
ತುಮಕೂರಿನ ಶಿರಾದಲ್ಲಿ ಶಾಲೆಯಿಂದ ಮನೆಗೆ ಹೊರಟಿದ್ದ ಶಿಕ್ಷಕರೊಬ್ಬರು ಬೈಕ್ ನೊಂದಿಗೆ ಏಕಾಎಕಿಯಾಗಿ ಬಂದ ಹಳ್ಳದಲ್ಲಿ ನಿನ್ನೆ ಕೊಚ್ಚಿಕೊಂಡು ಹೋಗಿದ್ದರು.ಹೌದು ಚನ್ನನ ಕುಂಟೆ ಗ್ರಾಮದಲ್ಲಿ ಈ ಒಂದು ಘಟನೆ ನಿನ್ನೆ ನಡೆದಿತ್ತು. ಮನೆಗೆ ಹೊರಟಿದ್ದ ಶಿಕ್ಷಕ ಆರೀಫ್ ಉಲ್ಲಾ ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ನಂತರ ಕಾರ್ಯಾಚರಣೆ ಮಾಡಿ ಹಳ್ಳದ ಮುಳ್ಳಿನ ಕಂಟೆಯಲ್ಲಿ ಸಿಲುಕಿಕೊಂಡಿದ್ದ ಶಿಕ್ಷಕನ ಮೃತ ದೇಹವು ಪತ್ತೆಯಾಗಿದೆ.
ಭಾರಿ ಮಳೆಗೆ ಹಳ್ಳ ಹರಿಯುವ ಸಂದರ್ಭದಲ್ಲಿ ದಾಟಲು ಹೋಗಿ ಏಕಾಎಕಿಯಾಗಿ ಬಂದ ಈ ಒಂದು ನೀರಿನಿಂದಾಗಿ ದುರಂತ ಸಂಭವಿಸಿತ್ತು ನಂತರ ಸುದ್ದಿ ತಿಳಿದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ವಿಚಾರ ತಿಳಿದು ಕಾರ್ಯಾಚರಣೆ ಮಾಡಿ ಕೊನೆಗೂ ಹಳ್ಳದ ಸ್ವಲ್ಪು ಕೆಳ ಭಾಗದಲ್ಲಿ ಈ ಒಂದು ಶಿಕ್ಷಕನ ಮೃತ ದೇಹ ಪತ್ತೆಯಾಗಿದ್ದು ಶಿರಾ ನಗರದ ನಿವಾಸಿಯಾಗಿದ್ದ ಇವರು ಶಾಲೆ ಮುಗಿಸಿ ಕೊಂಡು ವಾಪಸ್ಸು ಹೋಗುವಾಗ ಈ ಒಂದು ಘಟನೆ ನಡೆದಿತ್ತು
ಶಿರಾ ನಗರಕ್ಕೆ ಬರುತ್ತಿರುವಾಗ ಸಮಯದಲ್ಲಿ ರಸ್ತೆಯಲ್ಲಿ ರುವ ಹಳ್ಳ ದಾಟುವ ಸಮಯದಲ್ಲಿ ತಮ್ಮ ವಾಹನ ಅಯಾ ತಪ್ಪಿ ಕೊಚ್ಚಿಕೊಂಡು ಹೋಗಿದ್ದರು.ನಗರದ ದೊಡ್ಡ ಕೆರೆ ನೀರು ಹರಿಯುವ ಹಳ್ಳವು ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ನಾಲೆ ತುಂಬಿ ಹರಿಯುತ್ತಿತು
ಈ ವೇಳೆ ಹಳ್ಳ ದಾಟುವ ಸಮಯದಲ್ಲಿ ನೀರಿನಲ್ಲಿ ಕೊಚ್ಚಿ ಕೊಂಡು ಹೋಗಿದ್ದರು ಈ ಸಂಬಂಧ ಶಿರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಕೊನೆಗೂ ಶಿಕ್ಷಕರ ಮೃತ ದೇಹವು ಪತ್ತೆಯಾಗಿದ್ದು ಜಿಲ್ಲೆಯ ಶಿಕ್ಷಕ ಬಂಧುಗಳು ಸೇರಿದಂತೆ ಇಲಾಖೆಯ ಅಧಿಕಾರಿಗಳು ಶಿಕ್ಷಕರು ಭಾವಪೂರ್ಣ ನಮನ ಸಲ್ಲಿಸಿ ಸಂತಾಪವನ್ನು ಸೂಚಿಸಿದ್ದಾರೆ.