ವರ್ಗಾವಣೆಗಾಗಿ ಶಿಕ್ಷಣ ಸಚಿವರನ್ನು ಭೇಟಿಯಾಗಿ ಶಿಕ್ಷಕ ನಿಯೋಗ – ಈ ಕೂಡಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭ ಮಾಡುವಂತೆ ಒತ್ತಾಯಿಸಿದ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕ…..

Suddi Sante Desk
ವರ್ಗಾವಣೆಗಾಗಿ ಶಿಕ್ಷಣ ಸಚಿವರನ್ನು ಭೇಟಿಯಾಗಿ ಶಿಕ್ಷಕ ನಿಯೋಗ – ಈ ಕೂಡಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭ ಮಾಡುವಂತೆ ಒತ್ತಾಯಿಸಿದ  ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕ…..

ಬೆಂಗಳೂರು

ವರ್ಗಾವಣೆ ಗಾಗಿ ಶಿಕ್ಷಕರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಯಾಗಿ ವರ್ಗಾವಣೆ ಪ್ರಕ್ರಿಯೆ ಯನ್ನು ಆರಂಭ ಮಾಡುವಂತೆ ಆಗ್ರಹ ವನ್ನು ಮಾಡಿದರು ಹೌದು ರಾಜ್ಯದ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕ (ರಿ) ಹುಬ್ಬಳ್ಳಿ ವತಿಯಿಂದ ಶಿಕ್ಷಕರ ನಿಯೋಗವ  ಭೇಟಿಯಾಗಿ ಈ ಒಂದು ಆಗ್ರಹ ವನ್ನು ಮಾಡಲಾಯಿತು. 2024-25 ನೇ ಸಾಲಿನ‌ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ವಲಯ ವರ್ಗಾವಣೆ ಕೈಗೊಳ್ಳಲು ಮನವಿಯನ್ನು ಮಾಡ ಲಾಯಿತು‌.

ಕರ್ನಾಟಕ ಶಿಕ್ಷಕರ ವರ್ಗಾವಣೆ ಮತ್ತು ನಿಯಂತ್ರಣ ಕಾಯ್ದೆ 2007 ತಿದ್ದುಪಡಿ ಅಧಿನಿ ಯಮ 2022 ಒಂದು ವರ್ಷ ಹೆಚ್ಚುವರಿ ವರ್ಗಾವಣೆ ನಂತರದ ವರ್ಷ ವಲಯ ವರ್ಗಾವಣೆ ನಡೆಸುವುದು ಎಂದು ಹೇಳುತ್ತದೆ ಕಳೆದ ವರ್ಷ ಹೆಚ್ಚುವರಿ ವರ್ಗಾವಣೆ ಮಾಡಿ ರುವುದರಿಂದ ಈ ವರ್ಷ ವಲಯ ವರ್ಗಾವಣೆ ಮಾಡಬೇಕು ಆದರೆ ಈ ವರ್ಷದ ವರ್ಗಾವಣೆಯ ಲ್ಲಿ ವಲಯ ವರ್ಗಾವಣೆ ಕೈಬಿಟ್ಟಿರುವುದು ದುರ ದೃಷ್ಟಕರ ಎಂಬ ನೋವನ್ನು ಸಚಿವರ ಮುಂದೆ ಶಿಕ್ಷಕರು ಹೇಳಿಕೊಂಡರು.

ಕಳೆದ ವರ್ಷ ಹೆಚ್ಚುವರಿ ವರ್ಗಾವಣೆಯೂ ಕೂಡ ಶೈಕ್ಷಣಿಕ ವರ್ಷದ ಮಧ್ಯದಲ್ಲಿಯೇ ನಿಯಮಾನು ಸಾರ ಮಾಡಿದ ಅಧಿಕಾರಿಗಳು ಈ ವರ್ಷ ವಲಯ ವರ್ಗಾವಣೆಗೆ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಬೇಡ ಎಂದು ಹೇಳುತ್ತಿರುವುದು ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರ ನೋವಿಗೆ ಕಾರಣವಾಗಿದೆ

ಗ್ರಾಮೀಣ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿ ರುವ ನೌಕರರಿಗೆ ಮನೆ ಬಾಡಿಗೆ ಭತ್ಯೆ ಕಡಿಮೆ ಹಾಗೂ ಗ್ರಾಮೀಣ ಪರಿಹಾರ ಭತ್ಯೆ ಕೂಡ ಇಲ್ಲ ಹೀಗಾಗಿ ನಗರ ಪ್ರದೇಶಗಳಲ್ಲಿ ಕೆಲಸ ನಿರ್ವಹಿ ಸುತ್ತಿರುವ ಶಿಕ್ಷಕರು ಗ್ರಾಮೀಣ ಪ್ರದೇಶಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ

ನಮ್ಮ ಸಂಘದ ವತಿಯಿಂದ ಕಳೆದ ಐದು ವರ್ಷ ಗಳಿಂದ ನಿರಂತರವಾಗಿ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಗ್ರಾಮೀಣ ಪರಿಹಾರ ಭತ್ಯೆ ನೀಡಲು ನಿರಂತರ ಹಕ್ಕೋತ್ತಾಯ ಮಾಡಿ ದರು ಸರ್ಕಾರ ನಮ್ಮ ಕಡೆ ತಿರುಗಿಯೂ ನೋಡು ತ್ತಿಲ್ಲ ಸಮಾನ ಕೆಲಸಕ್ಕೆ ಸಮಾನ ವೇತನ ಇಲ್ಲದೆ ಗ್ರಾಮೀಣ ಪ್ರದೇಶದ ಶಿಕ್ಷಕರು ಅನ್ಯಾಯಕ್ಕೆ ಒಳಗಾಗಿದ್ದಾರೆ

ಕರ್ನಾಟಕ ಶಿಕ್ಷಕರ ವರ್ಗಾವಣೆ ಮತ್ತು ನಿಯಂ ತ್ರಣ ಕಾಯ್ದೆಯ ನಿಯಮಗಳನ್ನು ಗಾಳಿಗೆ ತೂರಿ ವಲಯ ವರ್ಗಾವಣೆ ಬಿಟ್ಟು ಕೇವಲ ಸಾಮಾನ್ಯ ವರ್ಗಾವಣೆ ಮಾಡುತ್ತಿರುವುದು ಗ್ರಾಮೀಣ ಶಿಕ್ಷಕರ ಮೇಲೆ ಗದಾ ಪ್ರಹಾರ ಮಾಡಿದ ಹಾಗೆ ಆಗುತ್ತಿದೆ

ಆದ್ದರಿಂದ ನಿಯಮಾನುಸಾರ ಈ ವರ್ಷ ವಲಯ ವರ್ಗಾವಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ವಿನಂತಿಸಿಕೊಳ್ಳುತ್ತೇವೆ ಎಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾದ್ಯಕ್ಷರಾದ ಶರಣಪ್ಪಗೌಡ ಆರ್ ಕೆ, ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಹಾಲೇಶ ನವುಲೆ ಪ್ರಮುಖರಾದ ಮಲ್ಲಿಕಾರ್ಜುನ ಉಪ್ಪಿನ ಎಲ್ ಐ ಲಕ್ಕಮ್ಮನವರ ಮಹ್ಮದರಫಿ ಕೆ ಕೊಟ್ರತ್ಯ, ಸಿದ್ದಣ್ಣ ಉಕ್ಕಲಿ, ಹನುಮಂತಪ್ಪ ಮೇಟಿ, ಅಕ್ಬರಲಿ ಸೋಲಾಪುರ, ಎಸ್ ಎಫ್ ಪಾಟೀಲ ಆರ್ ನಾರಾಯಣಸ್ವಾಮಿ, ಡಿ ಎಸ್ ಭಜಂತ್ರಿ, ಸುರೇಶ ಗೆಜ್ಜೂರಿ ಎಂ ಬಿ ಯಾದೂಸಾಬನವರ, ಎಚ್ ಕೆ ಹಲವಾಗಲಿ, ಸೋಮಶೇಖರ್ ಎಂ ಎನ್ ಶ್ರೀನಿವಾಸ, ಸೇರಿದಂತೆ ಹಲವರು ಈ ಒಂದು ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.