ಬೆಂಗಳೂರು –
ಕರೊನಾ ಲಸಿಕೆಯನ್ನು ಅಕ್ರಮವಾಗಿ ಮಾರಾಟ ಮಾಡಲು ಹೋಗಿ ವೈದ್ಯೆಯೊಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆ ದಿದೆ. ಹೌದು ವೈದ್ಯೆ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಬೆಂಗಳೂರಿನ ಮಂಜುನಾಥನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಪುಷ್ಪಿ ತಾ (25) ಹಾಗೂ ಈಕೆಗೆ ಸಹಕರಿಸುತ್ತಿದ್ದ ಪ್ರೇಮಾ (34) ಬಂಧಿತರಾಗಿದ್ದಾರೆ
ಮಂಜುನಾಥನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿ ಸುತ್ತಿದ್ದ ಡಾ.ಪುಷ್ಪಿತಾ, ಪ್ರೇಮಾ ಏ. 23 ರಿಂದ ಈ ಒಂದು ದಂಧೆಯಲ್ಲಿ ತೊಡಗಿದ್ದು ಕೊನೆಗೂ ಸಿಕ್ಕಿಬಿ ದ್ದಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬರು ತ್ತಿದ್ದ ಲಸಿಕೆಯನ್ನು ಕದ್ದು ಪ್ರೇಮಾ ಮನೆಯಲ್ಲಿ ಅಕ್ರ ಮವಾಗಿ ದಾಸ್ತಾನು ಇರಿಸುತ್ತಿದ್ದ ಪುಷ್ಪಿತಾ, ಬಳಿಕ ಅದನ್ನು ಒಂದಕ್ಕೆ 500 ರೂಪಾಯಿ ಪಡೆದು ಹಾಕಿಸು ತ್ತಿದ್ದರು.
ಕರೊನಾ ಲಸಿಕೆ ಅಕ್ರಮವಾಗಿ ಮಾರಾಟ ಮಾಡುತ್ತಿ ರುವ ಕುರಿತು ಮಾಹಿತಿ ಪಡೆದ ಅನ್ನಪೂ ರ್ಣೇಶ್ವರಿನ ಗರ ಪೊಲೀಸರು ಲಸಿಕೆ ಪಡೆಯುವ ನೆಪದಲ್ಲಿ ಪ್ರೇಮಾ ಮನೆಗೆ ತೆರಳಿ ರೆಡ್ ಹ್ಯಾಂಡೆಡ್ ಆಗಿ ಹಿಡಿದು ವಶಕ್ಕೆ ಪಡೆದಿದ್ದಾರೆ.
ಅನ್ನಪೂರ್ಣೇಶ್ವರಿನಗರ ಪೊಲೀಸ್ ಇನ್ಸ್ಪೆಕ್ಟರ್ ಲೋಹಿತ್ ಲಸಿಕೆ ಪಡೆಯುವ ನೆಪದಲ್ಲಿ ತೆರಳಿ ಈ ಕಾರ್ಯಾಚರಣೆ ನಡೆಸಿದ್ದಾರೆ.ಆರೋಪಿಗಳಿಂದ ಒಂದು ವ್ಯಾಕ್ಸಿನ್ ಕ್ಯಾರಿಯರ್ ಬಳಸಿದ ಹಾಗೂ ಬಳಸದ ಸಿರಿಂಜ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.