ದಾವಣಗೆರೆ –
ಈವರೆಗೆ ಅವರಿವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಯನ್ನು ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ವಂಚಕರು ಈಗ ದಾವಣಗೆರೆ ಎಸ್ಪಿ ಹನುಮಂತರಾಯ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ವಿಚಾರ ಈಗ ಬೆಳಕಿಗೆ ಬಂದಿದೆ.ಹೌದು ನಕಲಿ ಖಾತೆ ತೆರೆದು ದುಷ್ಕರ್ಮಿಗಳಿಂದ ವಂಚನೆ ಯತ್ನ ನಡೆದಿರುವುದು ಈಗ ಬೆಳಕಿಗೆ ಬಂದಿದೆ.

ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆಯನ್ನು ತೆರೆದು ಹನುಮಂತರಾಯ ಹೊಸಪೇಟೆ ಎಂಬ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಕ್ರಿಯೇಟ್ ಮಾಡಿ ಅವರಿವರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಅದರಲ್ಲಿ ಎಸ್ಪಿ ಅವರು ಸ್ಟೈಲಿಸ್ ಭಾವಚಿತ್ರವನ್ನ ಹಾಕಿ ಪೋಸ್ಟ್ ಮಾಡಲಾಗಿದೆ.ಈಗಾಗಲೇ ಖಾತೆಗೆ ಹಲವಾರು ಜನರು ಫ್ರೆಂಡ್ ಗಳಿದ್ದು ಕೆಲವರು ಇನ್ನು ರಿಕ್ವೆಸ್ಟ್ ಗಳನ್ನ ಕಳಿಸುತ್ತಿದ್ದಾರೆ.ಇನ್ನೂ ಈ ಒಂದು ವಿಚಾರ ಕುರಿತು ನಕಲಿ ಖಾತೆ ತೆರೆದಿರುವುದು ಯಾರು ಎಂದು ತಿಳಿದು ಬಂದಿಲ್ಲ.ಅದು ನಕಲಿ ಖಾತೆ ಎಂದು ಸ್ಪಷ್ಟಪಡಿಸಿರುವ ಎಸ್ಪಿ ಹನುಮಂತರಾಯ ಅವರು ಈ ಖಾತೆ ಮೂಲಕ ಜನರಿಂದ ಹಣ ಹಾಗೂ ಸಹಾಯ ಪಡೆದು ವಂಚನೆ ಸಾಧ್ಯತೆ ಶಂಕೆ ವ್ಯಕ್ತಪಡಿ ಸಿದ್ದಾರೆ.ಕೂಡಲೇ ಎಚ್ಚೆತ್ತ ಎಸ್ಪಿ ಹನುಮಂತರಾಯ ಈ ಖಾತೆ ನಕಲಿ ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ ಈ ಖಾತೆಯ ಮೂಲಕ ಯಾರಾದರೂ ಹಣದ ಆಮಿಷಗಳನ್ನ ಒಡ್ಡಿದರೆ ಉತ್ತರಿಸದಂತೆ ಮನವಿ ಮಾಡಿದ್ದು ಇದೀಗ ವಿಷಯ ಗಮನಕ್ಕೆ ಬಂದಿದೆ. ನಕಲಿ ಖಾತೆ ತೆರೆದಿರುವವರ ವಿರುದ್ಧ ನಿರ್ದಾಕ್ಷಿಣ್ಯ ವಾಗಿ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಹನುಮಂತ ರಾಯ ಹೇಳಿದ್ದಾರೆ.