ಎರಡು ಹುಲಿಗಳ ನಡುವೆ ಕಾದಾಟ ವೈರಲ್ ಆಗಿದೆ ಹುಲಿಗಳ ನಡುವಿನ ಕಾದಾಟದ ದೃಶ್ಯ – ಹೇಗೆ ಕಾದಾಟಿವೆ ಒಮ್ಮೆ ನೋಡಿ…..

Suddi Sante Desk

ಮೈಸೂರು –

ಎರಡು ಹುಲಿಗಳ ನಡುವೆ ಕಾದಾಟ ನಡೆದ ಘಟನೆ ಮೈಸೂರಿನ ನಾಗರಹೊಳೆ ಅರಣ್ಯದಲ್ಲಿ ನಡೆದಿದೆ. ಕಾದಾಟದ ಅಪರೂಪದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.ನಾಗರಹೊಳೆ ಅರಣ್ಯದಲ್ಲಿ ಸಫಾರಿ ಮಾಡುವ ವೇಳೆ ಸೆರೆಯಾಗಿದೆ ದೃಶ್ಯಗಳು.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನಾಗರಹೊಳೆ ವ್ಯಾಪ್ತಿಯಲ್ಲಿ ನಡೆದ ಕಾದಾಟದ ದೃಶ್ಯಗಳು ಸೆರೆಯಾಗಿವೆ.ಹುಲಿಗಳು ತಮ್ಮ ಟೆರಿಟರಿ ಗಾಗಿ ಕಾದಾಟ ನಡೆಸುತ್ತವೆ.ಈ ವೇಳೆ ಒಂದು ಹುಲಿಯ ಟೆರಿಟರಿಗೆ ಮತ್ತೊಂದು ಹುಲಿ ಬಂದಾಗ ಕಾದಾಟ ನಡೆದಿದ್ದು ಈ ಒಂದು ಕಾದಾಟದ ಅಪರೂಪದ ದೃಶ್ಯಗಳನ್ನು ಸಫಾರಿ ಮಾಡುವವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ

ಪ್ರವಾಸಿಗರು.ಸಾಮಾನ್ಯವಾಗಿ ಕಾಡಿನಲ್ಲಿ ಎರಡು ಹುಲಿಗಳ ನಡುವೆ ಈ ರೀತಿ ಕಾದಾಟ ನಡೆಯುತ್ತೆ. ಆದರೆ ಪ್ರವಾಸಿಗರಿಗೆ ಸಿಗುವುದು ಅಪರೂಪದಲ್ಲೇ ಅಪರೂಪ ಎಂಬಂತಾಗಿದೆ ಈ ಒಂದು ಚಿತ್ರಣ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.