ಕೋಲಾರ –
ಕುರ್ಚಿಗಾಗಿ ಇಬ್ಬರು ಬಿಇಓ ಗಳು ಕಿತ್ತಾಟ ಮಾಡುತ್ತಿರುವ ಘಟನೆ ಕೋಲಾರದಲ್ಲಿ ನಡೆದಿದೆ.ಹೌದು ಜಿಲ್ಲೆಯ ಮುಳ ಬಾಗಿಲಿನ ಬಿಇಓ ಕಚೇರಿಯಲ್ಲಿ ಈ ಒಂದು ಘಟನೆ ನಡೆದಿದ್ದು ಮುಳಬಾಗಿಲು ಬಿಇಓ ಕಚೇರಿಯಲ್ಲಿ ಜಟಾಪಟಿ ನಡೆಯುತ್ತಿದೆ. ಕೋಲಾರ ಜಿಲ್ಲೆ ಮುಳಬಾಗಿಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ನಡುವೆ ಜಟಾಪಟಿ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದು ನಿನ್ನೆ ಆರಂಭಗೊಂಡ ಗುದ್ದಾಟ ಇಂದು ಕಂಡು ಬಂದಿತು.

ಹಿಂದೆ ಅಮಾನತ್ತಾಗಿದ್ದ ಬಿಇಓ ಗಿರಿಜೇಶ್ವರಿ ಹಾಗೂ ಸಿ.ಆರ್.ಅಶೋಕ್ ಕುಮಾರ್ ನಡುವೆ ಜಟಾಪಟಿ ನಡೆಯುತ್ತಿದೆ.ಫೆಬ್ರವರಿ 11 ರಂದು ಕರ್ತವ್ಯ ಲೋಪದ ಆರೋಪದಲ್ಲಿ ಗಿರಿಜೇಶ್ವರಿ ಅವರನ್ನು ಅಮಾನಾತ್ತು ಮಾಡಲಾಗಿತ್ತು.ಸಧ್ಯ ಅಮಾನತು ಪ್ರಶ್ನಿಸಿ ಅವರು ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಂದಿದ್ದಾರೆ ಗಿರಿಜೇಶ್ವರಿ ಅವರು.


ಹೀಗಾಗಿ ತಡೆಯಾಜ್ಞೆಯನ್ನು ತಗೆದುಕೊಂಡು ಬಂದ ಹಿನ್ನಲೆಯಲ್ಲಿ ಕಚೇರಿಯಿಂದ ಬೇರೆ ಕಡೆಗೆ ಹೋಗುತ್ತಿದ್ದ ಬಿಇಓ ಅವರನ್ನು ತಡೆದು ಅವರ ವಾಹನಕ್ಕೆ ಅಡ್ಡಿಪಡಿಸಿ ದ್ದಾರೆ ಗಿರಿಜೇಶ್ವರಿ ಅವರು ಈಗಾಗಲೇ ನಿನ್ನೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಅಶೋಕ್ ಕುಮಾರ್ ರಿಂದ ಮುಳಬಾಗಿಲು ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು ಇಂದು ಕೂಡಾ ಜಟಾಪಟಿ ಕಂಡು ಬಂದಿದೆ
ಇಷ್ಟೇಲ್ಲಾ ನಡೆಯುತ್ತಿದ್ದರು ಕೂಡಾ ಮೇಲಾಧಿಕಾರಿಗಳು ಮಾತ್ರ ಮೌನವಾಗಿದ್ದಾರೆ.