ಚಾಮರಾಜನಗರ –
ಕೋವಿಡ್ ಸೋಂಕಿನಿಂದಾಗಿ ಪತಿ ಪತ್ನಿ ಇಬ್ಬರು ಸಾವಿಗೀಡಾಗಿ ನಾಲ್ಕೂವರೆ ವರ್ಷದ ಬಾಲಕಿಯೊಬ್ಬ ಳು ಅನಾಥಗೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ.ಹೌದು ಗಂಡ ಹೆಂಡತಿ ಕೋವಿಡ್ ಸೋಂಕಿ ನಿಂದ ಸಾವಿಗೀಡಾದರೆ ನಂತರ ಅವರಿಂದ ಹೆಂಡತಿ ಗೂ ಸೋಂಕು ತಗುಲಿ ಚಿಕಿತ್ಸೆಗೆಗಾಗಿ ಆಸ್ಪತ್ರೆಗೆ ದಾಖ ಲಾಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

ನಂತರ ಇವರ ನಾಲ್ಕೂವರೆ ವರ್ಷದ ಬಾಲಕಿ ಸಧ್ಯ ಅನಾಥವಾಗಿದ್ದಾಳೆ. ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ಗ್ರಾಮದ ನಿವಾಸಿ ಗುರುಪ್ರಸಾದ್ ಹಾಗೂ ಅವರ ಪತ್ನಿ ರಶ್ಮಿ ಕೋವಿಡ್ ನಿಂದಾಗಿ ಸಾವಿಗೀಡಾದವರಾಗಿದ್ದಾರೆ.

ಕೊರೊನಾ ಸೋಂಕಿನಿಂ ದ ಗಂಡ ಹೆಂಡತಿ ಇಬ್ಬರೂ ಹೋ ಐಸೋಲೇಷನ್ ಲ್ಲಿದ್ದರು. ಗುರುಪ್ರಸಾದ್ ಕಳೆದ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದರು. ಹೋಂ ಐಸೋಲೇಷನ್ ನಲ್ಲಿದ್ದ ಗುರುಪ್ರಸಾದ್ ಪತ್ನಿ ರಶ್ಮಿ ಕಳೆದ ರಾತ್ರಿ ಮನೆಯಲ್ಲೇ ಕೊನೆಯುಸಿರೆ ಳೆದಿದ್ದಾರೆ.

ಇನ್ನೂ ಈ ದಂಪತಿ ಮಗಳು ಸುಧಾರಾಣಿ ಅಜ್ಜಿಯ ಆರೈಕೆಯಲ್ಲಿದ್ದರು. ಈಗ ಅಜ್ಜಿಗೂ ಸೋಂಕು ತಗು ಲಿದ್ದು ಆ ಒಂದು ಕುಟುಂಬಕ್ಕೆ ಮತ್ತೊಂದು ಸಮಸ್ಯೆ ಎದುರಾಗಿದ್ದು ಹೀಗಾಗಿ ಸಧ್ಯ ನಾಲ್ಕೂವರೆ ವರ್ಷದ ಪುಟ್ಟ ಮಗು ಅನಾಥವಾಗಿದ್ದು ದಾರಿ ಕಾಣದಂತೆ ಆಗಿದೆ