ಗುಲಬುರ್ಗಾ –
ಗ್ರಾಮ ಪಂಚಾಯತ ರಾಜಕೀಯ ಜಗಳದಲ್ಲಿ ನಾಲ್ಕು ವರ್ಷದ ಮಗು ಬಲಿಯಾಗಿರೋ ಘಟನೆ ಕಲಬುರ್ಗಿಯ ಜೇವರ್ಗಿ ತಾಲೂಕಿನ ಜೈನಾಪುರ ಗ್ರಾಮದಲ್ಲಿ ನಡೆದಿದೆ.

ಕಳೆದ 30 ರಂದು ಗ್ರಾಪಂ ಮತ ಎಣಿಕೆ ದಿನ ಜೈನಾಪೂರದಲ್ಲಿ ರಾಜಕೀಯ ಸಂಘರ್ಷ ಸಂಭವಿಸಿತ್ತು. ಘಟನೆಗೆ ಸಂಬಂಧಿಸಿದಂತೆ ಜೇವರ್ಗಿ ಠಾಣೆ ಜೇವರ್ಗಿ ಪೊಲೀಸರು 10 ಜನರನ್ನು ಬಂಧಿಸಿದ್ದರು.

ಪೊಲೀಸ್ ಠಾಣೆಯಲ್ಲಿ ಸಂಗೀತ ಎಂಬ ಮಹಿಳೆಯ ಮತ್ತು ಆಕೆಯ 3 ವರ್ಷದ ಮಗುವನ್ನು ಕೂಡಾ ಠಾಣೆಗೆ ಕರೆ ತಂದು ಆಕೆಯ ಮೇಲೆ ಪೊಲೀಸ್ ರು ಹಲ್ಲೆ ನಡೆಸಿದ್ದರು ಅಂತ ಕುಟುಂಬಸ್ಥರು ಆರೋಪ ಮಾಡ್ತಿದ್ದಾರೆ.

ಠಾಣೆಯಲ್ಲಿ ವಿಚಾರಣೆ ಮಾಡುವ ಸಂದರ್ಭದಲ್ಲಿ ಗಾಯಗೊಂಡಿದ್ದ ಮಗುವನ್ನೂ ಸಹ ತಾಯಿಯೊಂದಿಗೆ ಕಲ್ಬುರ್ಗಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತ್ತು.ಆದ್ರೆ ತೀವ್ರ ಅಸ್ವಸ್ಥಗೊಂಡ ಮಗುವನ್ನು ನಿನ್ನೆ ರಾತ್ರಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆದ್ರೆ ಚಿಕಿತ್ಸೆ ಫಲಿಸದೆ ಇಂದು ಬೆಳಿಗ್ಗೆ ಕಲಬುರ್ಗಿ ಜಿಲ್ಲಾಸ್ಪತ್ರೆಯಲ್ಲಿ ನಾಲ್ಕು ವರ್ಷದ ಮಗು ಭಾರತಿ ಸಾವನ್ನೊಪ್ಪಿದೆ.ಜೇವರ್ಗಿ ಪೊಲೀಸರ ಹಲ್ಲೆಯಿಂದಲೇ ಈ ಮಗು ಮೃತಪಟ್ಟಿದೆ ಅಂತ ಮಗುವಿನ ಪೋಷಕರು ಪೊಲೀಸರ ಮೇಲೆ ಗಂಭೀರ ಆರೋಪ ಮಾಡ್ತಿದ್ದು ಮುಂದೇನು ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.