ಬೆಳಗಾವಿ –
ಬಸ್ ಗಾಗಿ ಪ್ರತಿಭಟನೆ ಮಾಡಿ ಮರಳಿ ಮನೆ ಯತ್ತ ಹೊರಟಿದ್ದ ಬಾಲಕಿಯರಿಗೆ ಕಾರೊಂದು ಡಿಕ್ಕಿಯಾಗಿ ಒರ್ವ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಹೌದು ಜಿಲ್ಲೆಯ ಕಿತ್ತೂರು ತಾಲ್ಲಕಿನ ನಿಚ್ಚಣಕಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಗ್ರಾಮಕ್ಕೆ ನಿತ್ಯ ಬಸ್ ಸಂಚಾರದ ಸಮಸ್ಯೆ ಹಿನ್ನಲೆಯಲಲ್ಲಿ ಪ್ರತಿಭಟನೆ ಮಾಡಿದರು.
ಈ ಒಂದು ಪ್ರತಿಭಟನೆಯ ನಂತರ ಇದರಲ್ಲಿ ಪಾಲ್ಗೊಂಡು ಮರಳಿ ಮನೆಗೆ ಮರಳುತ್ತಿದ್ದ ಬಾಲಕಿಯರ ಗುಂಪಿಗೆ ಕಾರೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ ಘಟನೆಯಲ್ಲಿ 8ನೇ ತರಗತಿ ಬಾಲಕಿ ಮೃತಪಟ್ಟಿದ್ದು ಇನ್ನೂ ಇಬ್ಬರು ಬಾಲಕಿಯರು ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರಗೆ ದಾಖಲು ಮಾಡಲಾಗಿದೆ.ಅಕ್ಷತಾ ಈರಪ್ಪ ಹುಲಿಕಟ್ಟಿ ಮೃತಪಟ್ಟಿರುವ ಬಾಲಕಿಯಾ ಗಿದ್ದಾಳೆ.
ಕಿತ್ತೂರು ಸರಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯನ್ನು ಬಾಲಕಿ ವ್ಯಾಸಂಗ ಮಾಡುತ್ತಿದ್ದ ಳು.ಅಕ್ಷತಾ ಮತ್ತು ಅವರ ಸ್ನೇಹಿತರು ಹಲವು ಬಾರಿ ಪ್ರತಿಭಟನೆ ನಡೆಸಿ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ್ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಬಸ್ ಗಾಗಿ ಮನವಿ ಸಲ್ಲಿಸಿದ್ದರು.ಆದರೂ ಕೂಡಾ ಯಾರು ಸ್ಪಂದಿಸಿ ರಲಿಲ್ಲ ಅಲ್ಲದೇ ತಲೆಕೆಡಿಸಿಕೊಂಡಿರಲಿಲ್ಲ ಹೀಗಾಗಿ ಮತ್ತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ನಂತರ ಮನೆಗೆ ವಾಪಸ್ಸಾಗುತ್ತಿದ್ದರು
ಈ ವೇಳೆ ವೇಗವಾಗಿ ಬಂದ ಕಾರು ಮೂವರು ಬಾಲಕಿಯರಿಗೆ ಡಿಕ್ಕಿ ಹೊಡೆದಿದೆ ತೀವ್ರವಾಗಿ ಗಾಯಗೊಂಡಿದ್ದ ಅಕ್ಷತಾ ಳನ್ನು ಕೂಡಲೇ ಆಸ್ಪತ್ರೆಗ ದಾಖಲು ಮಾಡಲಾಯಿತು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.ಘಟನೆಯಲ್ಲಿ ಮತ್ತೊಬ್ಬ ಬಾಲಕಿಗೆ ಕೂಡ ಗಂಭೀರವಾಗಿ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾ ಗಿದ್ದು ಈ ಒಂದು ಘಟನೆ ಸಂಬಂಧ ಮೃತ ಅಕ್ಷತಾ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು ಸಧ್ಯ ಈ ಒಂದು ವಿಚಾರ ಕುರಿತಂತೆ ಪೊಲೀಸರು ದೂರನ್ನು ದಾಖಲು ಮಾಡಿಕೊಂಡಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಕಿತ್ತೂರು…..