24 ಘಂಟೆ ಕಾಡಿನಲ್ಲಿ ಕಾಲ ಕಳೆದ ಬಾಲಕಿ
ದಾವಣಗೆರೆ –
24 ಗಂಟೆಗಳ ಕಾಲ ಕಾಡಿನಲ್ಲಿ ಆರು ವರುಷದ ಬಾಲಕಿಯೊಬ್ಬಳು ಕಾಲವನ್ನು ಕಳೆದಿದ್ದಾಳೆ. ಹೌದು ಇಂಥಹದೊಂದು ಪ್ರಕರಣವೊಂದು ದಾವಣಗೇರಿ ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಗ್ರಾಮದ ಬಳಿಯ ಅರಣ್ಯದಲ್ಲಿ ನಡೆದಿದೆ.
ಮಲೇಬೆನ್ನೂರು ಗ್ರಾಮದ ಕುಟುಂಬವೊಂದು ಮೆಕ್ಕೆಜೋಳ ತೆನೆ ಮುರಿಯಲು ಜಮೀನಿಗೆ ಹೋಗಿದೆ. ಜಮೀನಿನಲ್ಲಿ ತಮ್ಮ ಪಾಡಿಗೆ ತಾವು ಪಾಲಕರು ಮೆಕ್ಕೆಜೋಳ ಮುರಿಯುತ್ತಿದ್ದಾರೆ. ಇತ್ತ ಆರು ವರುಷದ ಜೋಯಾ ಎಂಬ ಬಾಲಕಿ ಆಟವಾಡುತ್ತಾ ಜಮೀನಿನ ಪಕ್ಕದಲ್ಲಿದ್ದ ಕೊಮಾರನಹಳ್ಳಿ ಅರಣ್ಯಕ್ಕೇ ಹೋಗಿದೆ. ತಿರುಗಾಡುತ್ತಾ ತಿರುಗಾಡುತ್ತಾ ಆರೇಳು ಕಿಲೋ ಮೀಟರ್ ಗಳ ವರೆಗೂ ಬಾಲಕಿ ಕಾಡಿನೊಳಗೆ ಹೋಗಿದ್ದಾಳೆ. ನಂತರ ಕತ್ತಲಾಗಿದ್ದು ಮರಳಿ ಬರಲು ದಾರಿ ಸಿಗದೇ ಮತ್ತು ತಿಳಿಯದ ಹಿನ್ನಲೆಯಲ್ಲಿ ಮರಳಿ ಬಾರಲಾಗದೇ ಜೋಯಾ ರಾತ್ರಿಯಿಡಿ ಕಾಡಿನಲ್ಲಿಯೇ ಕಾಲವನ್ನು ಕಳೆದಿದ್ದಾಳೆ. ಇತ್ತ ಮೆಕ್ಕೆ ಜೋಳ ಕಟಾವು ಮಾಡಿದ ಕೆಲಸ ಮುಗಿದ ನಂತರ ಮಗಳ ನೆನಪಾಗಿದ್ದು ಕೂಡಲೇ ಬಾಲಕಿ ಜೋಯಾ ಪಾಲಕರು ಹುಡುಕಾಡಿದ್ದಾರೆ. ತಡರಾತ್ರಿಯವರೆಗೂ ಹುಡುಕಾಡಿ ಹುಡುಕಾಡಿ ಸಿಗದಿದ್ದಕ್ಕೇ ಮನೆಗೆ ತೆರಳಿದ್ದಾರೆ.
ಇತ್ತ ಕಾಡಿನಲ್ಲಿ ಸಿಲುಕಿಕೊಂಡಿದ್ದ ಬಾಲಕಿ ಜೋಯಾ ರಾತ್ರಿಯಿಡಿ ಯಾವುದೇ ಕಾಡು ಪ್ರಾಣಿಯ ಕಣ್ಣೀಗೆ ಬೀಳದೇ ಸಿಗದೇ ಒಬ್ಬಂಟ್ಟಿಯಾಗಿ ದೈರ್ಯದಿಂದ ಕಾಲವನ್ನು ಕಳೆದಿದ್ದಾಳೆ. ಸಂಜೆ ಹೋಗಿ ರಾತ್ರಿಯಿಡಿ ಕಾಡಿನಲ್ಲಿ ಸಿಲುಕಿಕೊಂಡು ಅಳುತ್ತಾ ಕುಳಿತಿದ್ದ ಬಾಲಕಿಯ ಧ್ವನಿ ಕೇಳಿದ ಅರಣ್ಯ ಸಿಬ್ಬಂದ್ದಿ ಕೂಡಲೇ ಬಾಲಕಿಯ ಬಳಿ ಹೋಗಿ ವಿಚಾರಣೆ ಮಾಡಿದಾಗ ವಿಷಯ ತಿಳಿದಿದೆ. ತಕ್ಷಣವೇ ಬಾಲಕಿಯನ್ನು ಕರೆದುಕೊಂಡು ಬಂದು ಇತ್ತ ಮಗಳಿಗಾಗಿ ಹುಡುಕಾಡುತ್ತಿದ್ದ ಪಾಲಕರಿಗೆ ಅರಣ್ಯ ಸಿಬ್ಬಂದ್ದಿಗಳು ಜೋಯಾನನ್ನು ಒಪ್ಪಿಸಿ ಆತಂಕದಲ್ಲಿದ್ದ ಕುಟುಂಬಕ್ಕೇ ನೆರವಾಗಿದ್ದಾರೆ.ಇನ್ನೂ ಪೊಷಕರೊಂದಿಗೆ ಜಮೀನಿಗೆ ಹೋಗಿ ಆಡುತ್ತಾ ಅರಣ್ಯ ಹೋಗಿದ್ದ ಬಾಲಕಿ ಗೊತ್ತಾಗದೇ ಸುಮಾರು ಐದು ಕಿಲೋಮೀಟರ್ ಅರಣ್ಯದಲ್ಲಿ ಹೋಗಿದ್ದಳು ಪಾಲಕರ ನಿರಂತರ ಹುಡುಕಾಟ. ಅರಣ್ಯದಲ್ಲಿ ಅಳುತ್ತಾ ಕುಳಿತ ಬಾಲಕಿಯನ್ನ ನೋಡಿದ ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಜೋಯಾನನ್ನು ರಕ್ಷಣೆ ಮಾಡಿದ್ದಾರೆ. ಇನ್ನೂ ಇತ್ತ ಕಾಡಿನಲ್ಲಿ ರಾತ್ರಿಯಿಡಿ ಕಳೆದ ಜೋಯಾಗೆ ಅದೃಷ್ಟವಶಾತ್ ಯಾವುದೇ ಕಾಡು ಪ್ರಾಣಿಗಳ ಕೈಗೆ ಸಿಗದ ಬಾಲಕಿಯ ದೈರ್ಯವನ್ನು ಮೆಚ್ಚಲೇಬೇಕು.ಇನ್ನೂ ತಮ್ಮೊಂದಿಗೆ ಮಕ್ಕಳನ್ನು ಜಮೀನಿಗೆ ಕರೆದುಕೊಂಡು ಹೋಗುವ ಮುನ್ನ ಪೊಷಕರು ಸ್ವಲ್ಪು ಎಚ್ಚರವಾಗಿರಬೇಕು.