ಶೃಂಗೇರಿ –
ಸಾಮಾನ್ಯವಾಗಿ ಸರ್ಕಾರಿ ಶಾಲೆ ಅಂದರೆ ಮೂಗು ಮುರಿಯುವವರೇ ಹೆಚ್ಚು. ಬದಲಾದ ಇಂದಿನ ಎಲ್ಲಾ ವ್ಯವಸ್ಥೆಯ ನಡುವೆ ಎಲ್ಲರೂ ಖಾಸಗಿ ಶಾಲೆ ಗಳತ್ತ ಮುಖ ಮಾಡಿರುವಾಗ ನಮ್ಮ ನಡುವೆ ಇನ್ನೂ ಅದೆಷ್ಟೋ ಸರ್ಕಾರಿ ಶಾಲೆಗಳು ಉತ್ತಮ ಗುಣಮ ಟ್ಟದೊಂದಿಗೆ ಮಾದರಿಯಾಗಿವೆ ಎನ್ನೊದಕ್ಕೆ ಈ ಶಾಲೆಯೇ ಸಾಕ್ಷಿ
ಇನ್ನೂ ಈ ಒಂದು ಮಾತಿಗೆ ಹಾಸನ ಜಿಲ್ಲೆಯ ಶೃಂಗೇರಿ ಯ ಮೆಣಸೆಯ ಸರ್ಕಾರಿ ಪ್ರಾಥಮಿಕ ಶಾಲೆ.ಎಂಟು ದಶಕಗಳನ್ನು ಕಂಡಿರುವ ಮೆಣಸೆಯ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯೆಂದರೆ ಮಕ್ಕಳಿಗೆ ಅಚ್ಚುಮೆಚ್ಚು.ಕೋವಿಡ್ ಪರಿಸ್ಥಿತಿಯಲ್ಲೂ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗದಿರುವುದು ಇದಕ್ಕೆ ನಿದರ್ಶನ.
1940ರಲ್ಲಿ ಪ್ರಾರಂಭಗೊಂಡ ಶಾಲೆಯಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಶಿಕ್ಷಣ ದೊರೆಯುತ್ತದೆ. ಒಂದರಿಂ ದ 8 ನೇ ವರ್ಗದ ವರೆಗೆ 243 ವಿದ್ಯಾರ್ಥಿಗಳು ಸಧ್ಯ ಶಾಲೆಯಲ್ಲಿ ಕಲಿಯುತ್ತಿ ದ್ದಾರೆ.ಈ ಶಾಲೆಗೆ ಕಾಮ್ಲೆಗು ಡ್ಡ,ಆನೆಗುಂದ, ಕಿಕ್ರೆ, ಕಿರುಕೋಡು, ಹಾಲಂದೂರು, ರಾಜಾನಗರ, ಕಲ್ಕಟ್ಟೆ, ಶೃಂಗೇರಿ ಪಟ್ಟಣ ಮೊದಲಾದ ಪ್ರದೇಶಗಳಿಂದ ಮಕ್ಕಳು ಬರುತ್ತಾರೆ. ಕೊಪ್ಪ ತಾಲ್ಲೂ ಕಿನ ಮೇಗೂರು,ಕಚಿಗೆ, ಕುಳಗಾರು,ಎತ್ತನಟ್ಟಿ, ಅಗ ಳಗಂಡಿಯಿಂದಲೂ ವಿದ್ಯಾರ್ಥಿಗಳು ಬರುತ್ತಾರೆ.
ದೂರದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಶಾಲೆ ಗೆ ಮಾಜಿ ಸಚಿವ ಬೇಗಾನೆ ರಾಮಯ್ಯ ಅವರ ಪುತ್ರಿ ಡಾ.ಆರತಿಕೃಷ್ಣ ಮತ್ತು ಸಂಪತ್ ಕುಮಾರ್ 2 ಬಸ್‌ಗ ಳನ್ನು ದೇಣಿಗೆಯಾಗಿ ನೀಡಿದ್ದಾರೆ.ಶಾಲೆಯಲ್ಲಿ ಯಾ ವುದೇ ಕೊರತೆ ಇಲ್ಲ. ಶಾಲೆಯನ್ನು ಮಾದರಿ ಶಾಲೆ ಮಾಡಬೇಕು ಎಂಬುದು ನಮ್ಮ ಕನಸು ಎನ್ನುತ್ತಾರೆ ಶಿಕ್ಷಕರು.ಇನ್ನೂ ಕ್ರೀಡಾಂಗಣ, ಸ್ಮಾರ್ಟ್‌ಕ್ಲಾಸ್, ರಂಗಮಂದಿರ, ಗ್ರಂಥಾಲಯ, ವಿಜ್ಞಾನ ಪ್ರಯೋಗಾ ಲಯ,13 ಕಂಪ್ಯೂಟರ್,ಒಂಬತ್ತು ಶಿಕ್ಷಕರನ್ನು ಶಾಲೆ ಹೊಂದಿದೆ ಎಂದು ಎಸ್‍ಡಿಎಂಸಿ ಅಧ್ಯಕ್ಷ ಉದಯ್ ಅವರು ಹೇಳುತ್ತಾ ಇನ್ನಷ್ಟು ಅಭಿವೃದ್ಧಿ ಮಾಡುವ ಕನಸನ್ನು ಇಟ್ಟುಕೊಂಡಿದ್ದೆವೆ ಎಂದು ಹೇಳಿದರು