ದಾವಣಗೇರೆ –
ಸರ್ಕಾರಿ ಶಾಲೆಯ ಶಿಕ್ಷಕರು ಮನಸ್ಸು ಮಾಡಿದರೆ ಏನೇಲ್ಲಾ ಮಾಡುತ್ತಾರೆ ಎಂಬೊದಕ್ಕೆ ದಾವಣಗೇರೆಯಲ್ಲಿನ ಘಟನೆ ಯೇ ಸಾಕ್ಷಿ.ಹೌದು ಗ್ರಾಮಸ್ಥರ ನೆರವಿನೊಂದಿಗೆ ಬಾಲಕಿ ಯೊಬ್ಬಳ ಬದುಕನ್ನು ಬದಲಾಯಿಸಿದ್ದಾರೆ ಸರ್ಕಾರಿ ಶಾಲೆಯ ಶಿಕ್ಷಕರು.ಇಲ್ಲಿನ ಸರ್ಕಾರಿ ಶಾಲೆಯ 5ನೇ ತರಗತಿ ಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಪೋಷಕರ ಆಶಯದಂತೆ ಮದುವೆಯಾಗಿ ತನ್ನ ಅಮೂಲ್ಯ ಬಾಲ್ಯ ಜೀವನವನ್ನು ಶಾಲಾ ಕಲಿಕೆಯನ್ನು ಕಳೆದುಕೊಳ್ಳಬೇಕಾ ಗಿತ್ತು ಜಿಲ್ಲೆಯ ಸಂತೆಬೆನ್ನೂರು ಗ್ರಾಮದಲ್ಲಿ.

ಆದರೆ ಶಿಕ್ಷಕರು ಗ್ರಾಮಸ್ಥರೊಂದಿಗೆ ಮಧ್ಯೆ ಪ್ರವೇಶಿಸಿ ಬಾಲ್ಯ ವಿವಾಹವಾಗುವುದನ್ನು ತಡೆದಿದ್ದಾರೆ.ಸುನಿತಾ ತನ್ನ ಕಾಲೊನಿಯಲ್ಲಿ ಅಜ್ಜಿ ಮನೆಯಲ್ಲಿ ವಾಸವಾಗಿದ್ದಳು.ಕಳೆದ ಹಲವು ತಿಂಗಳುಗಳಿಂದ ಶಾಲೆಗೆ ಹೋಗುತ್ತಿರಲಿಲ್ಲ. ಈ ಬಗ್ಗೆ ಶಾಲೆಯ ಶಿಕ್ಷಕರು ಪ್ರಶ್ನಿಸಿದಾಗ ಆಕೆಯ ಪೋಷಕರು ಮದುವೆ ಮಾಡಲು ಮುಂದಾಗಿದ್ದಾರೆ ಎಂದು ತಿಳಿದು ಬಂತು.ಕೂಡಲೇ ಎಚ್ಚೆತ್ತ ಶಾಲೆಯ ಶಿಕ್ಷಕರು ಗ್ರಾಮಸ್ಥರ ಸಹಾಯದಿಂದ ಪೋಷಕರ ಮನವೊಲಿಸಿ ಮದುವೆ ಮಾಡದೆ ಓದಿಸಿ ಎಂದು ಹೇಳಿದ್ದಾರೆ. ಸುನಿತಾಳ ತಂದೆ ವಿಜಯಪುರದವರಾಗಿದ್ದು ತಾಯಿ ಸಂತೆಬೆನ್ನೂರಿನ ಗೊಲ್ಲರಹಳ್ಳಿ ಗ್ರಾಮದವರು.ದಿನಗೂಲಿ ನೌಕರರು. ಬಡವರಾಗಿದ್ದು ತಮ್ಮ ಮಗಳನ್ನು ಸಾಕಿ,ಸಲುಹಿ ಶಾಲೆಗೆ ಕಳುಹಿಸಲು ಸಾಧ್ಯವಾಗುವುದಿಲ್ಲ ಎಂದು ಮದುವೆ ಮಾಡಲು ಮುಂದಾಗಿದ್ದರು ಎಂದು ಶಾಲೆಯ ಶಿಕ್ಷಕರು ಹೇಳುತ್ತಾರೆ.ಒಟ್ಟಾರೆ ಕೇವಲ ಕರ್ತವ್ಯ ಎಂದುಕೊಂಡು ಪಾಠವನ್ನು ಮಾಡದೇ ಇದರೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನು ಈ ಮೂಲಕ ಸರ್ಕಾರಿ ಶಾಲೆಯ ಮಕ್ಕಳು ತೋರಿಸಿಕೊಟ್ಟಿದ್ದಾರೆ.