ಒಬ್ಬರು ಶಿಕ್ಷಕರಿಲ್ಲದ ಸರ್ಕಾರಿ ಶಾಲೆ ಶಿಕ್ಷಕರಿಲ್ಲದೇ ಅನಾಥವಾಗಿದೆ ಶಾಲೆ

Suddi Sante Desk

ಹಾಲಾಡಿ

ಸರ್ಕಾರಿ ಶಾಲೆಗಳಿಗೆ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ಎಷ್ಟೊಂದು ಮಹತ್ವ ನೀಡುತ್ತಿದೆ ಎಂಬೊಂದಕ್ಕೆ ಈ ಶಾಲೆಯೆ ಸಾಕ್ಷಿ ಹೌದು ತೀರಾ ಗ್ರಾಮೀಣ ಭಾಗವಾದ ಅಮಾಸೆಬೈಲು ಗ್ರಾಮ ಪಂಚಾಯತಿ ವ್ಯಾಪ್ತಿಯ ರಟ್ಟಾಡಿ ಗ್ರಾಮದ ನಡಂಬೂರಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈಗ ಶಿಕ್ಷಕರೇ ಇಲ್ಲದ ಶೂನ್ಯ ಶಾಲೆಯಾಗಿದೆ.ಇಲ್ಲಿಗೆ ಈ ಸಾಲಿನಲ್ಲಿ ಇಲಾಖೆಯಿಂದ ವಾರಕ್ಕೆರಡು ದಿನ ತಾತ್ಕಾಲಿಕ ನೆಲೆಯಲ್ಲಿ ನಿಯೋಜಿಸಿದರೂ ಅವರಿನ್ನೂ ಈ ಶಾಲೆಗೆ ಬಂದೇ ಇಲ್ಲ.ಕುಂದಾಪುರ ವಲಯದ ನಡಂಬೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಸಾಲಿನಲ್ಲಿ ಬೇರೊಂದು ಶಾಲೆಯಿಂದ ಇಲ್ಲಿಗೆ ಶಿಕ್ಷಕರೊಬ್ಬರನ್ನು ಪ್ರಭಾರ ನೆಲೆಯಲ್ಲಿ ನಿಯೋಜಸಲಾಗಿತ್ತು.ಆದರೆ ಈ ಬಾರಿ ಅವರು ಬೇರೆಡೆಗೆ ವರ್ಗವಾಗಿದ್ದು ಈಗ ಈ ಶಾಲೆಯಲ್ಲಿ ಖಾಯಂ ಶಿಕ್ಷಕರೇ ಇಲ್ಲ ಈಗಿರುವುದು ಕೇವಲ ಗೌರವ ಶಿಕ್ಷಕಿ ಮಾತ್ರ.

ಇಲ್ಲಿ ಖಾಯಂ ಶಿಕ್ಷಕರಿಲ್ಲದೆ ಈ 2022-23ನೇ ಸಾಲಿನ ದಾಖಲಾತಿ ಪ್ರಕ್ರಿಯೆಗೆ ಸಮಸ್ಯೆಯಾಗಿದೆ.ಇದರಿಂದ ಈ ಬಾರಿಯ ದಾಖಲಾತಿಯು ಕುಂಠಿತಗೊಂಡಿದೆ.ಸದ್ಯ ಶಾಲೆ ಯಲ್ಲಿ 16 ಮಕ್ಕಳಿದ್ದು ಒಬ್ಬರೇ ಗೌರವ ಶಿಕ್ಷಕಿಯಿದ್ದಾರೆ.

ಇದರಿಂದಾಗಿ ಪಾಠ ಪ್ರವಚನಕ್ಕೆ ಮಕ್ಕಳಿಗೆ ಸಮಸ್ಯೆಯಾ ಗುತ್ತಿದೆ.ಕಳೆದ 3 ವರ್ಷಗಳಿಂದ ಈ ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲ.ಅಲ್ಲಿಂದೀಚೆಗೆ ಇಲ್ಲಿಗೆ ಬೇರೊಂದು ಶಾಲೆಯ ಶಿಕ್ಷಕರನ್ನು ಪ್ರಭಾರ ನೆಲೆಯಲ್ಲಿ ನಿಯೋಜಿಸಲಾಗುತ್ತಿದೆ. 2 ಶಿಕ್ಷಕ ಹುದ್ದೆಗಳು ಖಾಲಿಯಿವೆ.

ಈ ಶೈಕ್ಷಣಿಕ ಸಾಲಿನಲ್ಲಿ ಈ ಶಾಲೆಯನ್ನು ಶೂನ್ಯ ಶಿಕ್ಷಕರಿ ರುವ ಶಾಲೆಯೆಂದು ಗುರುತಿಸಿ 2022-23ನೇ ಸಾಲಿನಲ್ಲಿ ಇಲ್ಲಿಗೆ ಬೆಪ್ಡೆ ಶಾಲೆಯ ಶಿಕ್ಷಕಿಯೊಬ್ಬರನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ ವಾರದಲ್ಲಿ 2 ದಿನ (ಸೋಮವಾರ ಹಾಗೂ ಗುರುವಾರ)ಈ ಶಾಲೆಗೆ ಕರ್ತವ್ಯಕ್ಕೆ ಹಾಜರಾಗು ವಂತೆ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಮೇ 30ರಂದು ಆದೇಶ ಹೊರಡಿಸಿದ್ದರು.ಆದರೆ ನಿಯೋಜನೆಗೊಂಡ ಶಿಕ್ಷಕಿ ಈ ಶಾಲೆಗೆ ಒಂದು ದಿನವೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಇದ ರಿಂದ ಮಕ್ಕಳಿಗೆ ಮಾತ್ರ ನಿತ್ಯವೂ ತೊಂದರೆಯಾಗುತ್ತಿದೆ.

ನಡಂಬೂರು ಶಾಲೆಗೆ ಮುಖ್ಯ ಶಿಕ್ಷಕರ ನೆಲೆಯಲ್ಲಿ ಪ್ರವೀಣ್‌ ಕುಮಾರ್‌ ಶೆಟ್ಟಿ ಹಾಗೂ ಶಿಕ್ಷಕಿಯಾಗಿ ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಆದೇಶ ಹೊರಡಿಸಲಾಗಿದೆ. ಇವರು ಅಲ್ಲಿಗೆ ಬರದ ಬಗ್ಗೆ ಕೂಡಲೇ ಪರಿಶೀಲನೆ ನಡೆಸಿ ಸರಿಪಡಿಸಲಾಗುವುದು ಎಂದು ಬಿಇಓ ಅರುಣ್‌ ಕುಮಾರ್‌ ಶೆಟ್ಟಿ ಹೇಳಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.