ಶೌಚಾಲಯ ವಿಲ್ಲದ ಸರ್ಕಾರಿ ಶಾಲೆ ಬಯಲು ಶೌಚಾಲಯ ಮುಕ್ತ ಎಂದು ಹೇಳುವ ಅಧಿಕಾರಿಗಳೇ ಜನಪ್ರತಿನಿಧಿಗಳೇ ಒಮ್ಮೆ ಈ ಶಾಲೆ ನೋಡಿ…..

Suddi Sante Desk

ದೋಟಿಹಾಳ

ಸಾರ್ವಜನಿಕರು ಪ್ರತಿಯೊಬ್ಬರು ವೈಯಕ್ತಿಕ ಶೌಚಾಲಯ ಗಳನ್ನು ಕಟ್ಟಿಸಿಕೊಳ್ಳಿ,ನಮ್ಮ ದೇಶ,ರಾಜ್ಯ ಮತ್ತು ಜಿಲ್ಲೆ ಯನ್ನು ಬಯಲು ಮುಕ್ತ ಶೌಚಾಲಯನಾಗಿ ಮಾಡೋಣ ಎಂದು ಘೋಷಣೆ ಮಾಡುವ ಅಧಿಕಾರಿಗಳೇ ಇತ್ತ ಕಡೆ ಗಮನಹರಿಸಿ ಈ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿ ಯರ ಶಿಕ್ಷಕರ ಶಿಕ್ಷಕಿಯರ ಗೊಳು ಕೇಳಿ ನೋಡಿ..ಹೌದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಶಿರಗುಂಪಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಶಾಲಾ ಮಕ್ಕಳಿಗೆ ಬಯಲೇ ಶೌಚಾ ಲಯವಾಗಿದೆ.ಈ ಶಾಲೆಯಲ್ಲಿ 1ರಿಂದ 7ನೇ ತರಗತಿಯ ವರೆಗೆ ಒಟ್ಟು 205 ಮಕ್ಕಳು ಓದುತ್ತಿದ್ದಾರೆ.7ಜನ ಶಿಕ್ಷಕರೂ ಇದ್ದಾರೆ.ಇದರಲ್ಲಿ 4ಜನ ಶಿಕ್ಷಕರಿಯರು ಇದ್ದಾರೆ.100ಕ್ಕೂ ಹೆಚ್ಚು ವಿದ್ಯಾರ್ಥಿನಿರು ಇದ್ದಾರೆ.ಆದರೆ ಶಾಲೆಯಲ್ಲಿ ಮೂತ್ರ ವಿಸರ್ಜನೆಗೆ ವ್ಯವಸ್ಥೆ ಇಲ್ಲದೇ ಇರುವುದರಿಂದ ಇಲ್ಲಿಯ ಮಕ್ಕಳು ಅನಿವಾರ್ಯವಾಗಿ ಬಯಲಿಗೆ ಹೋಗಬೇಕು ಆದರೆ ಈ ಶಾಲೆಯ ವಿದ್ಯಾರ್ಥಿನಿಯರ ಪಾಡು ಹೇಳ ತೀರದಾಗಿದೆ

ಶಾಲೆಯಲ್ಲಿ 1 ರಿಂದ 7 ನೇ ತರಗತಿಯವರೆಗೆ ಒಟ್ಟು 100 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿನಿಯರಿಗೆ ಶೌಚಾಲಯಗಳ ಸಮಸ್ಯೆ ಇದೆ ಇವರು ಶೌಚಾಲಯಕ್ಕೆ ಹೋಗಬೇಕಾದರೆ ಮನೆ ಹೋಗಿ ಬರುತ್ತಾರೆ.ಇದೊಂದು ದುರದೃಷ್ಟಕರ ಸಂಗತಿಯಾಗಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾರ್ವಜನಿಕರ ಶೌಚಾ ಲಯ ಕಟ್ಟಿಸಿಕೊಳ್ಳಿ ಎಂದು ಸಾರ್ವಜನಿಕರಿಗೆ ಹೇಳುತ್ತಾರೆ. ಆದರೆ ಈ ಶಾಲೆಯಲ್ಲಿ ಶೌಚಾಲಯ ಇಲ್ಲದೆ ಇರುವುದ ರಿಂದ ಇಲ್ಲಿಯ ವಿದ್ಯಾರ್ಥಿನಿಯರಿಗೆ ಮತ್ತು ಶಿಕ್ಷಕಿಯರ ತೊಂದರೆಗಳು ಅನುಭವಿಸುತ್ತಿದ್ದಾರೆ.ಇದು ಒಂದು ಗೌರವದ ಪ್ರಶ್ನೆಯಾಗಿದೆ.

ಶಾಲೆಗೆ ಒಂದು ಶೌಚಾಲಯ ಕಟ್ಟಿಸಿ ಕೊಡಿ ಎಂದು ಶಾಲೆಯ ಮುಖ್ಯೋಪಾದ್ಯರು ಗ್ರಾಮ ಪಂಚಾಯತಿ ಗೆ ಕಳೆದ ಒಂದು ವರ್ಷದಿಂದ ಸುಮಾರು 4-5 ಪತ್ರಗಳು ಬರೆದು ಅಲೆದಾಡುತ್ತಿದ್ದಾರೆ ಆದರೆ ಯಾವುದೇ ಪ್ರಯೋ ಜನವಾಗಿಲ್ಲ.ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇತ್ತ ಕಡೆಗೆ ಗಮನಹರಿಸುತ್ತಿಲ್ಲ ಇದರ ಬಗ್ಗೆ ವಿಚಾರಿಸಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂಬ ಹಾರೈಕೆ ಉತ್ತರ ಮಾತ್ರ ನೀಡುತ್ತಾರೆ.ಹೀಗಾಗಿ ಕಳೆದ 2-3 ವರ್ಷದಿಂದ ಇಲ್ಲಿಯ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಶಾಲೆಯಲ್ಲಿ ಶೌಚಾಲಯ ಇಲ್ಲದ ಕಾರಣ ನರಕಾಯಾತನೆ ಪಡುತ್ತಿದ್ದಾರೆ.

ಜಿಲ್ಲಾ ಪಂಚಾಯಿತಿಯ ಸಿಇಓ ಒಬ್ಬ ಮಹಿಳೆಯಾಗಿದ್ದು ಈ ಶಾಲೆಯ ವಿದ್ಯಾರ್ಥಿನಿಯರ ಕಷ್ಟವನ್ನು ಕೇಳುತ್ತಾರೆ ಎಂಬುದು ಕಾದು ನೋಡಬೇಕಾಗಿದೆ. ಇನ್ನಾದರೂ ಈ ಕಡೆ ಭೇಟಿ ನೀಡಿ ಇಂಥ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬೊದು ಪ್ರಜ್ಞಾವಂತರ ಕಳಕಳಿಯಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.