ವಯೋನಿವೃತ್ತಗೊಂಡ ಶಿಕ್ಷಕಿ ಗೆ ಮನೆಯಂಗಳದಲ್ಲಿ ಸನ್ಮಾನಿಸಿ ಗೌರವಿಸಿದ ಶಿಕ್ಷಕರ ಬಳಗ – ಸಾರ್ಥಕ ಸೇವೆ ಸಲ್ಲಿಸಿದ ನಿವೃತ್ತಗೊಂಡ ರಾಜಮ್ಮನಿಗೆ ಅಂಕೋಲಾ ಶಿಕ್ಷಕರ ಬಳಗದಿಂದ ಪ್ರೀತಿಯ ಸನ್ಮಾನ ಗೌರವ…..

Suddi Sante Desk
ವಯೋನಿವೃತ್ತಗೊಂಡ ಶಿಕ್ಷಕಿ ಗೆ ಮನೆಯಂಗಳದಲ್ಲಿ ಸನ್ಮಾನಿಸಿ ಗೌರವಿಸಿದ ಶಿಕ್ಷಕರ ಬಳಗ – ಸಾರ್ಥಕ ಸೇವೆ ಸಲ್ಲಿಸಿದ ನಿವೃತ್ತಗೊಂಡ ರಾಜಮ್ಮನಿಗೆ ಅಂಕೋಲಾ ಶಿಕ್ಷಕರ ಬಳಗದಿಂದ ಪ್ರೀತಿಯ ಸನ್ಮಾನ ಗೌರವ…..

ಅಂಕೋಲಾ

ವಯೋನಿವೃತ್ತಗೊಂಡ ಶಿಕ್ಷಕಿ ಗೆ ಮನೆಯಂ ಗಳದಲ್ಲಿ ಸನ್ಮಾನಿಸಿ ಗೌರವಿಸಿದ ಶಿಕ್ಷಕರ ಬಳಗ – ಸಾರ್ಥಕ ಸೇವೆ ಸಲ್ಲಿಸಿದ ನಿವೃತ್ತಗೊಂಡ ರಾಜಮ್ಮನಿಗೆ ಅಂಕೋಲಾ ಶಿಕ್ಷಕರ ಬಳಗದಿಂದ ಪ್ರೀತಿಯ ಸನ್ಮಾನ ಗೌರವ

ಹೌದು ಶಿಕ್ಷಣ ಇಲಾಖೆಯಲ್ಲಿ ಬಹು ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಗೊಂಡ ಶಿಕ್ಷಕಿಯವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಹೌದು ಅಂಕೋಲಾದ ಸರ್ಕಾರಿ ಕಿರಿಯ ಪ್ರಾಥಮಿಕ ಮೇಲಿನ ಗುಳಿ ಶಾಲೆಯಲ್ಲಿ ಬಹು ವರ್ಷಗಳ ಕಾಲ ಸಾರ್ಥಕ ಸೇವೆಯನ್ನು ಸಲ್ಲಿಸಿ ವಯೋನಿವೃತ್ತಿಯನ್ನು ಹೊಂದಿದ ಶ್ರೀಮತಿ ರಾಜಮ್ಮ ಹಮ್ಮಣ್ಣ ನಾಯಕ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೇಲಿನ ಗುಳಿಯಲ್ಲಿ ಸೇವೆ ಸಲ್ಲಿಸಿ ಸಧ್ಯ ನಿವೃತ್ತಗೊಂಡಿದ್ದು ಹೀಗಾಗಿ ಇವರನ್ನು ಅವರ ಮನೆಯಂಗಳದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಅಂಕೋಲಾ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು.ಅವರ ಮನೆಯಂಗಳದಲ್ಲಿ ಅಂಕೋಲಾ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಈ ಒಂದು ಸನ್ಮಾನವನ್ನು ಮಾಡಿ ಗೌರವಿಸಲಾಯಿತು

ಇದೇ ವೇಳೆ ಸನ್ಮಾನ ಸ್ವೀಕರಿಸಿ ರಾಜಮ್ಮ ಅವರು ಮಾತನಾಡಿ ಸಂಘವು ನೀಡಿದ ಗೌರವ ಸಂತಸ ವನ್ನು ತಂದಿದೆ ಎಂದರು.ರಾಜಮ್ಮ ನಾಯಕ ನಿರಂತರ 39 ವರ್ಷಗಳ ಶಾಲಾ ವಿದ್ಯಾರ್ಥಿಗಳ ಒಡನಾಟ ಅವಿಸ್ಮರಣೀಯವಾದದು ಹೃದಯ ತುಂಬಿ ಬಂದಿದೆ ಧನ್ಯತಾಭಾವದಿಂದ ಕಂಡ ಎಲ್ಲರನ್ನೂ ನೆನಪಿಸಿಕೊಳ್ಳುತ್ತೇನೆ ನನ್ನ ಸಂಘ ನನ್ನ ಮನೆಬಾಗಿಲಿಗೆ ಬಂದು ನನ್ನನ್ನು ಗೌರವಿಸಿ ಬೀಳ್ಕೊಟ್ಟಿರುವುದು ಸಂತಸವನ್ನು ತಂದಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ ಅಧ್ಯಕ್ಷ ಜಗದೀಶ ಜಿ ನಾಯಕ ಹೊಸ್ಕೇರಿ ಸನ್ಮಾನಿಸಿ ಮಾತನಾಡಿ ರಾಜಮ್ಮ ನಾಯಕರ ಸರಳ,ಸಜ್ಜನ ವ್ಯಕ್ತಿತ್ವ ಶಿಕ್ಷಕರಿಗೆ ಆದರ್ಶಪ್ರಾಯವಾಗಿದ್ದು ಇವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಸ್ಮರಣೀಯವಾದದು.ತಮ್ಮ ಮಗಳಾದ ಹೇಮಾ ನಾಯಕರನ್ನು ಸರಕಾರಿ ಶಾಲೆಯಲ್ಲಿ ಓದಿಸಿ ಐಎಎಸ್ ನಂತಹ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುವಂತೆ ಮಾಡಿರುವಲ್ಲಿ ರಾಜಮ್ಮನಾಯಕ ದಂಪತಿಗಳ ಕೊಡುಗೆ ಅಪಾರ ವಾದುದು ಇದನ್ನು ಇಡೀ ಶಿಕ್ಷಕರ ಸಮುದಾಯ ಹೆಮ್ಮೆ ಪಡುತ್ತದೆ ಎಂದರು.

ಇದೇ ವೇಳೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ ಟಿ ನಾಯಕ ,ಸುಂಕಸಾಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸದಾನಂದ ನಾಯಕ, ಶಾಲಿನಿ ನಾಯಕ, ಮೀನಾ ನಾಯಕ, ಶೇಖರ ಗಾಂವಕರ ಅಭಿನಂದಿಸಿ ಮಾತನಾಡಿದರು ಸಂಘದ ಉಪಾಧ್ಯಕ್ಷೆ ಭಾರತಿ ಬಿ ನಾಯಕ ಸದಸ್ಯರಾದ ಆನಂದು ವಿ ನಾಯ್ಕ, ಸಂಜೀವ ಆರ್ ನಾಯಕ, ವಿನಾಯಕ ಪಿ ನಾಯ್ಕ, ವೆಂಕಮ್ಮ ನಾಯಕ, ಶೋಭಾ ನಾಯಕ ,ರಾಜಮ್ಮ ನಾಯ್ಕರ ಕುಟುಂಬದ ಅಭಿಮಾನಿಗಳಾದ ರವೀಂದ್ರ ಬಿ ನಾಯಕ, ಮಹೇಶ ನಾಯಕ ಹಿಚ್ಕಡ, ರಾಮಕೃಷ್ಣ ನಾಯಕ ಮಹೇಶ ನಾಯಕ ವಂದಿಗೆ,

ಶಾಂತಲಾ ನಾಯಕ, ದೀಪಾ ನಾಯಕ ವೀಣಾ ನಾಯಕ ,ಸವಿತಾ ನಾಯಕ, ಸುಧಾ ನಾಯಕ ಮುಂತಾದವರು ಉಪಸ್ಥಿತರಿದ್ದರು.ಸಂಘದ ಪ್ರಧಾನ ಕಾರ್ಯದರ್ಶಿ ರಾಜು ಎಚ್ ನಾಯಕ ಸ್ವಾಗತಿಸಿದರು.ಉಪಾಧ್ಯಕ್ಷ ಮಂಜುನಾಥ ವಿ ನಾಯಕ ವಂದಿಸಿದರು.ಶಾಂತರಾಮ ನಾಯಕ, ಪವನ ಶಾಂತಾರಾಮ ನಾಯಕ ಸಹಕರಿಸಿದರು.

ಸುದ್ದಿ ಸಂತೆ ನ್ಯೂಸ್ ಅಂಕೋಲಾ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.