ಗದಗ –
ಹೌದು ಇಂತಹದೊಂದು ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.ಗದಗ ನಗರದ ಹುಡ್ಕೋ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆ ನಂಬರ್-15 ರ ಶಾಲೆ ಆವರಣದಲ್ಲಿ ಮರ ಬಿದ್ದಿದ್ದು ಭಾರಿ ದುರಂತ ತಪ್ಪಿದೆ.ಎರಡು ತಿಂಗಳ ಹಿಂದೆಯೇ ಶಾಲೆ ಮುಖ್ಯ ಶಿಕ್ಷಕರು ಮರ ತೆರವಿಗೆ ಅರಣ್ಯ ಇಲಾಖೆ ಹಾಗೂ ನಗರಸಭೆಗೆ ಪತ್ರ ಬರೆದಿದ್ದರು.ಆದ್ರೂ ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರಿದ್ದು ಆದ್ರೆ ಈಗ ಮರ ಬಿದ್ದಿದೆ.
ಶವ ಯಾತ್ರೆಯಿಂದಾಗಿ ಹಾಗೂ ಶಿಕ್ಷಕನಿಂದಾಗಿ ಮಕ್ಕಳ ಪ್ರಾಣ ಶಾಲಾ ಆವರಣದಲ್ಲಿ ಮರ ಬಿದ್ದಿದ್ದು ಭಾರಿ ದುರಂತ ತಪ್ಪಿದೆ.ಮಕ್ಕಳು ಶಾಲೆ ಆವರಣದಲ್ಲಿದ್ದಾಗ ದಾರಿಯಲ್ಲಿ ಮೃತ ವ್ಯಕ್ತಿಯ ಶವಯಾತ್ರೆ ಹೊರಟಿತ್ತು.ಹೀಗಾಗಿ ಶಿಕ್ಷಕರು ಮಕ್ಕಳನ್ನು ಶಾಲೆ ಒಳಗೆ ಹೋಗಲು ತಿಳಿಸಿದ್ದಾರೆ. ಮಕ್ಕಳು ಕೊಠಡಿ ಒಳಗೆ ಹೋದ ನಂತರ ಶಾಲೆ ಆವರಣದಲ್ಲಿದ್ದ ಮರ ಧರೆಗೆ ಉರುಳಿದೆ.ಓರ್ವ ಶಿಕ್ಷಕಿ ಕೂಡ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ.ಹೀಗಾಗಿ ಶವ ಯಾತ್ರೆ ಮಕ್ಕಳನ್ನು ಬಚಾವ್ ಮಾಡಿದೆ.ಶವಯಾತ್ರೆ ನಡೆಯದಿದ್ದರೆ ಮಕ್ಕಳು ಗೇಟ್ ನಿಂದ ಒಳಗೆ ಹೋಗುತ್ತಿರಲಿಲ್ಲ.ಹಾಗೂ ಮರ ಮಕ್ಕಳ ಮೇಲೆ ಬೀಳುತ್ತಿತ್ತು ಸದ್ಯ ದೊಡ್ಡ ದುರಂತ ತಪ್ಪಿದೆ.
ಎರಡು ತಿಂಗಳ ಹಿಂದೆಯೇ ಶಾಲೆ ಮುಖ್ಯ ಶಿಕ್ಷಕರು ಮರ ತೆರವಿಗೆ ಅರಣ್ಯ ಇಲಾಖೆ ಹಾಗೂ ನಗರಸಭೆಗೆ ಪತ್ರ ಬರೆದಿ ದ್ದರು.ಆದ್ರೂ ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರಿತ್ತು ಆದ್ರೆ ಈಗ ಮರ ಬಿದ್ದಿದೆ.ಇನ್ನು ಈ ಸುದ್ದಿ ಕೇಳಿ ಪಾಲಕರು ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಯತ್ತ ಓಡಿ ಬಂದಿದ್ದಾರೆ. ಇದೇ ಶಾಲೆ ಆವರಣದಲ್ಲಿ ಅಂಗನವಾಡಿ ಕೇಂದ್ರ ಕೂಡ ಇದೆ.ನಗರಸಭೆ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.ತಕ್ಷಣ ಅಪಾಯಕಾರಿ ಮರಗಳ ತೆರವಿಗೆ ಒತ್ತಾಯ ಮಾಡಿದ್ದಾರೆ.