ಧಾರವಾಡ –
ತಡಕೋಡ ಗ್ರಾಮದಲ್ಲಿ ಯಶಸ್ವಿಯಾಗಿ ನಡೆಯಿತು ಬೃಹತ್ ಕಾರ್ಯಕರ್ತರ ಸಮಾವೇಶ ಧಣಿ ಕ್ಷೇತ್ರದಲ್ಲಿ ಪ್ರಹ್ಲಾದ್ ಜೋಶಿ ಯವರಿಗೆ ಸಿಕ್ಕಿತು ಅಭೂತಪೂರ್ವ ಬೆಂಬಲ…..ಹೌದು
ಲೋಕಸಭಾ ಚುನಾವಣೆಯ ಅಂಗವಾಗಿ ಧಾರವಾಡ 71 ಮತಕ್ಷೇತ್ರದ ಗರಗ ಜಿಲ್ಲಾ ಪಂಚಾಯತ ವ್ಯಾಪ್ತಿಯ ತಡಕೋಡ ಗ್ರಾಮದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.ಧಾರವಾಡ ಲೋಕಸಭಾ ಅಭ್ಯರ್ಥಿಯಾದ ಪ್ರಲ್ಹಾದ ಜೋಶಿ ಅವರೊಂ ದಿಗೆ ಬಿಜೆಪಿ ನಾಯಕರು ಮತಯಾಚನೆ ಮಾಡಿದರು
2014ರಲ್ಲಿ ಬಿಜೆಪಿಯು ಅಧಿಕಾರಕ್ಕೆ ಬರುವು ದರೊಂದಿಗೆ ಭಾರತದ ಸುವರ್ಣ ಯುಗದ ಆರಂಭವಾಯಿತು.ಅಂದಿನಿಂದ ನಮ್ಮ ಧಾರವಾಡದಲ್ಲೂ ಸಮರ್ಪಕ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಾ ಬಂದಿದೆ. ಈ ಸುವರ್ಣ ಯುಗದ ಪರ್ವ ತಲುಪಲು ಬಿಜೆಪಿಯು ಬಹುಮತದಿಂದ
ಈ ಬಾರಿಯೂ ಗೆಲ್ಲಬೇಕಾಗಿದೆ ಎಂದು ನಂಬಿರುವ ಕಾರ್ಯಕರ್ತರು ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಲು ಶ್ರಮಿಸುವುದಾಗಿ ಉತ್ಸಾಹದಿಂದ ತಮ್ಮ ಬೆಂಬಲ ಸೂಚಿಸಿದರು.
ಸಮಾವೇಶದಲ್ಲಿ ಮಾಜಿ ಶಾಸಕರಾದ ಶ್ರೀಮತಿ ಸೀಮಾ ಮಸೂತಿ ,ಬಿಜೆಪಿ ಜಿಲ್ಲಾಧ್ಯಕ್ಷರಾದ ನಿಂಗಪ್ಪ ಸುತಗಟ್ಟಿ, ಮಂಡಲ ಅಧ್ಯಕ್ಷರಾದ ರುದ್ರಪ್ಪ ಅರಿವಾಳದ, ಅಶೋಕ್ ದೇಸಾಯಿ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಗುರುರಾಜ ಹುಣಸಿ ಮರದ, ಜೆಡಿಎಸ್ ತಾಲೂಕ ಅಧ್ಯಕ್ಷರಾದ ಚಿದಂಬರ ನಾಡಗೌಡರ,
ಬಿಜೆಪಿ ಪ್ರಮುಖರಾದ ಶಂಕರ ಮುಗದ, ಶ್ರೀಮತಿ ಸವಿತಾ ಅಮರಶೆಟ್ಟಿ, ಹಾಗೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ……