ಬೆಳಗಾವಿ –
ಕಾರಿನಲ್ಲಿ ಶ್ರೀಗಂಧದ ಕಟ್ಟಿಗೆ ಸಾಗಾಟ ಮಾಡುತ್ತಿದ್ದ ಪತ್ರಕರ್ತನ ಬಂಧನ – ಸಿಕ್ಕಿಬಿದ್ದ ಪತ್ರಕರ್ತ ಇನ್ನೂಳಿದ ಪತ್ರಕರ್ತರು ಎಸ್ಕೇಫ್
ಕಾರಿನಲ್ಲಿ ಶ್ರೀಗಂಧದ ಕಟ್ಟಿಗೆಯ ತುಂಡುಗಳನ್ನು ಸಾಗಿಸುತ್ತಿದ್ದ ನಕಲಿ ಪತ್ರಕರ್ತರೊಬ್ಬನನ್ನು ಬಂಧನ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಒಂದು ಕಡೆ ದಿನದಿಂದ ದಿನಕ್ಕೆ ನಕಲಿ ಯೂಟ್ಯೂಬ್ ವರದಿಗಾರರ ಹಾವಳಿ ಹೆಚ್ಚಾ ಗುತ್ತಿದ್ದು ಇದೀಗ ಹುಕ್ಕೇರಿ ಅರಣ್ಯ ಇಲಾಖೆಯ ಅರಣ್ಯಾಧಿಕಾರಿ ಪ್ರಸನ್ನ ಬೆಲ್ಲದ ನೇತೃತ್ವದಲ್ಲಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಪತ್ರಕರ್ತರ ಸೋಗಿನಲ್ಲಿ ಶ್ರೀಗಂಧದ ಮರದ ತುಂಡುಗಳನ್ನ ಸಾಗಿಸುತ್ತಿದ್ದ ಓರ್ವ ನಕಲಿ ಪತ್ರಕರ್ತನನ್ನು ಬಂಧಿಸಿದ್ದಾರೆ.
ಪತ್ರಕರ್ತರ ಸೋಗಿನಲ್ಲಿ ಶ್ರೀಗಂಧದ ಮರದ ತುಂಡುಗಳನ್ನ ಸಾಗಿಸುತ್ತಿದ್ದ ಓರ್ವ ನಕಲಿ ಪತ್ರಕರ್ತನನ್ನು ಹುಕ್ಕೇರಿ ಅರಣ್ಯ ಇಲಾಖೆಯ
ಅರಣ್ಯಾಧಿಕಾರಿ ಪ್ರಸನ್ನ ಬೆಲ್ಲದ ನೇತೃತ್ವದಲ್ಲಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕಾರಿನ ಮೇಲೆ ಮೀಡಿಯಾ ಎಂದು ಬರೆಯಿಸಿ ಸ್ಮಗ್ಲಿಂಗ್ ಮಾಡುತ್ತಿದ್ದರು.ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದ ಬಳಿ ದಾಳಿ ನಡೆಸಿ 40 ಕೆಜಿ ಶ್ರೀಗಂಧ ಹಾಗೂ ಕಳ್ಳ ಸಾಗಾಟಕ್ಕೆ ಬಳಸಿದ್ದ ಕಾರನ್ನು ಜಪ್ತಿ ಮಾಡಿದ್ದಾರೆ.
ಆರೋಪಿ ಪುಂಡಲೀಕ ಭಜಂತ್ರಿಯನ್ನು ವಶಕ್ಕೆ ಪಡೆಯಲಾಗಿದೆ.ಇನ್ನುಳಿದ ಪತ್ರಕರ್ತರು ಪರಾರಿಯಾಗಿದ್ದಾರೆ.ಪರಸಪ್ಪ ಭಜಂತ್ರಿ ಎಂಬು ವರಿಗೆ ಸೇರಿದ ಕಾರಿನಲ್ಲಿ ಪುಂಡಲೀಕ ಭಜಂತ್ರಿ ಎಂಬುವರ ನಕಲಿ ಯೂಟ್ಯೂಬ್ ಐಡಿ ಪತ್ತೆ ಯಾಗಿದೆ.ಇನ್ನು ಗಡಿ ಜಿಲ್ಲೆ ಬೆಳಗಾವಿಯಲ್ಲಿ ದಿನದಿಂದ ದಿನಕ್ಕೆ ನಕಲಿ ಯೂಟ್ಯೂಬ್ ವರದಿಗಾರರ ಹಾವಳಿ ಹೆಚ್ಚಾಗುತ್ತಿದ್ದು ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.
ಸುದ್ದಿ ಸಂತೆ ನ್ಯೂಸ್ ಬೆಳಗಾವಿ…..