ಬಸವಕಲ್ಯಾಣ –
ಪೊಲೀಸ್ ಕಾನ್ಸ್‌ಟೇಬಲ್ ರೊಬ್ಬರ ಮನೆಗೆ ಕನ್ನ ಹಾಕಿದ ಘಟನೆ ಬೀದರ್ ನ ಬಸವಕಲ್ಯಾಣ ದಲ್ಲಿ ನಡೆದಿದೆ. ನಗರದ ಗಣೇಶ ನಗರದಲ್ಲಿನ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಸುಧಾರಾಣಿ ಅವರ ಮನೆ ಯಿಂದ ₹9 ಲಕ್ಷ ಮೌಲ್ಯದ 18 ತೊಲೆ ಚಿನ್ನಾಭರಣ ಹಾಗೂ ₹10 ಸಾವಿರ ನಗದು ಕಳವು ಮಾಡಲಾಗಿ ದೆ.

ಹುಲಸೂರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಧಾರಾಣಿ ಅವರು ಕರ್ತವ್ಯಕ್ಕೆ ಹೋದಾಗ ಹಾಗೂ ಕುಟುಂಬದ ಸದಸ್ಯರು ಮನೆಯಲ್ಲಿ ಇಲ್ಲದಿದ್ದಾಗ ಶುಕ್ರವಾರ ಮಧ್ಯಾಹ್ನ ಕಳವು ಮಾಡಲಾಗಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಹೆಚ್ಚುವರಿ ಎಸ್.ಪಿ ಗೋಪಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಳ್ಳರ ಪತ್ತೆಗೆ ತಂಡ ರಚಿಸಲಾ ಗಿದೆ.