OPS ಗಾಗಿ ಪತ್ರ ಚಳುವಳಿ ಆರಂಭಿಸಿದ ನೌಕರರು – ಫೆಬ್ರುವರಿ 7 ರಂದು ನಡೆಯಲಿದೆ ದೊಡ್ಡ ಪ್ರಮಾಣದಲ್ಲಿ ಹೋರಾಟ…..

Suddi Sante Desk
OPS ಗಾಗಿ ಪತ್ರ ಚಳುವಳಿ ಆರಂಭಿಸಿದ ನೌಕರರು – ಫೆಬ್ರುವರಿ 7 ರಂದು ನಡೆಯಲಿದೆ ದೊಡ್ಡ ಪ್ರಮಾಣದಲ್ಲಿ ಹೋರಾಟ…..

ಬೆಂಗಳೂರು

ರಾಜ್ಯ ಸರ್ಕಾರಿ ನೌಕರರು ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರತಿಭಟನೆ ಮುಂದಾಗಿದ್ದಾರೆ. ಈಗಾಗಲೇ ಜನವರಿ 20ರಿಂದ 31ರವರೆಗೆ ಓಪಿಎಸ್ ಜಾರಿಗಾಗಿ ಅನುದಾನಿತ ಶಾಲಾ-ಕಾಲೇಜುಗಳ ನೌಕರರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಚಳುವಳಿಯನ್ನು ಆರಂಭಿಸಿದ್ದಾರೆ.ಫೆಬ್ರವರಿ 7ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಧರಣಿ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದಾರೆ.

ಈ ಕುರಿತು ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ ಹನುಮಂತಪ್ಪ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಅನುದಾನಿತ ಮತ್ತು ಸರ್ಕಾರಿ ನೌಕರರುಗಳಿಗೆ ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯವನ್ನು ದಿ:1.4.2006 ರಿಂದ ರದ್ದುಪಡಿಸಲಾಗಿದ್ದು, ಭವಿಷ್ಯದ ಬದುಕು ಅತಂತ್ರವಾಗಿದೆ.

ಈ ಕುರಿತು ಕಳೆದ 15 ವರ್ಷಗಳಿಂದ ನಮ್ಮ ಸಂಘಟನೆ ಹಾಗೂ ರಾಜ್ಯ ಸರ್ಕಾರಿ NPS ನೌಕರರ ಸಂಘಟನೆ ಹೋರಾಟ ಮಾಡುತ್ತಾ ಬಂದಿದೆ. ಈ ಪರಿಣಾಮ ಪ್ರಸ್ತುತ ಆಡಳಿತ ರೂಢ ಸರ್ಕಾರ ತನ್ನ ಚುನಾವಣಾ ಪೂರ್ವದ ಪ್ರಣಾಳಿಕೆಯಲ್ಲಿ ನಮಗೆ OPS ಭರವಸೆ ಯನ್ನ ನೀಡಿರುತ್ತದೆ ಎಂದಿದ್ದಾರೆ.ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಮುಗಿಯುತ್ತಾ ಬಂದರೂ ನಮ್ಮ ಬೇಡಿಕೆ ಇನ್ನೂ ಈಡೇರಿರುವುದಿಲ್ಲ.

ಹಾಗಾಗಿ ಸರ್ಕಾರದ ಗಮನ ಸೆಳೆಯಲು ಇದೇ ಜನವರಿ 20 ರಿಂದ 31 ನೇ ತಾರೀಕಿನ ತನಕ ಮುಖ್ಯಮಂತ್ರಿಗಳಿಗೆ ಪ್ರತಿಯೊಬ್ಬ ಅನುದಾನಿತ ಶಾಲಾ-ಕಾಲೇಜುಗಳ ಹಾಗೂ ಸರ್ಕಾರಿ NPS ನೌಕರರು ಪತ್ರವನ್ನು ಬರೆಯುವಂತೆ ವಿನಂತಿಸಿದ್ದಾರೆ. ಫೆಬ್ರವರಿ 7ನೇ ತಾರೀಕು ರಾಜ್ಯ ಸರ್ಕಾರಿ NPS ನೌಕರರ ಸಂಘದ ನೇತೃತ್ವದಲ್ಲಿ ನಡೆಯುವ ಬೃಹತ್ ಧರಣಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ಇದರಲ್ಲಿ ಎಲ್ಲಾ ಅನುದಾನಿತ ನೌಕರರು ತಪ್ಪದೆ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.