ಕಲಬುರಗಿ –
ಹಿಂದೂ ಪರ ಸಂಘಟನೆಯ ನಾಯಕನನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ಕಲಬುರಗಿ ಯಲ್ಲಿ ನಡೆದುದೆ.ಹೌದು ಮಾರಕಾಸ್ತ್ರಗಳಿಂದ ಹೊಡೆದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಕಲಬುರಗಿಯ ಬಾಲ ಮಂದಿರದ ಬಳಿ ಬುಧವಾರ ನಡೆದಿದೆ.
ಶೀತಲ್ ಜೈನ್ (35) ಕೊಲೆಯಾದ ವ್ಯಕ್ತಿಯಾಗಿ ದ್ದಾನೆ.ಈತನು ಹಿಂದೂ ಪರ ಸಂಘಟನೆ ನಾಯಕ ನಾಗಿದ್ದು ಕಲಬುರಗಿ ನಗರದ ದೇವಿ ನಗರ ನಿವಾಸಿ ಯಾಗಿದ್ದಾನೆ.
ಆಫ್ರಿನ್ ಅನ್ನೋ ಮಹಿಳೆ ಜೊತೆ ಶೀತಲ್ ಜೈನ್ ಬಾಲ ಮಂದಿರಕ್ಕೆ ಬಂದಿದ್ದನು ಆಫ್ರೀನ್ ಅವರ ಇಬ್ಬರು ಮಕ್ಕಳು ಬಾಲ ಮಂದಿರದಲ್ಲಿದ್ದರು. ಮಕ್ಕಳ ನ್ನು ಕರೆದುಕೊಂಡು ಹೋಗಲು ಬಾಲ ಮಂದಿರಕ್ಕೆ ಶೀತಲ್ ಜೈನ್ ಜೊತೆ ಆಫ್ರೀನ್ ಬಂದಿದ್ದರು.
ಈ ವೇಳೆ ಆಫ್ರಿನ್ ಅವರ ಸಹೋದರರು ಕುಲುಸುಂ ಬಿ, ಅಮ್ಜದ್ ಮತ್ತು ಮೆಹಬೂಬ್ ಎನ್ನುವರು ಶೀತ ಲ್ ಜೈನ್ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಈ ಕುರಿತು ಕಲಬುರಗಿಯ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕ ರಣ ದಾಖಲಾಗಿದೆ