ಬೆಂಗಳೂರು –
ಎನ್ ಪಿ ಎಸ್ ವಿಚಾರ ಕುರಿತಂತೆ ಡಿಸೆಂಬರ್ 19 ರಂದು ಬೆಂಗಳೂರಿನಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ನಡೆಯಲಿದೆ. ಈ ಒಂದು ವಿಚಾರ ಕುರಿತಂತೆ ಈಗಾಗಲೇ ರಾಜ್ಯಾಧ್ಯಂತ ಕಳೆದ ಒಂದೂವರೆ ತಿಂಗಳಿನಿಂದ ಗಲ್ಲಿ ಗಲ್ಲಿಯಲ್ಲೂ ಉತ್ಸಾಹ ಹುಮ್ಮಸ್ಸಿನಿಂದ ಸರ್ಕಾರಿ ನೌಕರರು ಹೋರಾಟವನ್ನು ಮಾಡುತ್ತಿದ್ದಾರೆ.ಅಲ್ಲದೇ ಆಂದೋಲವನ್ನು ಮಾಡುತ್ತಿದ್ದು ಡಿಸೆಂಬರ್ 19 ರಂದು ಬೆಂಗಳೂರಿನಲ್ಲಿ ಮಾಡು ಇಲ್ಲವೇ ಮಡಿ ಹೋರಾಟವನ್ನು ಮಾಡಲು ಪ್ಲಾನ್ ಮಾಡಿಕೊಂ ಡಿದ್ದು ಈಗಾಗಲೇ ರಾಜ್ಯದ ಎನ್ ಪಿಎಸ್ ಸರ್ಕಾರಿ ನೌಕರರು ಸಿದ್ದರಾಗಿದ್ದಾರೆ.ಇನ್ನೂ ಇದರ ನಡುವೆ ಈ ಒಂದು ವಿಚಾರ ಕುರಿತಂತೆ ಪತ್ರವೊಂದು ವೈರಲ್ ಆಗಿದೆ
ಎಲ್ಲರಿಗೂ ನಮಸ್ಕಾರ…..
ಡಿಸೆಂಬರ್ 19 ಫ್ರೀಡಂ ಪಾರ್ಕ್ ಬೆಂಗಳೂರು ಇಲ್ಲಿಗೆ ಬರಲು ಸರ್ಕಾರಿ ನೌಕರರ ಸಿದ್ದರಾಗಿ ಹಾಗೆ ಇದನ್ನು ಓದುತ್ತ ಹೋಗಿ ಎಲ್ಲ ನೌಕರರ ಗುಂಪಿಗೆ ಇದನ್ನು ಶೇರ್ ಮಾಡಿ ನಾನು Freedom Park ನಿಮ್ಮಲ್ಲಿ ಕಳಕಳಿ ವಿನಂತಿ.ಅಂದು 2018 ರ ಜನವರಿ 20ಕ್ಕೆ ನೀವೆಲ್ಲರೂ ಲಕ್ಷ ಲಕ್ಷ ನೌಕರರು ಜೊತೆಯಾಗಿ ಬಂದಾಗ ಇಡೀ ಬೆಂಗಳೂರಿಗೆ ಬೆಂಗಳೂರೇ ಬೆರಗಾಗಿತ್ತು ನಿಮ್ಮ ಶಿಸ್ತು ಬದ್ಧ ಜಾಥಾ,ಧರಣಿ ಹಾಗೂ ಹೋರಾಟಕ್ಕೆ ನಾನು ನೋಡಿದಂತೆ ಕರ್ನಾಟಕದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಹೋರಾಟ ನಡೆದಿರಲಿಲ್ಲ..
ಈಗ ಮತ್ತೆ 4 ವರ್ಷಗಳ ಬಳಿಕ ನೀವು ಇಂತಹದ್ದೆ ದೊಡ್ಡ ಹೋರಾಟ ಕೈಗೆತ್ತಿಕೊಂಡಿರುವುದು ನನ ಗಂತೂ ಸಂತಸ ನೀಡಿದೆ. ನಿಮ್ಮ ಅಂತಿಮ ಮಾಡು ಇಲ್ಲವೇ ಮಡಿ ಹೋರಾಟಕ್ಕಾಗಿ ನಾನಂತೂ ಸಿದ್ಧನಾಗಿದ್ದೇನೆ ಕಾತುರತೆಯಿಂದ ನಿಮ್ಮನ್ನು ಕಾಯುತ್ತಿದ್ದೇನೆ.ಎನ್ ಪಿ ಎಸ್ ಕರಾಳತೆ ನಿಮಗೆ ಮತ್ತೆ ಮತ್ತೆ ವಿವರಿಸುವ ಅಗತ್ಯ ಇಲ್ಲ ಎಂದು ಭಾವಿಸಿಕೊಳ್ಳೋತ್ತೇನೆ.. ರಾಜ್ಯದಲ್ಲಿ ಎನ್ ಪಿ ಎಸ್ ಯೋಜನೆ ಪ್ರಾರಂಭವಾಗಿ ಬರೋಬ್ಬರಿ 16 ವರ್ಷಗಳೇ ಕಳೆದಿವೆ.6 ವರ್ಷಗಳಿಂದ ಎನ್ ಪಿ ಎಸ್ ರದ್ಧತಿಗಾಗಿ ಕಟ್ಟಿಕೊಂಡ ಸಂಘಟನೆ, ಅನೇಕ ಐತಿಹಾಸಿಕ ಹೋರಾಟಗಳನ್ನೇ ಮಾಡಿ ಬಿಟ್ಟಿದೆ.
ನೀವೆಲ್ಲರೂ ಪ್ರತೀ ಹೋರಾಟ ದಲ್ಲೂ ಸಂಘಟನೆ ಜೊತೆಗಿದ್ರಿ ಕೇಳದೆ ಜೊತೆಯಾಗಿದ್ದೀರಿ ಯಾಕಂದ್ರೆ ಇದು ನಿಮ್ಮ ಪಿಂಚಣಿಗಾಗಿ ನೀವು ಮಾಡುತ್ತಿರುವ ಹೋರಾಟ. ನಿಮ್ಮ ಬಗ್ಗೆ, ನಿಮ್ಮ ಸಹಭಾಗಿತ್ವಕ್ಕೆ ಸಂಘಟನೆಗೆ ಅಭಿಮಾನವಿದೆ.6 ವರ್ಷಗಳಿಂದ ಅದೇನೋ ನೆಪಗಳನ್ನು ತೊಂದ್ರೆಗಳನ್ನು ಹೇಳಿ ಕೊಂಡು ಹೋರಾಟದಲ್ಲಿ ಭಾಗವಹಿಸದೆ ಇರುವ ವರು ಕೊನೆಯ ಅವಕಾಶದಲ್ಲಿ ಕೊನೆಯ ಬಸ್ಸಿ ಗಾದ್ರೂ ಹೊರಟು ಬಿಡಿ ಬೇಕಾದ್ರೆ ನೀವು ಬಂದೆ ಎನ್ ಪಿ ಎಸ್ ರದ್ದಾಗಿದ್ದು ಎಂದೇ ಘಂಟಾಘೋ ಷವಾಗಿ ಹೇಳಿಕೊಂಡು ತಿರುಗಿ ನಿಮ್ಮ ಬೇಡಿಕೆ ಈಡೇರಿಸಿಕೊಳ್ಳಿ ಅಷ್ಟೆ.ನೇಮಕಾತಿ ಆದೇಶಕ್ಕಾಗಿ ಡೆಲ್ಲಿಗೂ ತೆರಳಲು ಸಿದ್ದರಿರುವ ನೀವು ನಿವೃತ್ತಿ ಪಿಂಚಣಿಗಾಗಿ ಒಂದು ದಿನ ನನ್ನಲ್ಲಿಗೆ ಬರಲು ಅದೆಷ್ಟು ಕಾರಣ ಹುಡುಕುವಿರಿ ಅದೆಷ್ಟೋ ಜನ ನನ್ನಲ್ಲಿ ಬಂದು ಹೋರಾಟ ಮಾಡಿ ಅವರವರ ಬೇಡಿಕೆಗಳನ್ನು ಈಡೇರಿಸಿಕೊಂಡಿದ್ದಾರೆ.
ನೀವು ಬಹುಸಂಖ್ಯೆಯಲ್ಲಿದ್ದೀರಿ.ಅದ್ಭುತ ಸಂಘಟನೆ ನಿಮ್ಮದಾಗಿದೆ ಅಂದು ಬಂದವರು ಮತ್ತೆ ಖಂಡಿತ ಬರುವಿರೆಂಬ ನಂಬಿಕೆ ನನಗಿದೆ ಆದರೆ ಇಂದು ಮಾತ್ರ ಎಲ್ಲರೂ ಬನ್ನಿ ಎಲ್ಲರಿಗೂ ಆಗುವಾಗ ನಮಗೂ ಆಗುತ್ತೆ ಅನ್ನೋ ಮನೋ ಭಾವನೆ ಬೇಡ ಯಾರೋ ಬಂದು ಹೋರಾಟ ಮಾಡಿ ಪಡೆದ ಪ್ರತಿಫಲ ನಿಮಗೆ ಬೇಕಾ ಅಥವಾ ನಿಮಗಾಗಿ ನೀವೇ ಹೋರಾಟ ಮಾಡುವಿರಾ ಯೋಚಿಸಿ ನನ್ನಲ್ಲಿ ಬರಲು ನಿಮಗಿದು ಕೊನೆಯ ಅವಕಾಶ ಮುಂದಿನ ವರ್ಷ ನೋಡೋಣ ಎಂದರೆ ಅವಕಾಶ ಇಲ್ಲ ಯಾಕಂದ್ರೆ ಇದು ನಿಮ್ಮ ಮಾಡು ಇಲ್ಲವೇ ಮಡಿ ಹೋರಾಟ ಈ ಬಾರಿ ನಿಮ್ಮ ಬೇಡಿಕೆ ಈಡೇರಿಸಿಯೇ ನಿಮ್ಮನ್ನು ನಾನು ಇಲ್ಲಿಂದ ಬಿಟ್ಟು ಕಳುಹಿಸಿ ಕೊಡುವುದು ಅದೆಷ್ಟೇ ದೊಡ್ಡ ಸಂಖ್ಯೆಯಲ್ಲಿ ಬಂದ್ರೂ ನಾನು ನಿಮಗೆ ಆಶ್ರಯ ನೀಡುತ್ತೇನೆ. ಬೇಡಿಕೆ ಈಡೇರುವವ ರೆಗೂ ನೀವು ಇಲ್ಲೇ ಇರಲು ನಾನು ಸಕಲ ಸಿದ್ಧತೆ ಮಾಡಿಕೊಂಡಿದ್ದೇನೆ.
ಬನ್ನಿ…..ಇದೇ ಡಿಸೆಂಬರ್ 19ರಿಂದ ನಿಮ್ಮದೇ ನಿರೀಕ್ಷೆಯಲ್ಲಿದ್ದೇನೆ.
ಇಂತಿ ನಿಮ್ಮ…..ಫ್ರೀಡಂ ಪಾರ್ಕ್ ಬೆಂಗಳೂರು
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..
ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಒಂದು ಪತ್ರ – ಡಿಸೆಂಬರ್ 19 ರ ಫ್ರೀಡಂ ಪಾರ್ಕ್ ಗೆ ಬರಲು ಸಿದ್ದರಾಗಿ ಈ ಒಂದು ಪತ್ರವನ್ನು ಓದುತ್ತಾ ಪ್ರತಿಯೊಬ್ಬರಿಗೂ ಶೇರ್ ಮಾಡಿ
ಬೆಂಗಳೂರು –
ಎನ್ ಪಿ ಎಸ್ ವಿಚಾರ ಕುರಿತಂತೆ ಡಿಸೆಂಬರ್ 19 ರಂದು ಬೆಂಗಳೂರಿನಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ನಡೆಯಲಿದೆ. ಈ ಒಂದು ವಿಚಾರ ಕುರಿತಂತೆ ಈಗಾಗಲೇ ರಾಜ್ಯಾಧ್ಯಂತ ಕಳೆದ ಒಂದೂವರೆ ತಿಂಗಳಿನಿಂದ ಗಲ್ಲಿ ಗಲ್ಲಿಯಲ್ಲೂ ಉತ್ಸಾಹ ಹುಮ್ಮಸ್ಸಿನಿಂದ ಸರ್ಕಾರಿ ನೌಕರರು ಹೋರಾಟವನ್ನು ಮಾಡುತ್ತಿದ್ದಾರೆ.ಅಲ್ಲದೇ ಆಂದೋಲವನ್ನು ಮಾಡುತ್ತಿದ್ದು ಡಿಸೆಂಬರ್ 19 ರಂದು ಬೆಂಗಳೂರಿನಲ್ಲಿ ಮಾಡು ಇಲ್ಲವೇ ಮಡಿ ಹೋರಾಟವನ್ನು ಮಾಡಲು ಪ್ಲಾನ್ ಮಾಡಿಕೊಂಡಿದ್ದು ಈಗಾಗಲೇ ರಾಜ್ಯದ ಎನ್ ಪಿಎಸ್ ಸರ್ಕಾರಿ ನೌಕರರು ಸಿದ್ದರಾಗಿದ್ದಾರೆ.ಇನ್ನೂ ಇದರ ನಡುವೆ ಈ ಒಂದು ವಿಚಾರ ಕುರಿತಂತೆ ಪತ್ರವೊಂದು ವೈರಲ್ ಆಗಿದೆ
ಎಲ್ಲರಿಗೂ ನಮಸ್ಕಾರ…..
ಡಿಸೆಂಬರ್ 19 ಫ್ರೀಡಂ ಪಾರ್ಕ್ ಬೆಂಗಳೂರು ಇಲ್ಲಿಗೆ ಬರಲು ಸರ್ಕಾರಿ ನೌಕರರ ಸಿದ್ದರಾಗಿ ಹಾಗೆ ಇದನ್ನು ಓದುತ್ತ ಹೋಗಿ ಎಲ್ಲ ನೌಕರರ ಗುಂಪಿಗೆ ಇದನ್ನು ಶೇರ್ ಮಾಡಿ ನಾನು Freedom Park ನಿಮ್ಮಲ್ಲಿ ಕಳಕಳಿ ವಿನಂತಿ.ಅಂದು 2018 ರ ಜನವರಿ 20ಕ್ಕೆ ನೀವೆಲ್ಲರೂ ಲಕ್ಷ ಲಕ್ಷ ನೌಕರರು ಜೊತೆಯಾಗಿ ಬಂದಾಗ ಇಡೀ ಬೆಂಗಳೂರಿಗೆ ಬೆಂಗಳೂರೇ ಬೆರಗಾಗಿತ್ತು ನಿಮ್ಮ ಶಿಸ್ತು ಬದ್ಧ ಜಾಥಾ,ಧರಣಿ ಹಾಗೂ ಹೋರಾಟಕ್ಕೆ ನಾನು ನೋಡಿದಂತೆ ಕರ್ನಾಟಕದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಹೋರಾಟ ನಡೆದಿರಲಿಲ್ಲ..
ಈಗ ಮತ್ತೆ 4 ವರ್ಷಗಳ ಬಳಿಕ ನೀವು ಇಂತಹದ್ದೆ ದೊಡ್ಡ ಹೋರಾಟ ಕೈಗೆತ್ತಿಕೊಂಡಿರುವುದು ನನಗಂತೂ ಸಂತಸ ನೀಡಿದೆ. ನಿಮ್ಮ ಅಂತಿಮ ಮಾಡು ಇಲ್ಲವೇ ಮಡಿ ಹೋರಾಟಕ್ಕಾಗಿ ನಾನಂತೂ ಸಿದ್ಧನಾಗಿದ್ದೇನೆ ಕಾತುರತೆಯಿಂದ ನಿಮ್ಮನ್ನು ಕಾಯುತ್ತಿದ್ದೇನೆ.ಎನ್ ಪಿ ಎಸ್ ಕರಾಳತೆ ನಿಮಗೆ ಮತ್ತೆ ಮತ್ತೆ ವಿವರಿಸುವ ಅಗತ್ಯ ಇಲ್ಲ ಎಂದು ಭಾವಿಸಿಕೊಳ್ಳೋತ್ತೇನೆ.. ರಾಜ್ಯದಲ್ಲಿ ಎನ್ ಪಿ ಎಸ್ ಯೋಜನೆ ಪ್ರಾರಂಭವಾಗಿ ಬರೋಬ್ಬರಿ 16 ವರ್ಷಗಳೇ ಕಳೆದಿವೆ.6 ವರ್ಷಗಳಿಂದ ಎನ್ ಪಿ ಎಸ್ ರದ್ಧತಿಗಾಗಿ ಕಟ್ಟಿಕೊಂಡ ಸಂಘಟನೆ, ಅನೇಕ ಐತಿಹಾಸಿಕ ಹೋರಾಟಗಳನ್ನೇ ಮಾಡಿಬಿಟ್ಟಿದೆ.ನೀವೆಲ್ಲರೂ ಪ್ರತೀ ಹೋರಾಟ ದಲ್ಲೂ ಸಂಘಟನೆ ಜೊತೆಗಿದ್ರಿ ಕೇಳದೆ ಜೊತೆಯಾಗಿದ್ದೀರಿ ಯಾಕಂದ್ರೆ ಇದು ನಿಮ್ಮ ಪಿಂಚಣಿಗಾಗಿ ನೀವು ಮಾಡುತ್ತಿರುವ ಹೋರಾಟ. ನಿಮ್ಮ ಬಗ್ಗೆ, ನಿಮ್ಮ ಸಹಭಾಗಿತ್ವಕ್ಕೆ ಸಂಘಟನೆಗೆ ಅಭಿಮಾನವಿದೆ.6 ವರ್ಷಗಳಿಂದ ಅದೇನೋ ನೆಪಗಳನ್ನು ತೊಂದ್ರೆಗಳನ್ನು ಹೇಳಿಕೊಂಡು ಹೋರಾಟದಲ್ಲಿ ಭಾಗವಹಿಸದೆ ಇರುವವರು ಕೊನೆಯ ಅವಕಾಶದಲ್ಲಿ ಕೊನೆಯ ಬಸ್ಸಿಗಾದ್ರೂ ಹೊರಟು ಬಿಡಿ ಬೇಕಾದ್ರೆ ನೀವು ಬಂದೆ ಎನ್ ಪಿ ಎಸ್ ರದ್ದಾಗಿದ್ದು ಎಂದೇ ಘಂಟಾಘೋಷವಾಗಿ ಹೇಳಿಕೊಂಡು ತಿರುಗಿ ನಿಮ್ಮ ಬೇಡಿಕೆ ಈಡೇರಿಸಿಕೊಳ್ಳಿ ಅಷ್ಟೆ.ನೇಮಕಾತಿ ಆದೇಶಕ್ಕಾಗಿ ಡೆಲ್ಲಿಗೂ ತೆರಳಲು ಸಿದ್ದರಿರುವ ನೀವು ನಿವೃತ್ತಿ ಪಿಂಚಣಿಗಾಗಿ ಒಂದು ದಿನ ನನ್ನಲ್ಲಿಗೆ ಬರಲು ಅದೆಷ್ಟು ಕಾರಣ ಹುಡುಕುವಿರಿ ಅದೆಷ್ಟೋ ಜನ ನನ್ನಲ್ಲಿ ಬಂದು ಹೋರಾಟ ಮಾಡಿ ಅವರವರ ಬೇಡಿಕೆಗಳನ್ನು ಈಡೇರಿಸಿಕೊಂಡಿದ್ದಾರೆ.ನೀವು ಬಹುಸಂಖ್ಯೆಯಲ್ಲಿದ್ದೀರಿ.ಅದ್ಭುತ ಸಂಘಟನೆ ನಿಮ್ಮದಾಗಿದೆ ಅಂದು ಬಂದವರು ಮತ್ತೆ ಖಂಡಿತ ಬರುವಿರೆಂಬ ನಂಬಿಕೆ ನನಗಿದೆ ಆದರೆ ಇಂದು ಮಾತ್ರ ಎಲ್ಲರೂ ಬನ್ನಿ ಎಲ್ಲರಿಗೂ ಆಗುವಾಗ ನಮಗೂ ಆಗುತ್ತೆ ಅನ್ನೋ ಮನೋಭಾವನೆ ಬೇಡ ಯಾರೋ ಬಂದು ಹೋರಾಟ ಮಾಡಿ ಪಡೆದ ಪ್ರತಿಫಲ ನಿಮಗೆ ಬೇಕಾ ಅಥವಾ ನಿಮಗಾಗಿ ನೀವೇ ಹೋರಾಟ ಮಾಡುವಿರಾ ಯೋಚಿಸಿ ನನ್ನಲ್ಲಿ ಬರಲು ನಿಮಗಿದು ಕೊನೆಯ ಅವಕಾಶ ಮುಂದಿನ ವರ್ಷ ನೋಡೋಣ ಎಂದರೆ ಅವಕಾಶ ಇಲ್ಲ ಯಾಕಂದ್ರೆ ಇದು ನಿಮ್ಮ ಮಾಡು ಇಲ್ಲವೇ ಮಡಿ ಹೋರಾಟ ಈ ಬಾರಿ ನಿಮ್ಮ ಬೇಡಿಕೆ ಈಡೇರಿಸಿಯೇ ನಿಮ್ಮನ್ನು ನಾನು ಇಲ್ಲಿಂದ ಬಿಟ್ಟು ಕಳುಹಿಸಿ ಕೊಡುವುದು ಅದೆಷ್ಟೇ ದೊಡ್ಡ ಸಂಖ್ಯೆಯಲ್ಲಿ ಬಂದ್ರೂ ನಾನು ನಿಮಗೆ ಆಶ್ರಯ ನೀಡುತ್ತೇನೆ. ಬೇಡಿಕೆ ಈಡೇರುವವರೆಗೂ ನೀವು ಇಲ್ಲೇ ಇರಲು ನಾನು ಸಕಲ ಸಿದ್ಧತೆ ಮಾಡಿಕೊಂಡಿದ್ದೇನೆ. ಬನ್ನಿ..ಇದೇ ಡಿಸೆಂಬರ್ 19ರಿಂದ ನಿಮ್ಮದೇ ನಿರೀಕ್ಷೆಯಲ್ಲಿದ್ದೇನೆ.
ಇಂತಿ ನಿಮ್ಮ
ಫ್ರೀಡಂ ಪಾರ್ಕ್ ಬೆಂಗಳೂರು
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..