ವಿಜಯಪುರ –
ಲಾರಿ ಹರಿದು ಯುವಕನೊರ್ವ ಸಾವಿಗೀಡಾರುವ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರದ ಇಂಡಸ್ಟ್ರೀಯಲ್ ಏರಿಯಾದಲ್ಲಿ ಈ ಒಂದು ಭಯಾನಕ ರಸ್ತೆ ಅಪಘಾತ ನಡಿದೆದೆ. ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ವೇಗವಾಗಿ ಬೈಕ್ ಬಂದಿದೆ. ಇತ್ತ ಮಿನಿ ಲಾರಿ ಕೂಡಾ ವೇಗವಾಗಿ ಬಂದಿದೆ. ಎದುರಿಗೆ ವೇಗವಾಗಿ ಬರುತ್ದಿದ್ದ ಮಿನಿ ಲಾರಿಯನ್ನು ನೋಡಿದ ಬೈಕ್ ಸವಾರ ಬೈಕ್ ನ್ನು ನಿಯಂತ್ರಣ ಮಾಡುವ ಅವಸರದಲ್ಲಿ ಮುಂದಿನ ಬ್ರೇಕ್ ಹಾಕಿದ್ದಾರೆ.

ವೇಗವಾಗಿ ಹೋಗುತ್ತಿದ್ದ ಬೈಕ್ ಸ್ಕೀಡ್ ಆಗಿ ಬಿದ್ದಿದೆ. ಇತ್ತ ಬೈಕ್ ನೆಲಕ್ಕೇ ಬೀಳುತ್ತಿದ್ದಂತೆ ಅತ್ತ ಬೈಕ್ ಸವಾರನ ಮೇಲೆ ಮಿನಿ ಲಾರಿ ಹತ್ತಿದೆ. ಈ ಭಯಾನಕ ದೃಶ್ಯ ನೋಡಿದ್ರೆ ಭಯವಾಗುತ್ತದೆ.

ಬೈಕ್ ಮೇಲೆ ತೆರಳುತ್ತಿದ್ದವನ ಮೇಲೆ ಹರಿದ ಲಾರಿಯಿಂದ ಸ್ಥಳದಲ್ಲಿಯೇ ಬೈಕ್ ಸವಾರ ಸಾವಿಗೀಡಾಗಿದ್ದಾನೆ. ವಿಜಯಪುರ ನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಈ ಒಂದು ಭಯಾನಕ ಘಟನೆ ನಡೆದಿದ್ದು ಶಶಿಧರ ಕಮತಗಿ ಸಾವನ್ನಪ್ಪಿದ ಯುವಕನಾಗಿದ್ದಾನೆ (30). ವಿಜಯಪುರ ತಾಲ್ಲೂಕಿನ ಮಧಬಾವಿ ನಿವಾಸಿಯಾಗಿರುವ ಶಶಿಧರ ಮದುವೆಯಾಗಿ ಕೇವಲ 4 ತಿಂಗಳ ಕಳೆದಿತ್ತು, ಅಷ್ಟರಲ್ಲೆ ದಾರುಣ ರೀತಿಯಲ್ಲಿ ಈ ಯುವಕ ಸಾವಿಗೀಡಾಗಿದ್ದಾನೆ. ಲಾರಿ ಡಿಕ್ಕಿ ಹೊಡೆದ ವೇಳೆ ಎದ್ದು ಕುಳಿತ ಯುವಕ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವಿಗೀಡಾಗಿದ್ದಾನೆ. ಇಂಡಸ್ಟ್ರಿಯಲ್ ಏರಿಯಾದಲ್ಲಿ ಕೆಲಸ ಮಾಡುತ್ತಿದ್ದ ಶಶಿಧರ ಪ್ರತಿದಿನ ಬೈಕ್ ಮೇಲೆ ಮಧಬಾವಿ ಗ್ರಾಮಕ್ಕೆ ಹೋಗಿ ಬರ್ತಿದ್ದ. ಇನ್ನೂ ವಿಷಯ ತಿಳಿದ.ಎಪಿಎಂಸಿ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿದ್ರು.