ಬೆಂಗಳೂರು –
ಮೇ 16ರಿಂದ ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಪುನರಾರಂಭಗೊಂಡಿವೆ.ಶಾಲೆ ಶುರುವಾಗುತ್ತಿ ದ್ದಂತೆಯೇ ಪಠ್ಯ ಪುಸ್ತಕದ ತಲೆನೋವು ಸಹ ಶುರುವಾಗಿದೆ ಮಕ್ಕಳ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ನೂರೆಂಟು ತಪ್ಪುಗ ಳಾಗಿವೆ.ಹೀಗಾಗಿ ನೂತನ ಪಠ್ಯ ಪರಿಷ್ಕರಣೆ ದಿನಕ್ಕೊಂದು ವಿವಾದಕ್ಕೆ ಕಾರಣವಾಗುತ್ತಿದೆ.ಈ ಬಾರಿ ಶಿಕ್ಷಣ ಇಲಾಖೆ ಕೆಲವರ ಪಾಠವನ್ನು ಪಠ್ಯದಿಂದ ತೆಗೆದುಹಾಕಿ ಹೊಸ ಪಾಠ ಗಳನ್ನು ಸೇರಿಸಿದೆ.ಶಿಕ್ಷಣ ಇಲಾಖೆಯ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.ಈಗಾಗಲೇ 10ನೇ ತರಗತಿಯ ಪಠ್ಯದಲ್ಲಿ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಅವರ ಪಠ್ಯ ಕೈಬಿಟ್ಟು RSS ಸಂಸ್ಥಾಪಕ ಕೇಶವ ಬಲರಾಮ್ ಹೆಡ್ಗೇವಾರ್ ಅವರ ಭಾಷಣ ಸೇರಿಸಿದ್ದು ದೊಡ್ಡ ವಿವಾಧವನ್ನೇ ಸೃಷ್ಟಿಸಿದೆ.ಇದೀಗ ಶಿಕ್ಷಣ ಇಲಾಖೆ ಯಿಂದ ಮತ್ತೊಂದು ಎಡವಟ್ಟಾಗಿದ್ದು ನಾಡಕವಿ, ಜ್ಞಾನ ಪೀಠ ಪುರಷ್ಕೃತ ರಾಷ್ಟ್ರಕವಿ ಕುವೆಂಪುರವರಿಗೂ ಅವ ಮಾನ ಮಾಡಲಾಗಿದೆ.

4ನೇ ತರಗತಿಯ ಪರಿಸರ ಅಧ್ಯಯನ ಪಠ್ಯದಲ್ಲಿ ಕುವೆಂಪು ರವರಿಗೆ ಕಥೆ,ಕವನ ಬರೆಯುವ,ಪುಸ್ತಕ ಓದುವ ಅಭ್ಯಾಸ ವಿತ್ತು.ಆದರೆ ಕುವೆಂಪು ಅನೇಕರ ಪ್ರೋತ್ಸಾಹದಿಂದ ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು ಎಂದು ಪರಿಚ ಯಿಸಲಾಗಿದೆ. ಇದರಿಂದ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪುರವರು ಅನೇಕರ ಪ್ರೋತ್ಸಾ ಹದಿಂದ ಪ್ರಖ್ಯಾತರಾದರಾ ಅನ್ನೋ ಪ್ರಶ್ನೆ ಮೂಡಿದೆ. ದಿನ ಕ್ಕೊಂದು ತಪ್ಪುಗಳು ಹೊರಬರುತ್ತಿರುವುದರಿಂದ ಶಿಕ್ಷಕರೂ ಸಹ ಬೇಸರಗೊಂಡಿದ್ದಾರೆ.


ಪಠ್ಯ ಪರಿಷ್ಕರಣೆಯು ಶಾಲಾ ಶಿಕ್ಷಕರ ಕೆಂಗಣ್ಣಿಗೆ ಗುರಿ ಯಾಗುತ್ತಿದೆ.ನೂತನ ಪರಿಷ್ಕರಣಾ ಸಮಿತಿಯ ನೂರೆಂಟು ತಪ್ಪು ವಿವಾದಗಳು ಈಗ ತೀವ್ರ ಚರ್ಚೆಗೆ ಕಾರಣವಾಗ್ತಿದೆ. ಶಿಕ್ಷಕರು ಸೇರಿದಂತೆ ಅನೇಕರು ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆಗಿರುವ ಮಹಾ ಪ್ರಮಾದ ವನ್ನು ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.