ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಹಿಂದಿ ಶಿಕ್ಷಕರ ಸಂಘ(ರಿ) ದಾವಣಗೆರೆ ಜಿಲ್ಲಾ ಘಟಕ ದಿಂದ ದಾವಣಗೆರೆ ಯ ರೋಟರಿ ಭವನದಲ್ಲಿ ಅದ್ಧೂರಿ ಯಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪ್ರಾಥಮಿಕ ಹಿಂದಿ ಶಿಕ್ಷಕರನ್ನು ಗೌರವಿಸುವ ಸನ್ಮಾನ ಕಾರ್ಯಕ್ರಮ ನಡೆಯಿತು.
ದಾವಣಗೆರೆ ಜಿಲ್ಲೆಯ ಪ್ರಾಥಮಿಕ ಹಿಂದಿ ಶಿಕ್ಷಕರ ಜೀವನೋತ್ಸಾಹದ ಈ ಕಾರ್ಯಕ್ರಮ ಅರ್ಥ ಪೂರ್ಣವಾಗಿ ನಡೆಯಿತು.ಇನ್ನೂ ಸಮಾರಂಭ ದಲ್ಲಿ ಹಲವು ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು
ಪ್ರಾಥಮಿಕ ಹಿಂದಿ ಶಿಕ್ಷಕರಾಗಿ ನೇಮಕಗೊಂಡು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಕಾರ್ಯಗಳ ಮುಖಾಂ ತರ ಸಾಧನೆ ಮಾಡಿರುವ ಸಾಧಕರು ಸ್ಪೂರ್ತಿಯಾ ಗಿದ್ದು ನನ್ನ ಪಾಲಿಗೆ ವಿಶೇಷ ಅನುಭವ ಮತ್ತು ಅನುಕರಣೀಯ ಎಂದು ಖುಷಿ ಕೃಷ್ಣ ಹೇಳಿದರು
ಈ ಕಾರ್ಯಕ್ರಮವನ್ನು ಅತ್ಯಂತ ಶಿಸ್ತು ಬದ್ಧವಾಗಿ ಆಯೋಜಿಸಲು ಶ್ರಮಿಸಿದ ರಾಜ್ಯ ಸಹಕಾರ್ಯ ದರ್ಶಿರವರಿಗೂ ಜಿಲ್ಲಾ ಸಂಘಕ್ಕೂ ಜಿಲ್ಲಾಧ್ಯಕ್ಷ ರಿಗೂ ಎಲ್ಲಾ ತಾಲೂಕು ಅಧ್ಯಕ್ಷರುಗಳು ಮತ್ತು ತಾಲೂಕು ಸಂಘಗಳಿಗೂ ಮತ್ತು ಪ್ರತ್ಯಕ್ಷವಾಗಿ ಮತ್ತು ಪರೋ ಕ್ಷವಾಗಿ ಸಹಕರಿಸಿದ ಎಲ್ಲಾ ಹಿಂದಿ ಶಿಕ್ಷಕರಿಗೂ ಮತ್ತು ಎಲ್ಲಾ ಶಿಕ್ಷಕರಿಗೂ ಹೃದಯಪೂರ್ವಕ ಧನ್ಯವಾದ ಗಳನ್ನು ಹೇಳಿದರು.
ವರದಿ ಖುಷಿ ಕೃಷ್ಣ