ಬೆಂಗಳೂರು –
ಬೆಂಗಳೂರಿನಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿರುವ ಎನ್ ಪಿಎಸ್ ನೌಕರರ ಮಾಡು ಇಲ್ಲವೇ ಪ್ರತಿಭಟನೆ ಯಶಶ್ವಿಯಾಗಿ ನಡೆಯುತ್ತಿದೆ ನಗರದ ಪ್ರೀಡಂ ಪಾರ್ಕ್ ನಲ್ಲಿ ಈ ಒಂದು ಮಾಡು ಇಲ್ಲವೇ ಮಡಿ ಹೋರಾಟವು ನಡೆಯುತ್ತಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆ ಯಲ್ಲಿ ಹೋರಾಟಗಾರರು ಪಾಲ್ಗೊಂಡು ಮರಣ ಶಾಸನವಾಗಿರುವ ಎನ್ ಪಿಎಸ್ ವಿರುದ್ದು ದೊಡ್ಡ ಪ್ರಮಾಣದಲ್ಲಿ ಹೋರಾಟವನ್ನು ಮಾಡುತ್ತಿದ್ದಾರೆ.
ಇನ್ನೂ ಎನ್ ಪಿಎಸ್ ಇದ್ರೆ ಜೋಳಿಗೆ ಒಪಿಎಸ್ ಬಂದ್ರೆ ಎಲ್ಲರಿಗೂ ಹೋಳಿಗೆ ಎಂಬ ಸಂದೇಶ ವೊಂದು ವೈರಲ್ ಆಗಿದೆ.ಹೌದು ಈ ಒಂದು ಮಾತು ನೂರಕ್ಕೆ ನೂರರಷ್ಟು ಸತ್ಯವಾಗಿದ್ದು ಇದಕ್ಕೆ ಕೆಲವೊಂದಿಷ್ಟು ನೌಕರರು ಸಧ್ಯ ನಿವೃತ್ತಿಯ ನಂತರ ಅನುಭವಿಸುತ್ತಿರುವ ಸಂಗತಿಗಳೇ ಸಾಕ್ಷಿಯಾಗಿದ್ದು ಹೀಗಾಗಿ ಇದನ್ನು ಬಲವಾಗಿ ವಿರೋಧಿಸುತ್ತಿರುವ ರಾಜ್ಯದ ಎನ್ ಪಿಎಸ್ ನೌಕರರು ಸಧ್ಯ ದೊಡ್ಡ ಪ್ರಮಾಣದಲ್ಲಿ ಹೋರಾಟವನ್ನು ಮಾಡುತ್ತಿದ್ದಾರೆ.
ಯಾರೇ ಬರಲಿ ಬರದಿರಲಿ ಬೆಂಬಲವನ್ನು ನೀಡಲಿ ನೀಡದಿರಲಿ ಹೀಗೆ ಪ್ರಮುಖ ಬೇಡಿಕೆ ಗಳನ್ನು ಮುಂದಿಟ್ಟುಕೊಂಡಿರುವ ನೌಕರರು ಸಧ್ಯ ಬೆಂಗಳೂರಿನಲ್ಲಿ ಬಿಡುವಿಲ್ಲದೇ ಹಗಲು ರಾತ್ರಿ ಎನ್ನದೇ ಹೋರಾಟವನ್ನು ಮಾಡುತ್ತಿದ್ದು ಮನೆ ಯಲ್ಲಿಯೇ ಕುಳಿತುಕೊಂಡು ಕಾಲಹರಣವನ್ನು ಮಾಡದೇ ನಾಳೆ ಮತ್ತು ನಾಡಿದ್ದು ಎರಡು ದಿನ ಗಳ ರಜೆ ಹೀಗಾಗಿ ಈ ಕೂಡಲೇ ಬೆಂಗಳೂರಿನತ್ತ ಮುಖ ಮಾಡಿ ಹೋರಾಟಕ್ಕೆ ಶಕ್ತಿಯನ್ನು ತುಂಬಿ ಎಂದು ರಾಜ್ಯ ಸಂಘಟನೆಯ ಸಂಘಟನೆಯ ಕಾರ್ಯಕರ್ತರು ಮುಖಂಡರು ಕರೆ ನೀಡಿದ್ದಾರೆ.
ಸುದ್ದಿ ಸಂತೆ ನ್ನೂಸ್ ಬೆಂಗಳೂರು…..