ಬ್ಯಾಕೋಡು –
ಮಣಿಪಾಲ ಆಸ್ಪತ್ರೆಯಲ್ಲಿ ಸಾಗರ ತಾಲೂಕಿನ ಶರಾವತಿ ಕಣಿವೆಯ ದಾರಿಗದ್ದೆಯ ಅತಿಥಿ ಶಿಕ್ಷಕಿಯೊಬ್ಬರಿಗೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.ಶಿಕ್ಷಕಿಗೇ ಅವರ ತಾಯಿಯೇ ಕಿಡ್ನಿದಾನ ಮಾಡಿದ್ದಾರೆ.ವಿಜಯಾ ಜೈನ್ ದಾರಿಗದ್ದೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಇವರಿಗೆ 2 ವರ್ಷಗಳ ಹಿಂದೆ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿತ್ತು.ಎರಡು ಕಿಡ್ನಿ ವೈಫಲ್ಯವಾಗಿರುವುದು ಪರೀಕ್ಷೆಗಳಿಂದ ದೃಢಪಟ್ಟಿತ್ತು. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಕಿಡ್ನಿ ಜೋಡಣೆ ವಿಳಂಬ ವಾಗುತ್ತಿರುವ ಹಿನ್ನೆಲೆಯಲ್ಲಿ ತುಮರಿ ಗ್ರಾಪಂ ಮಾಜಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಮತ್ತು ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕ ಹಣಕಾಸಿನ ನೆರವಿಗೆ ನಾವು ಜತೆ ಇದ್ದೇವೆ ಅಭಿಯಾನ ಆರಂಭಿಸಿದ್ದರು.ಈ ಅಭಿಯಾನಕ್ಕೆ ಅಪಾರವಾದ ಬೆಂಬಲ ಕಂಡು ಬಂದಿತು ಅಭಿಯಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗಿ,ರಾಜ್ಯ ಹೊರರಾಜ್ಯಗಳಿಂದ ಮಾತ್ರ ವಲ್ಲದೇ ವಿದೇಶದಿಂದಲೂ ದಾನಿಗಳು ಹಣಕಾಸು ಬೆಂಬಲ ನೀಡಿದ್ದು 10 ದಿನದಲ್ಲಿ 16 ಲಕ್ಷ ರೂ. ಸಂಗ್ರಹವಾಗಿತ್ತು. ಮಗಳಿಗೆ ತಾಯಿ ಮಣಿರತ್ನ ಅವರೇ ಒಂದು ಕಿಡ್ನಿಯನ್ನು ದಾನ ಮಾಡಿದರು.

ಶಸ್ತ್ರಚಿಕಿತ್ಸೆಗೂ ತೆರಳುವ ಮುನ್ನ ಮಾತನಾಡಿದ ವಿಜಯಾ ಜೈನ್ ಬದುಕು ಮುಕ್ತಾಯ ಎಂದು ಭಾವಿಸಬೇಕಾದ ಹೊತ್ತಿನಲ್ಲಿ ಅಭಿಯಾನ ಮೂಲಕ ಹಣಕಾಸು ನೆರವು ಹರಿದು ಬಂದಿದೆ ಆತ್ಮವಿಶ್ವಾಸ ಹೆಚ್ಚಿದೆ.ಅಭಿಯಾನ ಬೆಂಬಲಿಸಿದ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು ಕಿಡ್ನಿ ವರ್ಗಾವಣೆ ಶಸ್ತ್ರಚಿಕಿತ್ಸೆ ಮಣಿಪಾಲ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದಿದೆ ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ.