ಮಗಳನ್ನೇ ಅಪಹರಣ ಮಾಡಿದ ತಾಯಿ – ತಾಯಿ ಮಾತು ಕೇಳಲಾರದ ಮಗಳ ಕಿಡ್ನ್ಯಾಪ್ – ಹೀಗೂ ಮಾಡ್ತಾರಾ…..!

Suddi Sante Desk

ಶಿರಸಿ – ಹೆತ್ತ ಮಗಳನ್ನೇ ತಾಯಿಯೊಬ್ಬರು ಅಪಹರಣ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ಹೌದು ತನಗೆ ಇಷ್ಟವಿಲ್ಲದೇ ಪ್ರೀತಿಸಿ ಮದುವೆಯಾಗಿದ್ದಕ್ಕೆ ತಾಯಿಯೇ ಮಗಳನ್ನು ಅಪಹರಿಸಿ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ವರದಿಯಾಗಿದೆ.ರುತಿಕಾ ಎಂಬ ಯುವತಿ ಶಿರಸಿಯ ಬಸವೇಶ್ವರ ನಗರದ ಮಣಿಕಂಠ ಎಂಬುವ ಯುವಕನ್ನು ಪ್ರೀತಿಸಿ ಕೆಲವು ದಿನದ ಹಿಂದೆ ವಿವಾಹವಾಗಿದ್ದಳು. ಶಿರಸಿ ನಗರದಲ್ಲಿ ಬ್ಯೂಟಿಪಾರ್ಲರ್ ನಡೆಸುತಿದ್ದ ಆಕೆಯ ತಾಯಿ ರೂಪ ಶಿರ್ಸಿಕರ್ ಗೆ ಇಷ್ಟವಿರಲಿಲ್ಲ.

ಅಪಹರಣಗೊಂಡ ಮಗಳು

ಮಗಳು ತನ್ನ ಮಾತು ಕೇಳದೇ ಬೇರೆ ಯುವಕನನ್ನು ವಿವಾಹವಾಗಿದ್ದಕ್ಕೆ ಕೊಪಿತಗೊಂಡು ಬೆಳಗ್ಗೆ ತನ್ನ ತಾಯಿ ಹಾಗು ಮೂರು ಜನ ಯುವಕರೊಂದಿಗೆ ಬಸವೇಶ್ವರ ನಗರದಲ್ಲಿದ್ದ ರುತಿಕಾ ಮನೆಗೆ ಏಕಾಏಕಿ ದಾವಿಸಿದ್ದಾಳೆ. ಈ ವೇಳೆ ಮನೆಯಲ್ಲಿದ್ದ ಎಲ್ಲರಿಗೂ ಪೆಪ್ಪರ್ ಸ್ಪ್ರೇ ಯನ್ನು ಮುಖಕ್ಕೆ ಎರಚಿ ಮಗಳನ್ನು ಆಕೆಯ ಗಂಡನ ಎದುರೇ ತಾನು ತಂದಿದ್ದ ಕಾರಿನಲ್ಲಿ ಅಪಹರಿಸಿ ಕರೆದೊಯ್ದಿದ್ದಾಳೆ. ಘಟನೆ ಸಂಬಂಧ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಮಣಿಕಂಠ ರವರು ಪತ್ನಿ ಅಪಹರಣದ ಬಗ್ಗೆ ದೂರು ನೀಡಿದ್ದಾರೆ. ಇನ್ನು ಅಪಹರಣ ಮಾಡಿದ ರೂಪ ಮೊಬೈಲ್ ಸ್ವಿಚ್ ಆಫ್ ಮಾಡಿ ಕುಟುಂಬದೊಂದಿಗೆ ಪರಾರಿಯಾಗಿದ್ದು ಈಕೆಯ ಹುಡುಕಾಟವನ್ನು ಪೊಲೀಸರು ನಡೆಸ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.