ಕೋಲಾರ –
ಹೆತ್ತ ತನ್ನ ಒಂದೂವರೆ ವರ್ಷದ ಮಗಳನ್ನೂ ಕೊಲೆ ಮಾಡಿ ನಂತರ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.ಕೋಲಾರ ತಾಲೂ ಕಿನ ಚಿನ್ನಾಪುರ ಗ್ರಾಮದಲ್ಲಿ ಈ ಒಂದು ಘಟನೆ ಸಂಭವಿಸಿದೆ.

ಭಾನುಪ್ರಿಯಾ (21) ಮತ್ತು ಮಗಳು ನಿಧಿ ಮೃತ ದುರ್ದೈವಿಗಳಾಗಿದ್ದಾರೆ. ಕೌಟುಂಬಿಕ ಕಲಹದಿಂದಾಗಿ ತುಂಬಾ ತುಂಬಾ ನೊಂದುಕೊಂಡಿದ್ದರು ಭಾನು ಪ್ರಿಯ ಸಾವಿನ ಮನೆಯ ಕದತಟ್ಟುವ ಮುನ್ನ ತನ್ನ ಮಗುವನ್ನ ಕೊಂದಿದ್ದಾಳೆ. ಬಳಿಕ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇನ್ನೂ ಸುದ್ದಿ ತಿಳಿದ ಕೋಲಾರ ಗ್ರಾಮಾಂತರ ಪೊಲೀಸ್ ರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ