ಸರ್ಕಾರಿ ಶಾಲಾ ಮಕ್ಕಳಿಗೆ ಹೊಸದೊಂದು ಭಾಗ್ಯ – ಖಾಸಗಿ ಶಾಲೆಗಳಂತೆ ಮತ್ತಷ್ಟು ಹೆಚ್ಚಾಗಲಿದೆ ಮಕ್ಕಳ ಕಲಿಕೆ…..

Suddi Sante Desk
ಸರ್ಕಾರಿ ಶಾಲಾ ಮಕ್ಕಳಿಗೆ ಹೊಸದೊಂದು ಭಾಗ್ಯ – ಖಾಸಗಿ ಶಾಲೆಗಳಂತೆ ಮತ್ತಷ್ಟು ಹೆಚ್ಚಾಗಲಿದೆ ಮಕ್ಕಳ ಕಲಿಕೆ…..

ಬೆಂಗಳೂರು

ಈಗಾಗಲೇ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ಬಿಸಿ ಊಟ ಹಾಗೂ ವಾರಕ್ಕೆ ಆರು ದಿನ ಮೊಟ್ಟೆ ವಿತರಿಸುವ ಯೋಜನೆ ಜಾರಿ ಮಾಡಿದೆ.ಇದೀಗ ಎಲ್ಲಾ ಸರ್ಕಾರಿ ಮಕ್ಕಳಿಗೆ ಸರ್ಕಾರ ಸಿಹಿ ಸುದ್ದಿ ಒಂದು ನೀಡಲು ಇಲಾಖೆ ಮುಂದಾಗಿದೆ ಹೌದು ಉಚಿತವಾಗಿ ಟ್ಯೂಷನ್ ಹೇಳಿ ಕೊಡುವ ಯೋಜನೆ ಜಾರಿ ಮಾಡುವ ಚಿಂತನೆ ನಡೆಸುತ್ತಿದೆ.

ಹೌದು ಈಗಾಗಲೆ ಶೈಕ್ಷಣಿಕ ವಿಚಾರಕ್ಕೆ ಸಂಬಂಧಪಟ್ಟಂತೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಅಲ್ಲದೆ ಪಠ್ಯಕ್ರಮ ವಿಚಾರದಲ್ಲಿ ಹಲವು ವಿಷಯಗಳು ಮಕ್ಕಳಿಗೆ ಕಬ್ಬಿಣದ ಕಡಲೆಯಂತಾಗಿವೆ. ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವ ಪೋಷಕರೇನೋ ದುಡ್ಡು ಕೊಟ್ಟು ಪ್ರೈವೇಟ್ ಟ್ಯೂಷನ್ ತರಗತಿಗೆ ಕಳುಹಿಸುತ್ತಾರೆ

ಆದರೆ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ರಾಜ್ಯ ಸರ್ಕಾರ ಫ್ರೀ ಟ್ಯೂಷನ್ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ವಿದ್ಯಾರ್ಥಿ ಯಾವ ತರಗತಿಯ ವಿಷಯದಲ್ಲಿ ಹಿಂದೆ ಇದ್ದಾನೆ ಎಂದು ಅರ್ಥ ಮಾಡಿಕೊಂಡು ಸ್ಪೆಷಲ್ ಟ್ಯೂಷನ್​ಗೆ ಕಳುಹಿಸುತ್ತಿದ್ದಾರೆ. ಈಗ ಈ ಭಾಗ್ಯ ಸರ್ಕಾರಿ ಶಾಲೆಗಳ ಮಕ್ಕಳಿಗೂ ಬರುತ್ತಿದೆ.

ಮುಂಜಾನೆ ಹಾಗೂ ಸಂಜೆ ಶಾಲೆಯ ಆರಂಭಕ್ಕೂ ಮೊದಲು ಒಂದು ಗಂಟೆ ಹಾಗೂ ಶಾಲೆ ಅವಧಿ ಮುಗದ ಬಳಿಕ ಒಂದು ಕ್ಲಾಸ್ ಶಿಕ್ಷಕರು ಮಕ್ಕಳಿಗೆ ವಿಶೇಷ ತರಗತಿ ತಗೆದುಕೊಳ್ಳುತ್ತಿದ್ದಾರೆ. 1 ರಿಂದ 12 ನೇ ತರಗತಿಯಲ್ಲಿನ ಮಕ್ಕಳಿಗೆ ಇದು ಆರಂಭವಾಗುತ್ತಿದೆ. ಯಾವ ತರಗತಿ ಯಲ್ಲಿ ಹಿನ್ನಡೆ ಇದ್ದಾರೆ ಎಂದು ಶಾಲಾ ಶಿಕ್ಷಕರೇ ಗುರುತಿಸಿ ಆ ವಿಷಯದಲ್ಲಿ ಹಿಂದಿರುವ ವಿದ್ಯಾರ್ಥಿಗಳನ್ನ ಈ ಸ್ಪೆಷಲ್ ಕ್ಲಾಸ್​ಗೆ ಕಳುಹಿಸುತ್ತಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.