ಬೆಂಗಳೂರು –
ರಾಜ್ಯದ ಸರ್ಕಾರಿ ಶಾಲೆಗಳಿಗೆ ಹೈಟೆಕ್ ಟಚ್ ನೀಡಲು ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ಮುಂದಾಗಿದೆ ಹೌದು ರಾಜ್ಯದ ಸರ್ಕಾರಿ ಶಾಲೆ ಗಳಲ್ಲಿ ಮಕ್ಕಳ ಹಾಜರಾತಿ ಪ್ರಕ್ರಿಯೆ ಡಿಜಿಟಲೀಕ ರಣಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಫೇಸ್ ರೆಕಗ್ನಿಷನ್ ಅಟೆಂಡೆನ್ಸ್ ಸಿಸ್ಟಮ್ ಜಾರಿಗೆ ತರಕು ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳಿಗೆ ನೀಡುವ ಸೌಲಭ್ಯಗಳು ದುರ್ಬಳಕೆ ಆಗದಂತೆ ತಡೆಯಲು, ಮಕ್ಕಳ ಹಾಜರಾತಿಯ ಗುಣಮಟ್ಟ ಹೆಚ್ಚಳ ಉದ್ದೇಶದಿಂದ ರಾಜ್ಯ ಸರ್ಕಾರ ಮುಖ ಗುರುತಿಸುವಿಕೆಯ ಹಾಜರಾತಿ ವ್ಯವಸ್ಥೆ ಜಾರಿಗೆ ಮುಂದಾಗಿದೆ.
LKG ಯಿಂದ 12ನೇ ತರಗತಿವರೆಗೆ ಇದು ಅನ್ವಯವಾಗಲಿದೆ. 46757 ಪ್ರಾಥಮಿಕ ಮತ್ತು ಪ್ರೌಢಶಾಲೆ, 1229 ಪಿಯು ಕಾಲೇಜುಗಳಲ್ಲಿ 45 ಲಕ್ಷಕ್ಕೂ ಅಧಿಕ ಮಕ್ಕಳು ಸರ್ಕಾರಿ ವ್ಯವಸ್ಥೆಯಲ್ಲಿ ಕಲಿಯುತ್ತಿದ್ದಾರೆ.
ಈ ವರ್ಷ ಎರಡು ಲಕ್ಷ ಮಕ್ಕಳು ಸರ್ಕಾರಿ ಶಾಲೆಯಿಂದ ದೂರವಾಗಿದ್ದು, ಅವರನ್ನು ವಾಪಸ್ ಕರೆ ತರಲು ಕ್ರಮ ಕೈಗೊಳ್ಳಲಾಗಿದೆ. ಸಮವಸ್ತ್ರ, ಶೂ, ಪಠ್ಯಪುಸ್ತಕ, ಬಿಸಿಯೂಟಗಳಿಗೆ ಸರ್ಕಾರ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದು, ದುರುಪಯೋಗ ತಡೆ ಯಲು ಹಾಜರಾತಿ ವ್ಯವಸ್ಥೆಯನ್ನು ಡಿಜಿಟಲೀಕರ ಣಗೊಳಿಸಲಾಗುವುದು.
ಎಲ್ಲಾ ಶಾಲೆಗಳಿಗೂ ಆಪ್ ನೀಡಲಿದ್ದು, ಶಿಕ್ಷಕರ ಮೊಬೈಲ್ ನಲ್ಲಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು. ಮೊಬೈಲ್ ಆಪ್ ನಲ್ಲಿ ಮಕ್ಕಳ ಮುಖ ಸ್ಕ್ಯಾನ್ ಮಾಡಬೇಕು. ಮಗು ವಿನ ಹಾಜರಾತಿ ಡಾಟಾಬೇಸ್ ನಲ್ಲಿ ದಾಖಲಾ ಗುತ್ತದೆ.
ಇದರಿಂದ ಮ್ಯಾನುಯಲ್ ಹಾಜರಾತಿಯ ಸಮಯ ಉಳಿತಾಯವಾಗುತ್ತದೆ. ಹಾಜರಾತಿ ಪುಸ್ತಕ ಖರೀದಿಸುವ ಹಣವೂ ಉಳಿತಾಯ ವಾಗುತ್ತದೆ. ಮಕ್ಕಳ ಕೇಂದ್ರಿತ ಯೋಜನೆ ಅನುಷ್ಠಾನಗೊಳಿಸಲು ನಿಖರ ಮಾಹಿತಿ ಲಭ್ಯ ವಾಗುತ್ತದೆ. ಬಿಸಿಯೂಟ ಸೇರಿ ಇತರೆ ವಸ್ತುಗಳ ಕಳವು ತಡೆಯಲು ಇದು ಸಹಾಯಕವಾಗಲಿದೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..