ಬೆಂಗಳೂರು –
ಶಾಲಾ ಶಿಕ್ಷಣ ನೀತಿಯಲ್ಲಿ ಹೊಸ ನಾವೀನ್ಯತೆಯನ್ನು ಅನುಷ್ಠಾನಗೊಳಿಸಲು ಹಾಗೂ ಕಲಿಕಾ ಅಂತರವನ್ನು ಸುಧಾರಿಸುವ ಕಲಿಕೆ ಲ್ಯಾಬ್ ಆರಂಭಿಸುವ ಉದ್ದೇಶ ದಿಂದ ಶಿಕ್ಷಣ ಅಧಿಕಾರಿಗಳು (ಜೆ-ಪಾಲ್) ನೊಂದಿಗೆ ಒಡಂಬಡಿಕೆಗೆ ಸಹಿ ಮಾಡಿದರು.ವಿಧಾನಸೌಧದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಮ್ಮುಖದಲ್ಲಿ ನಡೆದ ಒಡಂಬಡಿಕೆ ಪ್ರಕ್ರಿಯೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಜೆ ಪಾಲ್ ಸೌತ್ ಏಷ್ಯಾ ಸಿಇಒ ಶೋಭಿನಿ ಮುಖರ್ಜಿ, ಗ್ಲೋಬಲ್ ಕಾರ್ಯನಿರ್ವಾಹಕ ನಿರ್ದೇಶಕ ಇಕ್ಬಾಲ್ ಧಲಿವಾಲ್ ರಾಜ್ಯ ಯೋಜನಾ ನಿರ್ದೇಶಕರಾದ ಕೆ.ಎನ್ ರಮೇಶ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿ ದ್ದರು
ಮಧು ಬಂಗಾರಪ್ಪ, ಗುಣಮಟ್ಟದ ಶಿಕ್ಷಣಕ್ಕೆ ಏನು ಮಾಡುತ್ತೀರಿ ಎನ್ನುತ್ತಿದ್ದಿರಲ್ಲ. ಅದಕ್ಕೆ ಈ ಕಾರ್ಯಕ್ರಮ. ಈಗ 93 ಬ್ಲಾಕ್‌ನಲ್ಲಿ ಅನುಷ್ಠಾನವಾಗಲಿದೆ. ಮುಂದಿನ ವರ್ಷ ಇಡೀ ರಾಜ್ಯಕ್ಕೆ ಕೊಡುವ ವ್ಯವಸ್ಥೆ ಸಿಎಂ ಬಳಿ ಚರ್ಚಿಸುತ್ತೇವೆ ಎಂದು ಹೇಳಿದರು.ಪಠ್ಯಕ್ರಮವನ್ನು ವರ್ಷದೊಳಗೆ ಪೂರ್ಣಗೊಳಿಸುವ ಭರದಲ್ಲಿ ಹಿಂದೆ ಉಳಿಯುವ ಮಕ್ಕಳ ಬಗ್ಗೆ ತಲೆಕೆಡಿಸಿಕೊಳ್ಳಲಾಗುತ್ತಿಲ್ಲ.
ಶೇ.20 ರಷ್ಟು ಮಕ್ಕಳು ಮುಂದೆ ಹೋಗಿರುತ್ತಾರೆ, ಶೇ.80 ರಷ್ಟು ಮಕ್ಕಳು ಹಿಂದೆ ಉಳಿದಿರುತ್ತಾರೆ. ಕೋವಿಡ್ ಸಂದರ್ಭದಲ್ಲಿ ಶಾಲೆಗಳೇ ಮುಚ್ಚಿದ್ದರಿಂದ ಮಕ್ಕಳ ಕಲಿಕಾ ಕ್ರಮ ಬದಲಾಗಿದೆ. ಹೀಗಾಗಿ ಪರಿಸ್ಥಿತಿ ಸುಧಾರಣೆಗೆ ವಿವಿಧ ಕಾರ್ಯಕ್ರಮ ರೂಪಿಸಲಾಗಿದೆ
ಮಂತ್ರ ಫಾರ್ ಚೇಂಜ್ ಎಂಬ ಸಂಸ್ಥೆಯು 10ನೇ ತರಗತಿ ಫಲಿತಾಂಶ ಹೆಚ್ಚಿಸುವ ಬಗ್ಗೆ ಕೆಲಸ ಮಾಡುತ್ತಿದೆ ಎಂದು ಸಚಿವರು ವಿವರಿಸಿದರು.
6-10ನೇ ತರಗತಿ ಮಕ್ಕಳಿಗೆ ಹಿಂದಿನ ತರಗತಿಯ ಪಾಠ ಅರ್ಥವಾಗಿಲ್ಲ ಎಂದಾದರೆ ಪುನಃ ಪಾಠ ಮಾಡಿ ಐಕ್ಯೂ ಮಟ್ಟ ಏರಿಸುವ ಕೆಲಸ ಮಾಡಲಾಗುತ್ತದೆ.ಜೆ-ಪಾಲ್ ಸ್ ಟಾವೇರ್ ಬಳಸಿಕೊಂಡು ಈ ಕೆಲಸ ಮಾಡಲಾಗುತ್ತದೆ. ಸಂಸ್ಥೆ ಸಿಬ್ಬಂದಿ ಶಿಕ್ಷಕರಿಗೆ ಬಳಕೆ ಬಗ್ಗೆ ತರಬೇತಿ ಕೊಡುತ್ತಾರೆ.
ಮೊದಲ ಹಂತದಲ್ಲಿ 9 ಸಾವಿರ ಸಾವಿರ ಶಾಲೆಗಳಲ್ಲಿ ಅನುಷ್ಠಾನ ಮಾಡಲಾಗುತ್ತದೆ. ಮುಂದೆ ವಿಸ್ತರಿಸುವ ಉದ್ದೇಶವಿದೆ.3ರಿಂದ 5ನೇ ತರಗತಿವರೆಗೆ ಗಣಿತ ಗಣಕ ಯೋಜನೆಯಡಿ ಶಿಕ್ಷಕರು ಪೋಷಕರಿಗೆ ಕರೆ ಮಾಡಿ ಮಕ್ಕಳ ಕಲಿಕೆ ಮಾಹಿತಿ ಪಡೆದು ಅಗತ್ಯ ತರಬೇತಿ ಕೊಡಲಾಗುತ್ತದೆ.
ಪೋಷಕರು- ಮಕ್ಕಳ ಜತೆ ಒಡನಾಟ ಸಂಬಂಧ ಜೆ-ಪಾಲ್ನಿಂದ ತರಬೇತಿ ನೀಡಲಾಗುತ್ತದೆ.ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಚಿಲಿಪಿಲಿ ಕಾರ್ಯಕ್ರಮ ಮಾಡಲಾಗುತ್ತದೆ. ಪರಿಕರಗಳ ಮೂಲಕ ಮಕ್ಕಳಿಗೆ ಗಣಿತ ಲೆಕ್ಕ ಹೇಳಿಕೊಡಲಾಗುತ್ತದೆ ಎಂದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..