ಚಿಕ್ಕಮಗಳೂರು –
ರಾಜ್ಯ ರಾಜಕೀಯದಲ್ಲಿ ಮತ್ತೆ ಸಂಚಲನವಾದಂತೆ ಶುರುವಾದಂತೆ ಕಾಣುತ್ತಿದೆ.ಈಗಷ್ಟೇ ಸಚಿವ ಸಂಪುಟ ವಿಸ್ತರಣೆಯಾಯಿತು ಎಂದುಕೊಂಡಿದ್ದ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸಂಚಲನ ನಡೆಯುತ್ತಿದೆನಾ ಎಂಬ ಅನುಮಾನ ಕಂಡು ಬರುತ್ತಿದೆ.

ಇದಕ್ಕೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಂಡು ಬಂದ ರಾಜಕೀಯ ಗುಪ್ತ ಸಭೆ.ಕಾಫಿನಾಡು ಚಿಕ್ಕಮಗಳೂರಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಗೌಪ್ಯಸಭೆಯೊಂದು ನಡೆದಿದೆ. ಚಿಕ್ಕಮಗಳೂರು ಹೊರವಲಯದ ಸರಾಯ್ ರೆಸಾರ್ಟ್ ನಲ್ಲಿ ಅತೃಪ್ತರ ಸಭೆ ನಡೆದಿದೆ.

ಸಚಿವರಾದ ರಮೇಶ್ ಜಾರಕಿಹೊಳಿ, ಸಿ.ಪಿ ಯೋಗೇಶ್ವರ್, ಗೋಪಾಲಯ್ಯ, ಶಾಸಕರಾದ ಎಂಪಿ ಕುಮಾರಸ್ವಾಮಿ ಸೇರಿದಂತೆ ಹಲವರು ಈ ಒಂದು ಸಭೆಯಲ್ಲಿ ಭಾಗಿಯಾಗಿದ್ದು ಕಂಡು ಬಂದಿತು.

ಸಚಿವ ಸಂಪುಟವೂ ವಿಸ್ತರಣೆಯಾಯಿತು ಇನ್ನೇನು ಎಲ್ಲವೂ ಮುಗಿದು ಬಿಟ್ಟಿತು ಎಂದುಕೊಂಡಿದ್ದ ಬಿಜೆಪಿ ಸರ್ಕಾರದಲ್ಲಿ ಮತ್ತೊಂದು ಸಂಚಲನವಾಗು ತ್ತದೆಯಾ ಈ ಒಂದು ಸಭೆ ಎಂಬ ಮಾತುಗಳು ರೆಸಾರ್ಟ್ ನಿಂದ ವಿಧಾನಸೌಧದ ವರೆಗೆ ಕೇಳಿ ಬರುತ್ತಿವೆ.

ಇನ್ನೂ ಪ್ರಮುಖವಾಗಿ ಸರ್ಕಾರ ರಚನೆಗೆ ಕಾರಣವಾಗಿದ್ದ ಸಚಿವ ರಮೇಶ್ ಜಾರಕಿಹೊಳಿ ಅವರಿಂದಲೇ ನಡೆದಿದೆಯಾ ಸರ್ಕಾರ ಕೆಡವಲು ಪ್ರಯತ್ನ ಎಂಬ ಮಾತುಗಳು ಕೂಡಾ ಕೇಳಿ ಬರುತ್ತಿದ್ದು ನಿನ್ನೆ ರಾತ್ರಿಯೇ ರೆಸಾರ್ಟ್ ನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ ನಾಯಕರುಗಳು