ಬಟ್ಟೆ ಬದಲಾಯಿಸುತ್ತಿದ್ದ ವೈದ್ಯರ ವಿಡಿಯೋ ಶೂಟ್ ಮಾಡುತ್ತಿದ್ದ ನರ್ಸ್ ಬಾಯ್ ಬಂಧನ

Suddi Sante Desk

ಬೆಂಗಳೂರು –

ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರು ಡ್ರೆಸ್ ಬದಲಾಯಿಸುತ್ತಿರುವ ವಿಡಿಯೋ ಮಾಡುತ್ತಾ ಮಾಡಿಕೊಳ್ಳುತ್ತಿದ್ದ ನರ್ಸ್ ಬಾಯ್ ಒಬ್ಬನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮಾರುತೇಶ್(31) ಎಂದು ಗುರುತಿಸಲಾಗಿದೆ.

ಸಂಜಯ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟ್ರಾಮಾ ಆ್ಯಂಡ್ ಆರ್ಥೋಪೆಡಿಕ್ಸ್ ನಿರ್ದೇಶಕರ ದೂರಿನ ಮೇರೆಗೆ ಪೊಲೀಸರು ಈ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ, ಮಹಿಳಾ ಸರ್ಜನ್ ಒಬ್ಬರು ಡ್ರೇಸ್ಸಿಂಗ್ ರೂಮ್‍ ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ. ಆಗ ಆತನ ಮೊಬೈಲ್ ಗಮನಿಸಲಾಗಿದೆ.

ಈ ಕುರಿತು ಆ ವೈದ್ಯೆ ಇನ್ನಿತರರಿಗೆ ತಿಳಿಸಿದ್ದಾರೆ. ಕಾಂಟ್ರ್ಯಾಕ್ಟ್ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರಿಗೆ ಮೊಬೈಲ್ ಸೇರಿದೆ ಎಂದು ತಿಳಿಸಿದ್ದಾರೆ. ಬಳಿಕ ವಿಷಯವನ್ನು ಸಂಸ್ಥೆಯ ನಿರ್ದೇಶಕರ ಗಮನಕ್ಕೆ ತಂದಿದ್ದು, ಅವರು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರೋಪಿ ಕೆಲ ತಿಂಗಳಿಂದ ವೈದ್ಯೆಯರು ಡ್ರೆಸ್ ಬದಲಿಸುತ್ತಿದ್ದ ವಿಡಿಯೋ ಗಳನ್ನು ರೆಕಾರ್ಡ್ ಮಾಡುತ್ತಿದ್ದ. ಆದರೆ ಯಾವುದೇ ವಿಡಿಯೋಗಳನ್ನು ಯಾರೊಂದಿಗೂ ಹಂಚಿಕೊಂಡಿಲ್ಲ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.