ಚಿಕ್ಕಮಗಳೂರು –
ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಉಪಸಭಾಪತಿ ಎಸ್.ಎಲ್ ಧರ್ಮೇಗೌಡರ ದೇಹ ಛೀದ್ರ ಛೀದ್ರವಾಗಿದೆ.ರೈಲಿನ ಗಾಲಿಗೆ ಸಿಕ್ಕ ದೇಹ ಗುರುತು ಸಿಗಲಾರದಷ್ಟು ತುಂಡು ತುಂಡಾಗಿ ಹೋಗಿದೆ.ದೇಹ ಬಹುತೇಕ ಎಲ್ಲಾ ಪೀಸ್ ಪೀಸ್ ಆಗಿದೆ.
ಕಡೂರು ತಾಲೂಕಿನ ಗುಣಸಾಗರದ ಬಳಿ ತಡರಾತ್ರಿ ಘಟನೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರೈಲಿಗೆ ಸಿಕ್ಕ ದೇಹ ಮಾತ್ರ ಚಿದ್ರ ಚಿದ್ರಗೊಂಡಿದೆ. ಗುಣಸಾಗರದ ಮಂಕೇನಹಳ್ಳಿ ಬಳಿ ಚಿದ್ರಗೊಂಡ ದೇಹ ಪತ್ತೆಯಾಗಿದೆ.
ತಮ್ಮ ಹಳೇ ಸ್ಯಾಂಟ್ರೋ ಕಾರಿನಲ್ಲಿ ತೆರಳಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರೈಲಿನ ಚಕ್ರಕ್ಕೆ ಸಿಲುಕಿದ ದೇಹ ಎಲ್ಲೆಂದರಲ್ಲಿ ಚಿದ್ರ ಚಿದ್ರವಾಗಿ ಬಿದ್ದಿದ್ದು ತಲೆಯನ್ನು ನೋಡಿದ ಅಂಗ ರಕ್ಷಕ ಗುರುತು ಹಿಡಿದಿದ್ದಾರೆ. ಇನ್ನೂ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ ತಡರಾತ್ರಿಯವರೆಗೆ ಎಲ್ಲೆಂದರಲ್ಲಿ ಬಿದ್ದಿದ್ದ ದೇಹವನ್ನು ಶಿಪ್ಟ್ ಮಾಡಿಸಿದರು.
ಇನ್ನೂ ತಡರಾತ್ರಿ ಮೃತ ದೇಹವನ್ನು ಕಡೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಇಂದು ಬೆಳಿಗ್ಗೆ ಕಡೂರಿನಿಂದ ಶಿವಮೊಗ್ಗಕ್ಕೆ ಸರ್ಕಾರಿ ಅಂಬ್ಯೂಲೆನ್ಸ್ ನಲ್ಲಿ ಕರೆತರಲಾಗಿದೆ. ಅವರ ಮೃತ ದೇಹವನ್ನ ಪ್ಯಾಕ್ ಮಾಡಲಾಗಿದ್ದು ಮರಣೋತ್ತರ ಪರೀಕ್ಷೆಯನ್ನ ಆರಂಭಿಸಲಾಗಿದೆ.
ಧರ್ಮೇಗೌಡರ ನಿಧನಕ್ಕೆ ಸಂಸದ ಬಿ.ವೈ.ರಾಘವೇಂದ್ರ, ಕಾಂಗ್ರೆಸ್ ನ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ಶಿವಮೊಗ್ಗದ ಮೆಗ್ಗಾನ್ ಗೆ ತರಲಾಗಿದ್ದು, ಆಸ್ಪತ್ರೆಯ ಡಾ.ವೀರೇಶ್ ಹಾಗೂ ಖಾಸಗಿ ಆಸ್ಪತ್ರೆಯ ತಂಡದಿಂದ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.
ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿರುವ ಮೆಗ್ಗಾನ್ ಅಧಿಕಾರಿಗಳು. ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಎಸ್ಪಿ ಕೆ.ಎಂ ಶಾಂತರಾಜು ಡಿಹೆಚ್ಓ ರಾಜೇಶ್ ಸುರಗಿಹಳ್ಳಿ, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಶ್ರೀಧರ್ ಭೇಟಿ ನೀಡಿದ್ದಾರೆ.
ಮೆಗ್ಗಾನ್ ಆಸ್ಪತ್ರೆಯ ಬಳಿ ಪೊಲೀಸ್ ರಿಂದ ಪುಲ್ ಬಂದೋಬಸ್ತ್ ಮಾಡಲಾಗಿದೆ. ಸಿಟಿ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ್, ಸಿಪಿಐ ವಸಂತ್ ಕುಮಾರ್, ನೇತೃತ್ವದಲ್ಲಿ ಪೊಲೀಸರ ಬಂದೋಬಸ್ತ್ ಮಾಡಲಾಗಿದ್ದು ಹಲವೆಡೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ.