ಬೆಂಗಳೂರು –
ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ನಾಡಿನ ಶಿಕ್ಷಕರೊಬ್ಬರು ನೊಂದುಕೊಂಡಿರುವ ರಾಜ್ಯದ ಶಿಕ್ಷಕರ ಪರವಾಗಿ ಒಂದು ಮನವಿ ಪತ್ರವನ್ನು ಬರೆದಿದ್ದಾರೆ ಹೌದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಶಿಕ್ಷಕರ ಪರವಾಗಿ ಮನವಿ ಪತ್ರವನ್ನು ಬರೆದಿದ್ದಾರೆ

ಶಿಕ್ಷಕಸ್ನೇಹಿ ವರ್ಗಾವಣೆ- ಶೇಕಡಾ 25 ನಿಯಮ ಸಂಪೂರ್ಣವಾಗಿ ರದ್ದುಮಾಡಬೇಕು
(ಅಂತರಘಟಕ ವರ್ಗಾವಣೆ ಬಯಸುವ ನೊಂದ ಶಿಕ್ಷಕರ ನೋವಿನ ಅಳಲು)
✍ ಪರಶುರಾಮ ಗುತ್ತಲ್ ಶಿಕ್ಷಕರು
ರಾಜ್ಯ ಸರ್ಕಾರ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ನಿಯಂತ್ರಣ ಕುರಿತಂತೆ ವಿಧಾನಸಭೆಯಲ್ಲಿ ಮಂಡಿಸಿರುವ ಮಸೂದೆ ವಿಷಯಗಳಲ್ಲಿ ಉತ್ತಮ ಅಂಶಗಳನ್ನು ಹೊಂದಿದೆ. ಶಿಕ್ಷಕರ ಬಹುಕಾಲದ ಬೇಡಿಕೆಗಳನ್ನು ಈಡೇರಿಸಲು ಮಾಡಿರುವುದನ್ನು ಮೆಚ್ಚಲೇಬೇಕು.ಆದರೆ ಶಿಕ್ಷಕರು ಮಾಡಿರದ ತಪ್ಪಿಗೆ ಶಿಕ್ಷಕರಿಗೇ ಬರೆ ಎಳೆಯುವುದನ್ನು ತಪ್ಪಿಸುವ ಪ್ರಯತ್ನ ನಡೆಯದೆ ಇರುವುದು ಬೇಸರದ ಸಂಗತಿ. ಶೇ 25%ಕ್ಕಿಂತ ಹೆಚ್ಚು ಖಾಲಿ ಹುದ್ದೆಗಳು ಇರುವ ತಾಲ್ಲೂಕಿನಿಂದ ಅಂತರ ಘಟಕ ವರ್ಗಾವಣೆ ಅರ್ಜಿ ಸಲ್ಲಿಸಿದ್ದರೂ ಕೂಡ ಕಳೆದ ಮೂರು ವರ್ಷಗಳ ಅಂತರಘಟಕ ವರ್ಗಾವಣೆ ಬಯಸುವ ಶಿಕ್ಷಕರಿಗೆ ವರ್ಗಾವಣೆ ಮರೀಚಿಕೆ ಯಾಗಿದೆ. ಶೇಕಡಾ 25 ನಿಯಮವನ್ನು ಸಂಪೂರ್ಣ ತೆಗೆದು ಹಾಕುವ ಪ್ರಸ್ತಾಪವಿಲ್ಲಾ.ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳದೆ.ಕಲ್ಯಾಣ ಕರ್ನಾಟಕ ಭಾಗದಿಂದ ಶೇ 25ರ ನಿಯಮ ತೆಗೆದರೆ ಹೆಚ್ಚು ಹೆಚ್ಚು ಶಿಕ್ಷಕರು ವರ್ಗಾವಣೆಯಾಗಿ ಹೋಗಿ ಬಿಡುತ್ತಾರೆ ಎಂಬ ಪೂರ್ವಗ್ರಹ ಪೀಡಿತ ಮನೋಭಾವ ಇರುವುದು ಅದು ಸುಳ್ಳು ಏಕೆಂದರೆ ಒಂದು ಜಿಲ್ಲೆಯಿಂದ ಹೊರ ಹೋಗುವ ಶಿಕ್ಷಕರ ಮಿತಿ ಶೇ3ರಷ್ಟು ಹಾಗೂ ಹೆಚ್ಚುವರಿ ವರ್ಗಾವಣೆ ನಡೆದ ವರ್ಷ ಶೇ2ರಷ್ಟು ಮಾತ್ರ. ಕನಿಷ್ಠ 50 ರಿಂದ 100 ಜನ ಹೊರ ಹೋಗಲುಮಾತ್ರ ಸಾಧ್ಯ
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಘಟಕವೆಂದರೆ ಜಿಲ್ಲೆ, ಶೇ 3ರಷ್ಟು ಹೊರ ಹೋಗುವ ಶಿಕ್ಷಕರನ್ನು ನಿರ್ಧರಿಸು ವುದು ಜಿಲ್ಲೆಯ ಒಟ್ಟು ಮಂಜೂರಾದ ಹುದ್ದೆ ಯಿಂದ.ಈ ನಿಯಮ ಅನ್ಯಯಿಸುವಾಗ ಜಿಲ್ಲೆಯ ಖಾಲಿ ಹುದ್ದೆಗಳನ್ನು ಪರಿಗಣಿಸಬೇಕು ಹಾಗೂ
ಕಡ್ಡಾಯ ವರ್ಗಾವಣೆಯಲ್ಲಿ ಪತಿ,ಪತ್ನಿ ಶಿಕ್ಷಕರಿಗೆ ವಿನಾಯತಿ ನೀಡಲಾಗಿದೆ.ಅಲ್ಲೇ ಇರುವ ಪತಿ ಶಿಕ್ಷಕರಿಗೆ ಅವರನ್ನು ಒಂದು ಮಾಡುವ ದೃಷ್ಟಿಕೋನ ದಿಂದ ಆ ನಿಯಮದಿಂದ ವಿನಾಯಿತಿ ನೀಡಿರುವಾಗ ಮದುವೆ ಆದಾಗಿನಿಂದ 10 ರಿಂದ 14 ವರ್ಷದ ವರೆಗೆ(ಕೆಲವರು ಇನ್ನೂ ಮದುವೆ, ಮಕ್ಕಳಾಗಿಲ್ಲಾ) 500 ರಿಂದ 600 ಕಿ.ಮಿ ದೂರ ಇರುವ ಪತಿ ಪತ್ನಿ ಶಿಕ್ಷಕ.ಶಿಕ್ಷಕಿಯರಿಗೆ ವಿನಾಯಿತಿ ನೀಡಿಲ್ಲಾ ಅವರನ್ನು ಹೆಚ್ಚುವರಿ ಮಾಡಲಾಗಿದೆ.ಕಲ್ಯಾಣ ಕರ್ನಾಟಕ ಭಾಗದಲ್ಲಿ 10 ವರ್ಷ ಗಳ ಕಡ್ಡಾಯ ಸೇವೆ ಯನ್ನು ತೆಗೆದುಹಾಕಬೇಕಿತ್ತು.ಕಲ್ಯಾಣ ಕರ್ನಾಟಕದ ಭಾಗದಲ್ಲಿ ಇರುವ ಖಾಲಿ ಹುದ್ದೆ ಗಳ ಭರ್ತಿ ಮಾಡುವ ಸಂಬಂಧ ಟಿಇಟಿ ಪಾಸಾದ ಎಲ್ಲಾ ಅಭ್ಯರ್ಥಿ ಗಳಿಗೆ ಸಿಇಟಿಯಲ್ಲಿ ಯಾವುದೇ ಮಾನದಂಡ ಅನುಸರಿಸದೇ ಶೇಕಡಾವಾರು ಆಧಾರವಾಗಿ ನೇಮಕಾತಿ ಮಾಡಿಕೊಂಡದ್ದೇ ಆದರೆ ಇರುವ ಎಲ್ಲಾ ಖಾಲಿ ಹುದ್ದೆಗಳು ಒಂದೇ ಬಾರಿಗೆ ಭರ್ತಿಯಾಗುತ್ತವೆ.ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳ ಪ್ರತಿಭಾವಂತ ಶಿಕ್ಷಕ ಆಕ್ಷಾಂಕಿಗಳಿಗೆ ಉದ್ಯೋಗ ಸಿಗುತ್ತದೆ ಹಾಗೂ ಶಿಕ್ಷಣ ಸಚಿವರ ಕೈಯಿಂದಲೇ ಅದಕ್ಕೆ ಅಡಿಗಲ್ಲು ಹಾಕಿದಂತಾಗುತ್ತದೆ ಮತ್ತು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಹ ನಿಟ್ಟಿನಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯು ಉತ್ತಮ ಶೈಕ್ಷಣಿಕ ಮೈಲಿಗಲ್ಲು ಆಗುತ್ತದೆ
ಅಂತರ ಘಟಕ ವರ್ಗಾವಣೆ ಬಯಸುತ್ತಿರುವ ಜಿಲ್ಲೆಗಳ ಶಿಕ್ಷಕರಿಗೆ ವರ್ಗಾವಣೆಯಾಗಿ ಅವರ ಮೂಲ ಜಿಲ್ಲೆಯಗಳಿಗೆ ಹೋಗಿ ಮಕ್ಕಳಿಗೆ ನೆಮ್ಮದಿ ಯಿಂದ ಪಾಠ ಮಾಡಿ ನೆಮ್ಮದಿ ಯಿಂದ ಅವರ ಕುಟುಂಬ ಸದಸ್ಯರುಗಳೊಂದಿಗೆ ಜೀವನ ನಡೆಸಬ ಹುದು.
ಶೇಕಡಾ 25 ನಿಯಮ ಸಂಪೂರ್ಣವಾಗಿ ರದ್ದುಮಾಡಬೇಕು ನೊಂದ ಸಾವಿರಾರು ಶಿಕ್ಷಕರು ಮಾನ್ಯ ಸಹೃದಯಿ ಶಿಕ್ಷಕ ಸಚಿವರಲ್ಲಿ ಅತ್ಯಂತ ನೋವಿನಿಂದ ವಿನಂತಿ ಮಾಡಿಕೊಳ್ಳುತ್ತೀದ್ದೇವೆ.
ಪರಶುರಾಮ ಗುತ್ತಲ್ ಸಹಶಿಕ್ಷಕರು
ನೊಂದ ಅಂತರಘಟಕ ವರ್ಗಾವಣೆ ಬಯಸುವ ಸಾವಿರಾರು ಶಿಕ್ಷಕರ ಪರವಾಗಿ ಒಂದು ಅರ್ಥಪೂರ್ಣ ಮನವಿ)