ಕಲಬುರಗಿ –
ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೃದ್ದೆಯನ್ನು ಪೊಲೀಸ್ ಪೇದೆಯೊಬ್ಬರು ರಕ್ಷಣೆ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಹೌದು ಕಲಬುರಗಿಯ ಭೀಮಾ ನದಿಗೆ ವೃದ್ದೆಯೊಬ್ಬರು ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದರು. ವೃದ್ದೆಯ ಆತ್ಮಹತ್ಯೆಯನ್ನು ನೋಡಿದ ಪೊಲೀಸ್ ಪೇದೆಯೊಬ್ಬರು ಕೂಡಲೇ ಅವರನ್ನು ರಕ್ಷಣೆ ಮಾಡಿದ್ದಾರೆ.

ಕಲಬುರಗಿ ಜಿಲ್ಲೆ ಜೇವರ್ಗಿ ಪೊಲೀಸ್ ಠಾಣೆ ಪೇದೆ ಅನಿಲ್‌ಕುಮಾರ ರಕ್ಷಣೆ ಮಾಡಿರುವ ಪೇದೆಯಾಗಿದ್ದಾರೆ.
ಕಟ್ಟಿಸಂಗಾವಿ ಬಳಿಯ ಭೀಮಾ ಬ್ರೀಡ್ಜ್‌ನ ಕಬ್ಬಿಣದ ರಾಡಿಗೆ ಜೋತು ಬಿದ್ದಿದ್ದ ವೃದ್ದೆ. ಆಳಂದ ಮೂಲದ ಗುರುಬಾಯಿ (60) ಎಂಬ ವೃದ್ದೆಯೊಬ್ಬರು ಭೀಮಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ ಮಾಡುತ್ತಿದ್ದರು.
ಅದೇ ವೇಳೆ ಭೀಮಾ ಬ್ರೀಡ್ಜ್ ಮೇಲೆ ಗಸ್ತಿನಲ್ಲಿದ್ದ ಪೇದೆ ಅನಿಲ್‌ಕುಮಾರ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೃದ್ದೆಯನ್ನ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

ಹೊಸ ವರ್ಷದ ದಿನದಂದು ನಡೆದಿದ್ದ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲ ತಾಣಗಲ್ಲಿ ವೈರಲ್ ಆಗಿದೆ. ಪೊಲೀಸ್ ಪೇದೆ ಆತ್ಮಹತ್ಯೆಗೆ ಯತ್ನಿಸಿದ್ದ ವೃದ್ದೆಯ ರಕ್ಷಣೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ನಡೆದಿದ್ದು ಕರ್ತವ್ಯದೊಂದಿಗೆ ನಿಜವಾಗಿಯೂ ಒಂದು ಜೀವವನ್ನು ಉಳಿಸಿದ ಅದರಲ್ಲೂ ದೊಡ್ಡ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವೃದ್ದೆಯನ್ನು ಉಳಿಸಿದ ಅನಿಲಕುಮಾರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು.
ಕಲಬುರಗಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮಾನವೀಯತೆ ಮೆರೆದ ಪೊಲೀಸ್ ಪೇದೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.