ಕೊಪ್ಪಳ –
ಒಂಬತ್ತು ಕಿಲೋ ಮೀಟರ್ ನಡೆದುಕೊಂಡು ಬಂದು ನಂತರ ಆ ಒಂದು ಗರ್ಭಿಣಿಯನ್ನು ಆಸ್ಪತ್ರೆಗೆ ಮಾಧ್ಯ ಮದವರು ಸೇರಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ ಹೌದು ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾವುದೇ ವಾಹನ ಓಡಾಟವಿಲ್ಲದ ಕಾರಣ ಸಂಪೂರ್ಣವಾಗಿ ಬಂದ್ ಆಗಿದ್ದವು.ಇದನ್ನು ಅರಿತ ಮಹಿಳೆ ತನ್ನ ಸಂಭಂದಿಯೊಂದಿಗೆ ಬರೊಬ್ಬರಿ 9 ಕಿಲೋ ಮೀಟ ರ್ ನಡೆದುಕೊಂಡು ಆಸ್ಪತ್ರೆಗೆ ಬಂದಿದ್ದಾರೆ.

ವಾಹನ ಇಲ್ಲದೇ ತುಂಬು ಗರ್ಭಿಣಿ ಪರದಾಟವನ್ನು ಅನುಭವಿಸಿದ್ದಾರೆ.ನರೇಗಲ್ ಗ್ರಾಮದಿಂದ ಕೊಪ್ಪಳ ಕ್ಕೆ ನಡೆದುಕೊಂಡೇ ಬಂದಿರೋ ತುಂಬು ಗರ್ಭಿಣಿ ಲಕ್ಷ್ಮೀ ಪೂಜಾರ ತನ್ನ ತಾಯಿ ಜೊತೆಗೆ ಕೊಪ್ಪಳಕ್ಕೆ ಬಂದಿರೋದನ್ನು ನೋಡಿದ ಕೋಪ್ಪಳದ ಮಾಧ್ಯಮ ಮಿತ್ರರು ಕೊನೆಗೂ ಸಹಾಯವನ್ನು ಮಾಡಿದ್ದಾರೆ.

ಮಾಧ್ಯಮ ಪ್ರತಿನಿಧಿಯ ಕಾರಿನಲ್ಲಿ ಗರ್ಭಿಣಿಗೆ ಆಸ್ಪ ತ್ರೆವರೆಗೆ ಡ್ರಾಪ್ ನೀಡಿ ನೆರವಾಗಿದ್ದಾರೆ ತಮ್ಮ ಕರ್ತ ವ್ಯದೊಂದಿಗೆ ಸಮಾಜದ ನಾಲ್ಕನೇಯ ಅಂಗವಾಗಿ ಮಾಧ್ಯದಮ ಮಿತ್ರರು

ಇದರೊಂದಿಗೆ ತಾವು ಕೂಡಾ ಸಮಾಜದಲ್ಲಿ ಮುಖ್ಯ ಎಂಬೊದನ್ನು ತಮ್ಮ ಕಾರ್ಯ ದೊಂದಿಗೆ ಈ ಒಂದು ಮಾನವೀಯತೆಯನ್ನು ಕಾರ್ಯವನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.